ಕೊರೊನಾ ವೈರಸ್ ಹರಡಿದ್ದು ಯಾವುದರಿಂದ..? ಸೋರಿಕೆಯಾದ ಡಬ್ಲ್ಯುಎಚ್‌ಒ-ಚೀನಾ ಜಂಟಿ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ..!

ಕೋವಿಡ್ -19 ರ ಮೂಲದ ಕುರಿತಾದ ಜಂಟಿ ಡಬ್ಲ್ಯುಎಚ್‌ಒ-ಚೀನಾ ಜಂಟಿ ಅಧ್ಯಯನವು ಬಾವಲಿಗಳಿಂದ ಮತ್ತೊಂದು ಪ್ರಾಣಿಗಳ ಮೂಲಕ ಮನುಷ್ಯರಿಗೆ ವೈರಸ್‌ ಹರಡಿರುವುದು ಬಹುಪಾಲು ಖಚಿತವಾಗಿದೆ. ಪ್ರಯೋಗಾಲಯದಿಂದ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ವರದಿ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಸೋರಿಕೆಯಾದ ಅಧ್ಯಯನ ವರದಿ ಉಲ್ಲೇಖಿಸಿ ಪತ್ರಿಕೆ ಈ ವರದಿ ಮಾಡಿದೆ. ಆವಿಷ್ಕಾರಗಳು ಹೆಚ್ಚಾಗಿ ನಿರೀಕ್ಷೆಯಂತೆ ಇದ್ದವು ಮತ್ತು ಅನೇಕ ಪ್ರಶ್ನೆಗಳಿಗೆ ಇದರಲ್ಲಿ ಉತ್ತರಿಸಲಾಗಿಲ್ಲ. ಪ್ರಯೋಗಾಲಯದಿಂದ ವೈರಸ್‌ ಸೋರಿಕೆ ವರದಿ ಹೊರತುಪಡಿಸಿ ಪ್ರತಿಯೊಂದು ಏರಿಯಾದಲ್ಲಿಯೂ ಹೆಚ್ಚಿನ ಸಂಶೋಧನೆಗಳ ಬಗ್ಗೆ ಅಧ್ಯಯನ ತಂಡವು ಪ್ರಸ್ತಾಪಿಸಿದೆ.
ವರದಿಯ ಬಿಡುಗಡೆಯು ಪದೇ ಪದೇ ವಿಳಂಬವಾಗುತ್ತಿದೆ, ಚೀನಾದ ಮೇಲೆ ಕೊವಿಡ್‌ ಸಾಂಕ್ರಾಮಿಕ ರೋಗದ ಆರೋಪ ತಡೆಗಟ್ಟಲು ಚೀನಾದ ಕಡೆಯವರು ವರದಿ ಮೇಲೆ ಪ್ರಭಾವ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಕಾರಣವಾಗಿದೆ.
ಕೊರೊನಾ ವೈರಸ್ ಹರಡಿದ ಬಗ್ಗೆ ಸಂಶೋಧಕರು ವಿವರಿಸಿದ್ದಾರೆ. ಕೊರೊನಾ ವೈರಸ್ ಬಾವಲಿಗಳಿಂದ ಮತ್ತೊಂದು ಪ್ರಾಣಿಗೆ ಹರಡಿ ಅಲ್ಲಿಂದ ಅದು ಮನುಷ್ಯರಿಗೆ ಬಂತು ಎಂದು ಅಂತಿಮ ತೀರ್ಮಾನಕ್ಕೆ ಬರಲಾಗುತ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಕೊರೊನಾ ವೈರಸ್ ಬಾವಲಿಗಳಿಂದ ನೇರವಾಗಿ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಪ್ಯಾಂಗೊಲಿನ್‌ಗಳಲ್ಲಿ ಇದೇ ತರಹ ಹೆಚ್ಚು ಹೋಲುವ ವೈರಸ್‌ಗಳು ಕಂಡುಬಂದಿವೆ. ಮಿಂಕ್‌ ಪ್ರಾಣಿ ಮತ್ತು ಬೆಕ್ಕುಗಳು ಕೊರೊನಾ ವೈರಸ್‌ಗೆ ತುತ್ತಾಗುತ್ತವೆ. ಅವುಗಳಿಂದಲೂ ಮನುಷ್ಯರಿಗೆ ವೈರಸ್ ಬಂದಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ತಡವಾಗಿಯಾದರೂ “ಮುಂದಿನ ಕೆಲವು ದಿನಗಳಲ್ಲಿ ಅಧ್ಯಯನ ವರದಿ ಬಿಡುಗಡೆಗೆ ಸಿದ್ಧವಾಗಲಿದೆ ಎಂದು ನಾನು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದರು.
ಡಬ್ಲ್ಯುಎಚ್‌ಒ ಸದಸ್ಯ ರಾಷ್ಟ್ರದ ಜಿನೀವಾ ಮೂಲದ ರಾಜತಾಂತ್ರಿಕರೊಬ್ಬರಿಂದ ಅಸೊಸಿಯೇಟೆಡ್‌ ಪ್ರೆಸ್‌ ಪಡೆದುಕೊಂಡ ಅಂತಿಮ ಆವೃತ್ತಿಯಂತೆ ಕಾಣುವ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲು ಇನ್ನೂ ಬದಲಾಯಿಸಬಹುದೇ ಎಂದು ಸ್ಪಷ್ಟವಾಗಿಲ್ಲ. ರಾಜತಾಂತ್ರಿಕರು ತಮ್ಮ ಹೆಸರನ್ನು ಹೇಳಲು ಇಚ್ಛಿಸಲಿಲ್ಲ. ಯಾಕೆಂದರೆ ಇದನ್ನು ಪ್ರಕಟಣೆಗೆ ಮುಂಚಿತವಾಗಿ ತಮಗೆ ಬಿಡುಗಡೆ ಮಾಡಲು ಅಧಿಕಾರವಿಲ್ಲ ಎಂದು ಹೇಳಿದ್ದಾರೆ ಎಂದು ಅಸೊಸಿಯೇಟೆಡ್‌ ಪ್ರೆಸ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement