ನಾಯಕತ್ವದ ವಿಚಾರದಲ್ಲಿ ವಿರಾಟ್ ಕೊಹ್ಲಿ ಸುಳ್ಳು ಹೇಳಿದ್ರು…ಕೆಲ ಆಟಗಾರರು ಚುಚ್ಚುಮದ್ದು ತೆಗೆದುಕೊಳ್ತಾರೆ : ಸ್ಟಿಂಗ್ ವೀಡಿಯೊದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಿಂದ ಬಹಿರಂಗ

ನವದೆಹಲಿ: ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಝೀ ನ್ಯೂಸ್ ಚಾನೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮಂಗಳವಾರ ವರ್ಗೀಕೃತ ಆಯ್ಕೆ ವಿಷಯಗಳನ್ನು ಬಹಿರಂಗಪಡಿಸಿದ ನಂತರ ವಿವಾದಕ್ಕೆ ಸಿಲುಕಿದ್ದಾರೆ.
ಚೇತನ ಶರ್ಮಾ ಅವರು, ಕುಟುಕು ಕಾರ್ಯಾಚರಣೆಯ ವೇಳೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ಬಗ್ಗೆಯೂ ಮಾತನಾಡಿದ್ದಾರೆ. ಝೀ ನ್ಯೂಸ್ ನಡೆಸಿದ ಕುಟುಕು ಸಂದರ್ಭದಲ್ಲಿ ಶರ್ಮಾ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗಿನ ಆಂತರಿಕ ಚರ್ಚೆಗಳನ್ನು ಬಹಿರಂಗಪಡಿಸಿದ್ದಾರೆ.
80 ರಿಂದ 85 ರಷ್ಟು ಫಿಟ್ ಆಗಿದ್ದರೂ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಬಹಳಷ್ಟು ಆಟಗಾರರು ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಶರ್ಮಾ ಆರೋಪಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ 20 ಐ ಸರಣಿಗಾಗಿ ಬುಮ್ರಾ ಗಾಯದಿಂದಾಗಿ ಹೊರಗುಳಿದ ಬಗ್ಗೆ ಅವರ ಮತ್ತು ತಂಡದ ಮ್ಯಾನೇಜ್‌ಮೆಂಟ್ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಶರ್ಮಾ ಹೇಳಿದ್ದಾರೆ.
ಅಖಿಲ ಭಾರತ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಭಾರತದ ಮಾಜಿ ವೇಗಿ ಚೇತನ್ ಶರ್ಮಾ ಅವರು ಕುಟುಕು ಕಾರ್ಯಾಚರಣೆಯಲ್ಲಿ ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಮಾಜಿ ನಾಯಕ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಅಹಂಕಾರದ ಜಗಳವಿತ್ತು ಎಂದು ಶರ್ಮಾ ಹೇಳಿದ್ದಾರೆ.
ವಿರಾಟ್ ಕ್ರಿಕೆಟ್‌ಗಿಂತ ತನ್ನನ್ನು ತಾನು ದೊಡ್ಡವ ಎಂದು ಪರಿಗಣಿಸಲು ಪ್ರಾರಂಭಿಸಿದರು, ಮತ್ತು ಅದು ಬಿಸಿಸಿಐಗೆ ಸರಿ ಬರಲಿಲ್ಲ. ನಂತರ 2021 ರಲ್ಲಿ ಅವರ ಕಳಪೆ ಫಾರ್ಮ್‌ನ ಸಂದರ್ಭದಲ್ಲಿ ಅವರನ್ನು ಟೆಸ್ಟ್‌ ಹಾಗೂ ಏಕದಿನ ಪಂದ್ಯದ ನಾಯಕತ್ವ ಸ್ಥಾನದಿಂದ ತೆಗೆದು ಹಾಕಲಾಯಿತು ಎಂದು ಚೇತನ ಶರ್ಮಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ICC ಪುರುಷರ T20 ಏಷ್ಯಾಕಪ್ 2021ರ ಮುಕ್ತಾಯದ ನಂತರ ವಿರಾಟ್ T20I ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದರು ಆದರೆ ಭಾರತದ ಏಕದಿನ ಮತ್ತು ಟೆಸ್ಟ್ ನಾಯಕನಾಗಿ ಉಳಿಯಲು ಉತ್ಸುಕರಾಗಿದ್ದರು, ಆದರೆ ಅವರನ್ನು ಡಿಸೆಂಬರ್ 2021 ರಲ್ಲಿ ಏಕದಿನದ ಪಂದ್ಯದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಯಿತು. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರ ಪ್ರಕಾರ, ಬಿಸಿಸಿಐ ನಿರ್ಧಾರದಿಂದ ವಿರಾಟ್‌ನಿಂದ ಸಂತೋಷವಾಗಿರಲಿಲ್ಲ, ಏಕೆಂದರೆ ವಿರಾಟ್‌ ಆಟಕ್ಕಿಂತ ತನ್ನನ್ನು ತಾನು ದೊಡ್ಡವನೆಂದು ಪರಿಗಣಿಸಲು ಪ್ರಾರಂಭಿಸಿದ್ದರು ಎಂದು ಹೇಳಿದ್ದಾರೆ.
“ಜಬ್ ಪ್ಲೇಯರ್ ಥೋಡಾ ಬಡಾ ಹೋ ಜಾಯೇ ತೋ ಉಸ್ಕೊ ಲಗ್ತಾ ಹೈ ಕಿ ವೋ ಬಹುತ್ ಬಡಾ ಹೋ ಗಯಾ, ಬೋರ್ಡ್ ಸೆ ಭೀ ಬಡಾ ಹೋ ಗಯಾ . ಕಭಿ ಹುವಾ ಹೈ? ಬಡೇ ಬಡೇ ಆಯೇ, ಬಡೇ ಬಡೇ ಗಯೇ, ಕ್ರಿಕೆಟ್ ತೋ ವಹೀ ಕಾ ವಹೀ ರೆಹತಾ ಹೈ. ತೋ ವೋ ಉಸ್ನೆ ಉಸ್ ಸಮಯ ಹಿಟ್ ಮಾರ್ನೇ ಕಿ ಕೋಶಿಶ್ ಕರಿ ಅಧ್ಯಕ್ಷ ಕೋ (ಆಟಗಾರನು ಎತ್ತರಕ್ಕೆ ಬೆಳೆದಾಗ, ಆತ ತಾನು ತುಂಬಾ ದೊಡ್ಡವನಾಗಿ ಬೆಳೆದಿದ್ದೇನೆ ಎಂದು ಯೋಚಿಸಲು ಪ್ರಾರಂಭಿಸುತ್ತಾನೆ, ಬೋರ್ಡ್‌ಗಿಂತಲೂ ದೊಡ್ಡವನಾಗಿ. ಆದರೆ ಅದು ಎಂದಾದರೂ ನಡೆದಿದೆಯೇ? ಅನೇಕ ದೊಡ್ಡ ಆಟಗಾರರು ಬಂದು ಹೋದರು, ಆದರೆ ಕ್ರಿಕೆಟ್ ಹಾಗೆಯೇ ಇದೆ. ಆತ (ವಿರಾಟ್‌ ಕೊಹ್ಲಿ) ಆಗಿನ ಬಿಸಿಸಿಐ ಅಧ್ಯಕ್ಷರನ್ನು (ಸೌರವ್‌ ಗಂಗೂಲಿ) ಎದುರಿಸಲು ಬಯಸಿದ್ದರು ಎಂದು ಶರ್ಮಾ ಅವರು ಅಂತರ್ಜಾಲದಲ್ಲಿ ವೈರಲ್ ಆಗಿರುವ ಕುಟುಕು ವೀಡಿಯೊದಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

ಶರ್ಮಾ ಪ್ರಕಾರ, ಟಿ 20 ನಾಯಕತ್ವವನ್ನು ತೊರೆಯುವ ಮೊದಲು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವಿರಾಟ್ ಕೊಹ್ಲಿಗೆ “ಒಮ್ಮೆ ಯೋಚಿಸಿ” ಎಂದು ವಿನಂತಿಸಿದ್ದರು. ಆದರೆ ವಿರಾಟ್‌ ಮಾಧ್ಯಮಗಳಿಗೆ ಅಂತಹ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಸುಳ್ಳು ಹೇಳಿದರು. ಆಯ್ಕೆ ಸಭೆಯಲ್ಲಿ ನಾನೂ ಇದ್ದೆ. ಟಿ20 ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮರು ಯೋಚಿಸುವಂತೆ ಕೊಹ್ಲಿಗೆ ಬಿಸಿಸಿಐ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದರು. ನಾವೆಲ್ಲರೂ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿದ್ದೆವು. ಆದರೆ ಮಂಡಳಿಯಲ್ಲಿ ಯಾರಿಂದಲೂ ಅಂತಹ ಸಲಹೆ ಬಂದಿಲ್ಲ ಎಂದು ಕೊಹ್ಲಿ ಮಾಧ್ಯಮದ ಮುಂದೆ ಸುಳ್ಳು ಹೇಳಿದರು ಎಂದು ಶರ್ಮಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಜತೆಗಿನ ಗೌಪ್ಯ ಸಭೆಯ ಬಗ್ಗೆ ಮಾಧ್ಯಮದ ಮುಂದೆ ಚರ್ಚಿಸಿ ಕೊಹ್ಲಿ ತಪ್ಪು ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯ್ಕೆ ಸಮಿತಿಯಲ್ಲಿ ಏನಾಯಿತು ಎಂಬ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸಿದರು ಎಂದು ಶರ್ಮಾ ಹೇಳಿದ್ದಾರೆ.
ರಾಷ್ಟ್ರೀಯ ಆಯ್ಕೆದಾರರು ಒಪ್ಪಂದಕ್ಕೆ ಬದ್ಧರಾಗಿರುವುದರಿಂದ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಬಿಸಿಸಿಐ ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement