ಅಟ್ಲಾಂಟಿಕ್ ಮಹಾಸಾಗರ ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ಈಜುತ್ತಿರುವವರು ಮತ್ತು ಸೂರ್ಯ ಸ್ನಾನ (sun bathers) ಮಾಡುತ್ತಿರುವ ಮಧ್ಯೆಯೇ ಮೂವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಶನಿವಾರ ಪತನಗೊಂಡಿದೆ. ಈ ಬಗ್ಗೆ ಫೆಡರಲ್ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಈ ದೃಶಯ ವಿಡಿಯೊದಲ್ಲಿ ರಾಬಿನ್ಸನ್ R44 ಹೆಲಿಕಾಪ್ಟರ್ ಸ್ಥಳೀಯ ಸಮಯ ಮಧ್ಯಾಹ್ನ 1:20 ಕ್ಕೆ ಕಿಕ್ಕಿರಿದ ಕಡಲತೀರದ ಸಮೀಪ ಸಾಗರದಲ್ಲಿ ಪತನಗೊಂಡಿರುವುದನ್ನು ತೋರಿಸಿದೆ. ಅಪಘಾತದ ಕಾರಣವನ್ನು ರಾಷ್ಟ್ರೀಯ
ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ಸಂಸ್ಥೆ ತನಿಖೆ ನಡೆಸುತ್ತಿದೆ.
ಇಬ್ಬರು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ “ಸ್ಥಿರ ಸ್ಥಿತಿಯಲ್ಲಿ” ಸಾಗಿಸಲಾಗಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ