ಈ ನಾಯಿ ಜೋಳದ ಬೆಳೆಯನ್ನು ಕಟಾವು ಮಾಡುತ್ತದೆ: ಕಟಾವು ಮಾಡಲು ಅದು ಅನುಸರಿಸುವ ಕ್ರಮ ಬೆರಗುಂಟುಮಾಡುತ್ತದೆ | ವೀಕ್ಷಿಸಿ

“ನಾಯಿಗಳು ಮನುಷ್ಯನ ಉತ್ತಮ ಸ್ನೇಹಿತರು ಎಂಬುದು ನಿಜವೆಂದು ಸಾಬೀತಾಗಿದೆ. ಸಾಮಾಜಿಕ ಮಾಧ್ಯಮವು ನಾಯಿಗಳು ತಮ್ಮನ್ನು ಸಾಕಿದವರಿಗೆ ಸಹಾಯ ಮಾಡುವ ಅಥವಾ ಮುದ್ದಾಡುವ ಬಹಳಷ್ಟು ವೀಡಿಯೊಗಳು ಕಂಡುಬರುತ್ತವೆ. ಆದರೆ ಅಪರೂಪದ ಒಂದು ವೀಡಿಯೊದಲ್ಲಿ ತನ್ನ ರೈತ ಮಾಲೀಕನಿಗೆ ಬೆಳೆ ಕತ್ತರಿಸಲು ಸಹಾಯ ಮಾಡಿದ್ದು ವೈರಲ್ ಆಗಿದೆ.
ಈ ಬಾರಿ ಇಡೀ ಜಮೀನನ್ನು ಕೊಯ್ಲು ಮಾಡುವ ಗುತ್ತಿಗೆಯನ್ನು ಈ ವ್ಯಕ್ತಿಗೆ ನೀಡಲಾಗಿದೆ” ಎಂದು ಹಿಂದಿಯಲ್ಲಿ ಶೀರ್ಷಿಕೆ ಬರೆಯಲಾಗಿದೆ. ಶ್ವಾನಗಳು ಜೋಳದ ಜಮೀನಿನಲ್ಲಿ ಇರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ.30 ಸೆಕೆಂಡ್‌ಗಳ ದೃಶ್ಯಾವಳಿಯು ನಾಯಿ ತನ್ನ ಮಾಲೀಕನ ಹೊಲದಲ್ಲಿ ಬೆಳೆಗಳನ್ನು ಕೊಯ್ಲು ಮಾಡಲು ಸಹಾಯ ಮಾಡುವುದನ್ನು ತೋರಿಸಿದೆ.

ಶ್ವಾನ ಒಂದೊಂದೇ ಸಸಿಯನ್ನು ಕಚ್ಚಿ ನೆಲಕ್ಕುರುಳಿಸುತ್ತಾ ಕಟಾವು ಮಾಡುವ ದೃಶ್ಯವನ್ನು ನೋಡುವಾಗಲೇ ಅಚ್ಚರಿ ಮೂಡುತ್ತದೆ. ನಾಯಿಯು ಸರಿಯಾದ ಕ್ರಮವನ್ನು ಅನುಸರಿಸುತ್ತದೆ ಮತ್ತು ಅದರ ಕೆಲಸವನ್ನು ಮಾಡುವಾಗ ಬೆಳೆ ಹಾಳಾಗದಂತೆ ಎಚ್ಚರಿಕೆ ವಹಿಸುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಳೆಯನ್ನು ಅದು ಸರಿಯಾಗಿ ಕೊಯ್ಲು ಮಾಡಿದೆ ಮತ್ತು ಯಾವುದೇ ಭಾಗವು ಮಣ್ಣಿನಲ್ಲಿ ಉಳಿಯುವುದಿಲ್ಲ ಎಂದು ನಾಯಿ ಖಚಿತಪಡಿಸಿಕೊಳ್ಳುತ್ತದೆ.
ಇದಲ್ಲದೆ, ಒಂದು ನಾಯಿಯು ತನ್ನ ಕೆಲಸವನ್ನು ಮಾಡುತ್ತಿರುವಾಗ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತ ಪರಿಶೀಲಿಸುವ “ತಪಾಸಣಾ ಕರ್ತವ್ಯ” ಮಾಡುವ ಇನ್ನೊಂದು ನಾಯಿಯೂ ಕ್ಲಿಪ್‌ನಲ್ಲಿ ಕಂಡುಬರುತ್ತದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಅಕ್ಟೋಬರ್ 18 ರಂದು ಪೋಸ್ಟ್ ಮಾಡಿದ ನಂತರ, ವೀಡಿಯೊ ವೈರಲ್ ಆಗಿದ್ದು, ಈ ದೃಶ್ಯವನ್ನು ಕಂಡ ಬಹುತೇಕರು ಅಚ್ಚರಿಪಟ್ಟಿದ್ದಾರೆ. 1.46 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಇದಲ್ಲದೆ, ಲೈಕ್‌ಗಳ ಸಂಖ್ಯೆ 5,000 ದಾಟಿದೆ ಮತ್ತು ಸಂಖ್ಯೆಗಳು ಹೆಚ್ಚಾಗುತ್ತಲೇ ಇವೆ. ಅಸಂಖ್ಯಾತ ಜನರು ವೀಡಿಯೊಕ್ಕೆ ನಗು ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ನಾಯಿಯನ್ನು “ವರ್ಷದ ಉದ್ಯೋಗಿ” ಎಂದು ಕರೆದಿದ್ದಾರೆ.
ಬಳಕೆದಾರರೊಬ್ಬರು ನಾಯಿಯನ್ನು ‘ಬಾಹುಬಲಿ’ ಎಂದು ಕರೆದಿದ್ದಾರೆ. ಮತ್ತು “ಬಾಹುಬಲಿ ಹೊಲದಲ್ಲಿನ ಎಲ್ಲಾ ಬೆಳೆಗಳನ್ನು ಕತ್ತರಿಸಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement