ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಸೇನಾ ಮೈತ್ರಿ ಊಹಾಪೋಹಕ್ಕೆ ಕಾರಣವಾದ ಸಿಎಂ ಠಾಕ್ರೆ ಹೇಳಿಕೆ

ಮುಂಬೈ:ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ಮುರಿದುಬಿದ್ದ ಬಿಜೆಪಿ ಹಾಗೂ ಶಿವಸೇನೆ ನಡುವಿನ ಮೈತ್ರಿ ಮತ್ತೆ ಆಗುವುದೇ..?
ಔರಾಂಗಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರೌಸಾಹೇಬ್​​ ದನ್ವೆ ಸೇರಿದಂತೆ ಹಲವು ನಾಯಕರನ್ನು ಭವಿಷ್ಯದ ಸಹೋದ್ಯೋಗಿಗಳು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಂಬೋಧನೆ ಮಾಡುರುವುದೇ ಈ ಊಹಾಪೋಹಕ್ಕೆ ಕಾರಣವಾಗಿದೆ.
ನನ್ನ ಹಿಂದಿನ, ಈಗಿನ ಹಾಗೂ ಮತ್ತೆ ನಾವು ಒಂದಾದರೆ ಭವಿಷ್ಯದ ಸಹೋದ್ಯೋಗಿಗಳೇ ಎಂದು ಕಾರ್ಯಕ್ರಮದಲ್ಲಿ ಉದ್ಧವ್​ ಠಾಕ್ರೆ ಸಂಬೋಧಿಸಿದ್ದಾರೆ.
ಮರಾಠಾವಾಡಾ ಮುಕ್ತಿ ಸಂಗ್ರಾಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ ‘ಒಂದು ವೇಳೆ ನಾವು ಒಂದಾದರೆ (ಬಿಜೆಪಿ-ಶಿವಸೇನಾ ಮೈತ್ರಿ ಆದಲ್ಲಿ), ಇಲ್ಲಿರುವ ನನ್ನ ಮಾಜಿ ಸಹೋದ್ಯೋಗಿ ಮುಂದಿನ ದಿನಗಳಲ್ಲಿ ಮತ್ತೆ ಸಹೋದ್ಯೋಗಿ ಆಗುತ್ತಾರೆ’ ಎಂದು ಮುಗುಳ್ನಗೆಯಿಂದಲೇ ಹೇಳಿದರು.
ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಮುಖ್ಯಸ್ಥರೂ ಆಗಿರುವ ಠಾಕ್ರೆ ಅವರು ರಾಜ್ಯದ ಕಂದಾಯ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಬಾಳಾಸಾಹೇಬ್ ಥೋರಟ್ ಹಾಗೂ ಮಹಾರಾಷ್ಟ್ರ ಬಿಜೆಪಿ ನಾಯಕ ದನ್ವೆ ಸಮ್ಮುಖದಲ್ಲೇ ಹೀಗೆ ಹೇಳಿದ್ದಾರೆ.
ಅವರ ಸಮ್ಮುಖದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.
ಬಳಿಕ ಮಾಧ್ಯಮದ ಎದುರು ಮಾತನಾಡುವ ವೇಳೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಠಾಕ್ರೆ, ಹಿಂದಿನ ಹಾಗೂ ಪ್ರಸ್ತುತ ಸಹೋದ್ಯೋಗಿಗಳು ಅಲ್ಲಿ ಇದ್ದುದರಿಂದ ತಾವು ಈ ರೀತಿ ಹೇಳಿದ್ದಾಗಿ ಸಮಜಾಯಿಷಿ ನೀಡಿದ್ದಾರೆ.
ಎಲ್ಲರೂ ಒಗ್ಗೂಡಿದರೆ, ಅವರು ಸಹ ಭವಿಷ್ಯದ ಸಹೋದ್ಯೋಗಿಗಳಾಗಬಹುದು. ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಸುದ್ದಿ ವಾಹಿನಿ ಜೊತೆ ಮಾತನಾಡಿದ ಧನ್ವೆ, ಎರಡೂ ಪಕ್ಷಗಳ ಸಿದ್ಧಾಂತಗಳು ಒಂದೇ ಆಗಿದ್ದು, ಸೇನಾ ಜೊತೆ ಮೈತ್ರಿಗೆ ಬಿಜೆಪಿ ಯಾವಾಗಲೂ ಉತ್ಸುಕವಾಗಿದೆ ಎಂದಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement