ಜುಲೈ5ರಿಂದ ಕರ್ನಾಟಕ ಅನ್ಲಾಕ್ 3.0: ದೇವಸ್ಥಾನ, ಮಾಲ್‌ ತೆರೆಯಲು ಅನುಮತಿ..ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಜುಲೈ 5ರಿಂದ 19ರ ವರೆಗೆ ಕರ್ನಾಟಕ ಅನ್ಲಾಕ್ 3.0  ರಾಜ್ಯದಲ್ಲಿ ಜಾರಿ ಮಾಡಲಾಗಿದ್ದು  ವಾರಾಂತ್ಯ ಕರ್ಫ್ಯೂವನ್ನು (Weekend Curfew) ತೆಗೆದು ಹಾಕಲಾಗಿದೆ.
ಕರ್ನಾಟಕದಲ್ಲಿ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಕುರಿತು ಅಧಿಕಾರಿಗಳು, ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ, ರಾಜ್ಯದಲ್ಲಿ ಪ್ರತಿದಿನ ವಿಧಿಸಿದ್ದ ನೈಟ್​ ಕರ್ಫ್ಯೂಯ ಅವಧಿ ಕಡಿತ ಮಾಡಿರುವುದಾಗಿ ತಿಳಿಸಿದರು. ಇದೇ ವೇಳೆ ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ 100 ಜನರಿಗೆ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ಅಂತ್ಯ ಸಂಸ್ಕಾರಕ್ಕೆ 20 ಜನರು ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ.

ಮೂರನೇ ಹಂತದ ಅನ್​ಲಾಕ್​ ವೇಳೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಸೋಮವಾರ ಬೆಳಗ್ಗೆ 5ಗಂಟೆಯಿಂದ ಜುಲೈ 19ರ ವರೆಗೆ ಈ ನಿಯಮಗಳು ಜಾರಿಯಲ್ಲಿರಲಿದೆ. ಕೊಡಗಿನಲ್ಲಿ ಸೋಂಕು ಇಳಿಕೆಯಾಗದ ಹಿನ್ನಲೆ ಅಲ್ಲಿ ಪರಿಸ್ಥಿತಿ ಸುಧಾರಣೆ ನಂತರ ಅಲ್ಲಿನ ಜಿಲ್ಲಾಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಯಾವ ಯಾವ ಜಿಲ್ಲೆ ಗಳಲ್ಲಿ ಸಮಸ್ಯೆ ಇದೆಯೋ, ಆ ಜಿಲ್ಲೆಗಳು ಸುಧಾರಣೆ ಆಗಿ ಅನ್ ಲಾಕ್ ತೀರ್ಮಾನ ಮಾಡುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳ ವಿವೇಚನೆ ಗೆ ಬಿಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ಮೇಲಿನ ನಿರ್ಬಂಧಗಳು ಜುಲೈ 5ರಿಂದ ಎರಡು ವಾರಗಳವರೆಗೆ ಜಾರಿಯಲ್ಲಿವೆ. ಎಲ್ಲ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಖಾಸಗಿ ಕಚೇರಿಗಳು ಕೋವಿಡ್‌-19 ಅನುಮೋದಿತ ನಡವಳಿಕೆಯನ್ನು ಜಾರಿಗೊಳಿಸಬೇಕು. ಜನರು ಸಹಕರಿಸುವಂತೆ ನಾವು ವಿನಂತಿಸುತ್ತೇವೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಈ ಮಾರ್ಗಸೂಚಿಗಳನ್ನು ಮುಂದುವರೆಸಲು ಕರೆ ನೀಡುತ್ತೇವೆ ”ಎಂದು ಯಡಿಯೂರಪ್ಪ ಹೇಳಿದರು.

ಯಾವುದಕ್ಕೆ ಸಡಿಲಿಕೆ..?

* ಸರ್ಕಾರಿ/ಖಾಸಗಿ ಕಚೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ.

*ರಾತ್ರಿ 9 ರವರೆಗೆ ರೆಸ್ಟೋರೆಂಟ್‌ಗಳು ತೆರೆದಿರಬಹುದು

* ಮೆಟ್ರೋ, ಬಸ್‌ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ

. 100 ಪ್ರಮಾಣಿಕರೊಂದಿಗೆ ಸಂಚರಿಸಲು ಅವಕಾಶ.

* ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ.

*ಮಾಲ್​ಗಳನ್ನು ತೆರೆಯಲು ಅವಕಾಶ

*ಮದುವೆ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ.

* ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅನುಮತಿ

* ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಮಾತ್ರ ಅವಕಾಶ.

*ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅನುಮತಿ.

* ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9ರಿಂದ ಬೆಳಿಗ್ಗೆ 5ರ ವರೆಗೆ ಜಾರಿ

* ವಾರಾಂತ್ಯದ ಕರ್ಫ್ಯೂ ಇಲ್ಲ.

*ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

*ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕ ಸಭೆಯಲ್ಲಿ ತೀರ್ಮಾನ, ಈಗ ಅವಕಾಶವಿಲ್ಲ

* ಬಾರ್​ಗಳು ಕಾರ್ಯನಿರ್ವಹಿಸಲು ಅವಕಾಶ, ಆದರೆ ಪಬ್​ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ.

*ಬಾರ್‌ಗಳಲ್ಲಿಯೂ ರಾತ್ರಿ 9ರ ಮದ್ಯ ನೀಡಲು ಅವಕಾಶ

*ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.

**ಪ್ರತಿರಾತ್ರಿ 9 ರಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿ

ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು. ಈಗ ಜಾರಿಯಲ್ಲಿರುವ ಮಾರ್ಗಸೂಚಿ ಯನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪಾಲನೆ ಮಾಡದೆ ಮತ್ತೆ ಸೋಂಕು ಹೆಚ್ಚಾದ್ರೆ, ಈ ನಿಯಮಗಳನ್ನು ಅನಿವಾರ್ಯ ವಾಗಿ ನಿಲ್ಲಿಸಲಾಗುವುದು. ಒಂದು ವೇಳೆ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡಿ,ಸೋಂಕು ಕಡಿಮೆ ಮಾಡಲು ಸಹಕಾರಿಸಬೇಕು ಎಂದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement