ಕರ್ನಾಟಕದಲ್ಲಿ ಸೋಮವಾರ ಸಾವಿರಕ್ಕಿಂತ ಕಡಿಮೆ ವರದಿಯಾದ ಹೊಸ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ (ಸೋಮವಾರ) 973 ಕೋವಿಡ್ ಪಾಸಿಟಿವ್ ಸೋಂಕು ದೃಡವಾಗಿದೆ.
ಇದೇ ವೇಳೆ 17 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
24 ಗಂಟೆಯಲ್ಲಿ 1071 ಜನ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 0.69% ರಷ್ಟು ಇದೆ. ಒಟ್ಟು 17,386 ಸಕ್ರಿಯ ಪ್ರಕರಣಗಳು ಇದೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಹೊಸದಾಗಿ 243 ಜನರಿಗೆ ಸೋಂಕು ಧೃಡವಾಗಿದ್ದು, , 8 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 260 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 7180 ಸಕ್ರಿಯ ಪ್ರಕರಣಗಳಿವೆ.
ಉಳಿದಂತೆ ದಕ್ಷಿಣ ಕನ್ನಡ-258 , ಮೈಸೂರು-78 , ಉಡುಪಿ – 53 ಪ್ರಕರಣಗಳು ವರದಿಯಾಗಿವೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೊಡಲಾಗಿದೆ.

06-09-2021 HMB Kannada (1)

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement