ವಾಜೆ ಬಳಿ ಇದ್ದ ಐಷಾರಾಮಿ ಕಾರು ಶಿವಸೇನೆ ಮುಖಂಡನಿಗೆ ಸೇರಿದ್ದು..!

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿರುವ ಸಚಿನ್ ವಾಜೆ ಅವರಿಂದ ವಶಪಡಿಸಿಕೊಂಡಿರುವ ಎರಡು ಐಷಾರಾಮಿ ಕಾರುಗಳು ಶಿವಸೇನೆ ಮುಖಂಡರಿಗೆ ಸೇರಿದ್ದು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ವಾಜೆ ಅವರಿಂದ ಮತ್ತೆರಡು ಐಷಾರಾಮಿ ಕಾರು ವಶಪಡಿಸಿಳ್ಳಲಾಗಿದ್ದು, ಅವರಿಂದ ಅಪಾರ ಬೆಲೆ ಬಾಳುವ ಐದು ಕಾರುಗಳನ್ನು ವಶಪಡಿಸಿಕೊಂಡಂತಾಗಿದೆ.
ಬ್ಲ್ಯಾಕ್‌ ಲಗ್ಸುರಿ ಎಸ್‍ಯುವಿ, ಮರ್ಸಿಡೀಸ್ ಬೆನ್ಜ್, ಟೊಯೋಟೋ ಲ್ಯಾಂಡ್ ಕ್ರೂಸರ್ ಹಾಗೂ ಮತ್ತೊಂದು ಐಹೆಂಡ್ ಲಕ್ಸುರಿ ಕಾರ್ ಸೇರಿದಂತೆ ಐದು ವಾಹನಗಳನ್ನು ಎನ್‍ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಾಜೆ ಅವರಿಂದ ವಶಪಡಿಸಿಕೊಳ್ಳಲಾಗಿರುವ ಮರ್ಸಿಡೀಸ್ ಕಾರು ನವಿಮುಂಬೈನ ವಾಷಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿದ್ದು, ಆ ಕಾರು ನರ್ಮದಾ ಆಫ್‍ಶೋರ್ ನಿರ್ಮಾಣ ಸಂಸ್ಥೆಗೆ ಸೇರಿದ್ದಾಗಿದೆ.
ಬೋರಿವಲಿ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿರುವ ಟೊಯೋಟೊ ಪ್ರಾಡೋ ಕಾರಿನ ಮಾಲೀಕರು ವಿಜಯ್ ಕುಮಾರ್ ಗಣಪತ್ ಬೋಸ್ಲೆ ಎಂಬುವವರ ಮಾಲೀಕತ್ವಕ್ಕೆ ಒಳಪಟ್ಟಿರುವುದು ಪತ್ತೆಯಾಗಿದೆ. ವಿಜಯ್ ಕುಮಾರ್ ಬೋಸ್ಲೆ ಶಿವಸೇನೆ ಪಕ್ಷದ ಮುಖಂಡ ಎಂಬುದು ವಿಶೇಷ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement