ಕುಮಟಾ; ತೌಕ್ಟೆ ಚಂಡಮಾರುತದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವನ್ನಳ್ಳಿ ಸೇರಿದಂತೆ ಕೆಲ ಪ್ರದೇಶದಲ್ಲಿ ೧೩ ಮನೆಗಳು ಕುಸಿದಿದ್ದು ೩೨ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.೧೧೨ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ.
ಚಂಡಮಾರುತದಿಂದ ಸಮುದ್ರದ ಅಲೆ ಉಕ್ಕಿ ತಾಲೂಕಿನ ಮಾಣಿಕಟ್ಟಾ, ಹಣ್ಣೆಮಠ, ಮದ್ಗುಣಿ, ಅಳ್ವೆಕೋಡಿ,ಮೊ ರ್ಬ ಇತ್ಯಾದಿ ಪ್ರದೇಶದ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಗೆ ಉಪ್ಪು ನೀರು ತುಂಬಿ ಹಾನಿಗೆ ಒಳಗಾಗಿದೆ.
ತಹಸೀಲ್ದಾರ ಮೇಘರಾಜ ನಾಯ್ಕ ಅವರು ಹೇಳುವಂತೆ ತಾಲೂಕಿನಲ್ಲಿ ಐಡಿಯಲ್ ಸ್ಕೂಲ್, ಬಗ್ಗೋಣ ಮತ್ತು ಗೋಕರ್ಣದಲ್ಲಿ ಕಾಳಜಿ ಕೇಂದ್ರ ತೆರಯಲಾಗಿದೆ. ನೂರಾರು ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿವೆ. .ತಾಲೂಕಿನಲ್ಲಿ ಸಾವಿರಾರು ಅಡಕೆ ಮರಗಳು ಬಿರುಗಾಳಿಯ ಹೊಡತಕ್ಕೆ ತುಂಡಾಗಿ ಬಿದ್ದಿವೆ. ಮೂರೂರು, ಊರಕೇರಿ, ಕತಗಾಲ, ಬ್ರಹ್ಮೂರು ಸೇರಿದಂತೆ ಅನೇಕ ಕಡೆ ತೆಂಗು ಹಾಗೂ ಮರ ಅಡಕೆ ಮರಗಳು ಬುಡಮೇಲಾಗಿ ಬಿದ್ದು ಅಪಾರ ಹಾನಿ ಸಂಭವಿಸಿದೆ.
ಮೀನುಗಾರಿಕಾ ದೋಣಿಗಳಿಗೆ ಹಾನಿ;ಹೊಸಕಟ್ಟಾ,ಶಶಿಹಿತ್ತಲು, ಮೂಡಂಗಿ ಇಮೊದಲಾದಡೆ ಗಾಳಿ ರಭಸಕ್ಕೆ ಒಮ್ಮೆಗೇ ಮೇಲಕ್ಕೆದ್ದ ಸಮುದ್ರದ ತೆರೆಗಳಿಂದ ನೀರು ತೀರ ಪ್ರದೇಶದೊಳಗೆ ನುಗ್ಗಿದೆ. ಕಟ್ಟಿರುವ ನಾಡದೋಣಿ ಮತ್ತು ಪಾತಿದೋಣಿಗಳು ಗಾಳಿಯ ರಭಸಕ್ಕೆ ಹಾರಿ ಬಿದ್ದು ಹಾನಿಗೆ ಒಳಗಾಗಿದೆ. ಹವಾಮಾನ ಇಲಾಖೆಯ ಮೂನ್ಸೂಚನೆಯಂತೆ ಪರ್ಶಿಯನ್ ಬೋಟ್, ಫೀಷಿಂಗ್ ಬೋಟಗಳನ್ನು ಅರಬ್ಬಿ ಸಮುದ್ರ ಮತ್ತು ಅಘನಾಶನಿ ನದಿ ಸೇರುವ ಸಂಘಮ ಪ್ರದೇಶವಾದ ಸಮೀಪದ ತದಡಿಯಿಂದ ಗಂಗಾವಳಿ, ಮೋರ್ಬ ಇತ್ಯಾದಿ ಪ್ರದೇಶಕ್ಕೆ ಮೊದಲೇ ಸ್ಥಳಾಂತರಿಸಿದ್ದರಿಂದ ಬೋಟುಗಳಿಗೆ ಯಾವುದೇ ಹಾನಿಯಾಗಿಲ್ಲ. ತದಡಿ ಬಂದರಿನಲ್ಲಿ ಒಂದು ಬೋಟನ್ನೂ ಇರಿಸಿಲ್ಲ. ಇದರಿಂದ ಸಂಭವನೀಯ ಅಪಾಯದಿಂದ ಬೋಟ್ಗಳು ಪಾರಾಗಿವೆ ಎಂದು ತದಡಿ ಫಿಶಿಂಗ್ ಸೋಸೈಟಿಯ ನಿರ್ದೇಶಕ ಶೇಖರ ತಿಳಿಸಿದ್ದಾರೆ.

ಒಟ್ಟಾರೆ ತಾಲೂಕಾ ಆಡಳಿತ ಮೊದಲೇ ಸುರಕ್ಷತಾ ಕಾರ್ಯನಿರ್ವಹಣೆ ಮಾಡಿದ್ದರಿಂದ ತೌಕ್ಟೆ ಚಂಡಮಾರುತದಿಂದ ಹೆಚ್ಚಿನ ಹಾನಿ ತಪ್ಪಿದೆ.
ಆದರೆ ಇದರಿಂದ ಅಪಾರ ಹಾನಿಯುಂಟಾಗಿದೆ ಎಂದು ತಹಶೀಲ್ದಾರ ಮೇಘರಾಜ ಹಾಗೂ ಉಪವಿಭಾಗಾಧಿಕಾರಿ ಎಂ.ಅಜೀತ್ ತಿಳಿಸಿದ್ದಾರೆ.ಅದರ ಸಮೀಕ್ಷೆ ನಂತರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕುಮಟಾದಲ್ಲಿ ಕಳೆದ ೨೪ ತಾಸಿನಿಂದ ವಿದ್ಯುತ್ ಸಂಪರ್ಕ ನಿಂತಿದೆ. ಅನೇಕ ಕಡೆಯಲ್ಲಿ ವಿದ್ಯುತ್ ಲೈನ್ ಮೇಲೆ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿದೆ ಅಥವಾ ವಿದ್ಯುತ್ ಕಂಬಳು ಉರುಳಿವೆ. ಕೆಲವುಕಡೆ ಬಿರುಗಾಳಿಯ ಹೊಡೆತಕ್ಕೆ ತಂತಿಗಳು ತುಂಡಾಗಿ ಬಿದ್ದಿದ್ದರಿಂದ ಒಂದೆರುಡು ದಿನಗಳ ಕಾಲ ತಾಲೂಕಿನ ಕೆಲವು ಕಡೆಯಲ್ಲಿ ವಿದ್ಯತ್ ಸಂಪರ್ಕ ಅಸಾಧ್ಯ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ