ಶಿರಸಿ : ಜಾಗದ ವಿಷಯವೊಂದಕ್ಕೆ ಸಂಬಂಧಿಸಿದಂತೆ ₹3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ, ಶಿರಸಿ ನಗರಸಭೆಯ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಮತ್ತು ನಗರಸಭೆಯ ಕಂದಾಯ ಅಧಿಕಾರಿ ಆರ್. ಎಂ. ವರ್ಣೇಕರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರಸಭೆಯ ಕಂದಾಯ ಅಧಿಕಾರಿ ಆರ್ ಎಂ.ವೆರ್ಣೇಕರ ಹಾಗೂ ಸದಸ್ಯ ಗಣಪತಿ ನಾಯ್ಕ ದೂರುದಾರರಾದ ರಮೇಶ ಹೆಗಡೆ ಎನ್ನುವವರಿಂದ ₹3 ಲಕ್ಷ ಲಂಚ ಪಡೆಯುತ್ತಿದ್ದರು ಎಂದು ಲೋಕಾಯುಕ್ತ ಎಸ್ಪಿ ಕುಮಾರಚಂದ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ಶಿರಸಿಯ ಟಿ.ಎಸ್.ಎಸ್. ಹತ್ತಿರದ ಜಿಯೋ ಕಚೇರಿ ಬಳಿ ನಡೆದ ಈ ಕಾರ್ಯಾಚರಣೆಯಲ್ಲಿ, ರಮೇಶ ಹೆಗಡೆ ಎಂಬವರಿಂದ ಲಂಚ ಪಡೆಯುತ್ತಿದ್ದಾಗ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ೫೦ ವರ್ಷಗಳ ಅವಧಿಯ ಲೀಸ್ ಆಸ್ತಿ ಪ್ರಕರಣ ಸದ್ಯ ಹೈಕೋರ್ಟಿನಲ್ಲಿ ಧಾರವಾಡ ಪೀಠದಲ್ಲಿ ನಡೆಯುತ್ತಿದ್ದು ಅಕ್ರಮವಾಗಿ ಅರ್ಜಿದಾರನ ಪರವಾಗಿ ಮಾಡಿಕೊಡುವುದಕ್ಕೆ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು. ಲೋಕಾಯುಕ್ತ ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ಮತ್ತಿತರರು ಇದ್ದರು.


ನಿಮ್ಮ ಕಾಮೆಂಟ್ ಬರೆಯಿರಿ