ಜೂನ್ 1ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಕಡ್ಡಾಯ ಮಾಡಿದ ಬಿಐಎಸ್

ನವ ದೆಹಲಿ : ಮಹತ್ವದ ಬೆಳವಣಿಗೆಯಲ್ಲಿ 2021ರ ಜೂನ್ 1ರಿಂದ ಅನ್ವಯವಾಗುವಂತೆ ಚಿನ್ನಾಭರಣ ಮತ್ತು ಕರಕುಶಲ ವಸ್ತುಗಳನ್ನು ಕಡ್ಡಾಯವಾಗಿ ಗುರುತಿಸುವಂ ಹಾಲ್ ಮಾರ್ಕಿಂಗ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕಡ್ಡಾಯಗೊಳಿಸಿ ಆದೇಶಿಸಿದೆ.
ಈ ಕುರಿತು ಪ್ರಕನೆ ನೀಡಿರುವಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್), ಜೂನ್ 1, 2021ರಿಂದ, ಚಿನ್ನಾಭರಣಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಎಲ್ಲಾ ಆಭರಣ ವ್ಯಾಪಾರಿಗಳು ಕಡ್ಡಾಯವಾಗಿ ಬಿಐಎಸ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೇವಲ 14, L8 ಮತ್ತು 22 ಕ್ಯಾರೆಟ್ ಚಿನ್ನದ ಮೂರು ದರ್ಜೆಗಳಲ್ಲಿ ಕೇವಲ ಹಾಲ್ ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಆರ್ಟಿಫಿಕೇಷನ್ ಗಳನ್ನು ಮಾತ್ರ ಮಾರಾಟ ಮಾಡುವುದು ಕಡ್ಡಾಯ’ ಎಂದು ತಿಳಿಸಿದೆ.
ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.
ಬಿಐಎಸ್ ಹಾಲ್ ಮಾರ್ಕಿಂಗ್ ಯೋಜನೆಯು ಆಭರಣ ಮಾರಾಟಗಾರರಿಗೆ ನೋಂದಣಿ ಮತ್ತು ಹಾಲ್ ಮಾರ್ಕಿಂಗ್ (A&H) ಮಾನ್ಯತೆ ಒಳಗೊಂಡಿರುತ್ತದೆ.ಆಭರಣಗಳ ನೋಂದಣಿ ಸರಳಗೊಳಿಸಲಾಗಿದೆ. ಇಡೀ ಪ್ರಕ್ರಿಯೆ ಹಸ್ತಕ್ಷೇಪವಿಲ್ಲದೆ ಆನ್ ಲೈನ್ ಆಗಿದೆ ಎಂದು ಅದು ತಿಳಿಸಿದೆ.
ಆಭರಣ ಮಾಲೀಕರು ಇ-ಬಿಐಎಸ್ ಪೋರ್ಟಲ್ www.manakonline.in ಮೂಲಕ ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಆನ್ ಲೈನ್ ನಲ್ಲಿ ಅಗತ್ಯ ಶುಲ್ಕ ಪಾವತಿಸಬೇಕು. ಆಗ ತಕ್ಷಣ ನೋಂದಣಿ ಮಾಡಲಾಗುತ್ತದೆ ಎಂದು ತಿಳಿಸಿದೆ.
ನೋಂದಣಿ ಶುಲ್ಕ ಕನಿಷ್ಠ ಇಡಲಾಗಿದ್ದು, 5 ಕೋಟಿಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಆಭರಣ ವರ್ತಕರಿಗೆ ಕೇವಲ 7,500 ರೂ., 5 ರಿಂದ 25 ಕೋಟಿ ವಹಿವಾಟು ನಡೆಸಲು 15,000 ರೂ., 25ರಿಂದ 100 ಕೋಟಿ ಗಿಂತ ಮೇಲ್ಪಟ್ಟ ವಹಿವಾಟು ದಾರರಿಗೆ 40 ಸಾವಿರ ರೂ., 100 ಕೋಟಿಗೂ ಹೆಚ್ಚು ವಹಿವಾಟು ನಡೆಸಲು 80,000 ರೂ.ಗಳ ಶುಲ್ಕ ವಿಧಿಸಲಾಗಿದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement