ಶ್ರೀಲಂಕಾ ಬಿಕ್ಕಟ್ಟು: ಪ್ರತಿ ಕೆಜಿ ಆಲೂಗೆಡ್ಡೆಗೆ 400 ರೂ., ಬೇಳೆಕಾಳುಗಳಿಗೆ 620 ರೂ.ಗಳು…!

ಕೊಲಂಬೊ: ಈಗಾಗಲೇ ಶ್ರೀಲಂಕಾದಲ್ಲಿ ಖಾದ್ಯಗಳ ಬೆಲೆಗಳು ಗಗನಕ್ಕೇರುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ಬಿಕ್ಕಟ್ಟಿನ ಪೀಡಿತ ದೇಶದ ಹೆಚ್ಚಿನ ಜನರಿಗೆ ಅವುಗಳನ್ನು ಖರೀದಿಸಲು ಅಸಾಧ್ಯವಾಗಿದೆ.
ಶ್ರೀಲಂಕಾ 1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರದ ತನ್ನ ಕೆಟ್ಟ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ತರಕಾರಿಗಳ ಬೆಲೆಗಳು ದುಪ್ಪಟ್ಟಾಗಿದೆ, ಆದರೆ ಅಕ್ಕಿ ದರವು ಒಂದು ವರ್ಷದ ಹಿಂದೆ ಪ್ರತಿ ಕಿಲೋಗ್ರಾಂಗೆ 145 ರೂ.ಗಳಿಂದ 220 ರೂ.ಗಳಿಗೆ (ಶ್ರೀಲಂಕಾ ರೂಪಾಯಿ) ಹೆಚ್ಚಾಗಿದೆ.

ಆಲೂಗೆಡ್ಡೆ ಬೆಲೆ 400 ರೂಪಾಯಿ ದಾಟಿದ್ದು, ಈರುಳ್ಳಿ ದರ ಕೆಜಿಗೆ 300 ರೂಪಾಯಿ ದಾಟಿದೆ. ಬೇಳೆಕಾಳುಗಳು ಪ್ರತಿಕಿಲೊಕ್ಕೆ ಸಾರ್ವಕಾಲಿಕ ಗರಿಷ್ಠ 620 ರೂ.ಗಳಿಗೆ ಮಾರಾಟವಾಗುತ್ತಿದ್ದು, ಒಂದು ಲೀಟರ್ ತೆಂಗಿನ ಎಣ್ಣೆ (ಸಾಮಾನ್ಯವಾಗಿ ಶ್ರೀಲಂಕಾದಲ್ಲಿ ಅಡುಗೆಗೆ ಬಳಸಲಾಗುತ್ತದೆ) 700 ರೂ.ಗಳಿಗೆ ತಲುಪಿದೆ.

ಪರಿಸ್ಥಿತಿ ಹದಗೆಡುತ್ತಿದ್ದಂತೆ ಕೊಲಂಬೊದಲ್ಲಿನ ಸೂಪರ್‌ಮಾರ್ಕೆಟ್‌ಗಳಲ್ಲಿ ಆಹಾರ, ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ. ಶ್ರೀಲಂಕಾದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಇರುವುದರಿಂದ, ರಾಜಧಾನಿ ಕೊಲಂಬೊದಲ್ಲಿನ ಸೂಪರ್‌ಮಾರ್ಕೆಟ್‌ಗಳು ಆಹಾರ ಮತ್ತು ಇತರ ಅಗತ್ಯ ಸರಕುಗಳಿಂದ ವೇಗವಾಗಿ ಖಾಲಿಯಾಗುತ್ತಿವೆ.
ಬಿಕ್ಕಟ್ಟಿನ ದ್ವೀಪ ರಾಷ್ಟ್ರದಲ್ಲಿ, ಜನರು ಅಡುಗೆ ಅನಿಲ, ಸೀಮೆಎಣ್ಣೆ, ಗ್ಯಾಸೋಲಿನ್, ಸಕ್ಕರೆ, ಹಾಲಿನ ಪುಡಿ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳಿಗಾಗಿ ದಿನಗಟ್ಟಲೆ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ವಿಶ್ವಸಂಸ್ಥೆ ಏಜೆನ್ಸಿಗಳ ಪ್ರಕಾರ, ಸುಮಾರು 23 ಲಕ್ಷ ಮಕ್ಕಳನ್ನು ಒಳಗೊಂಡಂತೆ 57 ಲಕ್ಷ ಶ್ರೀಲಂಕಾದವರಿಗೆ ಈಗ ತಕ್ಷಣದ ಮಾನವೀಯ ಸಹಾಯದ ಅಗತ್ಯವಿದೆ.
ಚೀನಾ ಸೆಂಟ್ರಲ್ ಟೆಲಿವಿಷನ್ (CCT) ಪ್ರಕಾರ, ಕೊಲಂಬೊದಲ್ಲಿನ ಸೂಪರ್ಮಾರ್ಕೆಟ್‌ಗಳಲ್ಲಿನ ಅನೇಕ ಕಪಾಟುಗಳು ಅರ್ಧ ಖಾಲಿಯಾಗಿವೆ. ಆಹಾರ ಮತ್ತು ಸಾಗಾಣಿಕೆ ವೆಚ್ಚಗಳು ವೇಗವಾಗಿ ಹೆಚ್ಚುತ್ತಿರುವ ಕಾರಣ ದಿನನಿತ್ಯದ ಅಗತ್ಯವಸ್ತುಗಳು, ವಿಶೇಷವಾಗಿ ಮೊಟ್ಟೆ ಮತ್ತು ಬ್ರೆಡ್ ಕೊರತೆಯಿದೆ. ಆಹಾರದ ಕೊರತೆ ಜೊತೆಗೆ ಇಂಧನದ ಗಂಭೀರ ಕೊರತೆಯಾಗಿದ್ದು, ಇದು ಸಾರಿಗೆ ಉದ್ಯಮಕ್ಕೆ ಭಾರೀ ಹೊಡೆತವನ್ನು ನೀಡಿದೆ.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement