ಯಾವುದೇ ವ್ಯಕ್ತಿಯನ್ನು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಯಾವುದೇ ವ್ಯಕ್ತಿಯನ್ನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡುವ ಹಾಗಿಲ್ಲ. ಪ್ರಸ್ತುತವಿರುವ ಸರ್ಕಾರದ ಕೋವಿಡ್​-19 ಲಸಿಕೆ ನೀತಿ ಅಸಮಂಜಸ ಅಥವಾ ಅನಿಯಂತ್ರಿತವಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ದ್ವಿಸದಸ್ಯ ಪೀಠ, ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ. ಸಂಖ್ಯೆಗಳು ಕಡಿಮೆಯಾಗುವವರೆಗೆ, ಸಂಬಂಧಿತ ನಿರ್ಭಂಧದ ಆದೇಶಗಳನ್ನು ಹಿಂಡೆಯಬೇಕು ಮತ್ತು ಸಾರ್ವಜನಿಕ ಪ್ರದೇಶಗಳಿಗೆ ವ್ಯಕ್ತಿಗಳ ಪ್ರವೇಶಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸುವಂತಿಲ್ಲ ಎಂದು ತೀರ್ಪು ಹೇಳಿದೆ.

ಸಂಬಂಧಿತವಾಗಿ, ಅಂತಹ ಪ್ರಯೋಗಗಳಿಗೆ ಒಳಪಟ್ಟ ವ್ಯಕ್ತಿಗಳ ಗೌಪ್ಯತೆಯ ರಕ್ಷಣೆಗೆ ಒಳಪಟ್ಟು ಭವಿಷ್ಯದ ಪ್ರಯೋಗಗಳು ಸೇರಿದಂತೆ ಎಲ್ಲಾ ಕೋವಿಡ್‌ ಲಸಿಕೆ ಪ್ರಯೋಗ ಡೇಟಾವನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ದೈಹಿಕ ಸ್ವಾಯತ್ತತೆ/ದೈಹಿಕ ಸಮಗ್ರತೆ ಸಾಂವಿಧಾನಿಕ ಹಕ್ಕು. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತಪಡಿಸುವಂತಿಲ್ಲ. ಕೋವಿಡ್-19 ವ್ಯಾಕ್ಸಿನೇಷನ್‌ನ ಪ್ರತಿಕೂಲ ಘಟನೆಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸುವಂತೆಯೂ ಕೋರ್ಟ್ ಕೇಂದ್ರಕ್ಕೆ ನಿರ್ದೇಶಿಸಿದೆ. ಲಸಿಕೆ ಹಾಕಿದ ಜನರಿಗಿಂತ ಲಸಿಕೆ ಹಾಕದ ಜನರು ಹೆಚ್ಚು ವೈರಸ್ ಹರಡಲು ಕಾರಣರಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಗಳು ಯಾವುದೇ ದಾಖಲೆಗಳನ್ನು ನೀಡಿಲ್ಲ. ಲಸಿಕೆ ಹಾಕದ ಜನರನ್ನು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಬಾರದು ಎಂದೂ ಕೋರ್ಟ್ ಸೂಚಿಸಿದೆ.

ಪ್ರಮುಖ ಸುದ್ದಿ :-   ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಯ್ತು ಬರೋಬ್ಬರಿ 9900 ಕೋಟಿ ರೂ....! ಮುಂದಾಗಿದ್ದೇನು..?

ಕೋವಿಡ್ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ಮತ್ತು ಪ್ರತಿಕೂಲ ಪರಿಣಾಮಗಳ ಡೇಟಾವನ್ನು ಕೋರಿ ಮತ್ತು ಕೆಲವು ರಾಜ್ಯ ಸರ್ಕಾರಗಳು ಹೊರಡಿಸಿದ ಲಸಿಕೆ ಕಡ್ಡಾಯ ಆದೇಶಗಳನ್ನು ಪ್ರಶ್ನಿಸಿ ನ್ಯಾಷನಲ್​ ಟೆಕ್ನಿಕಲ್​ ಅಡ್ವೈಸರಿ ಗ್ರೂಪ್​ ಆನ್​ ಇಮ್ಯುನೈಸೇಶನ್​ನ ಮಾಜಿ ಸದಸ್ಯ ಜಾಕೋಬ್ ಪುಲಿಯೆಲ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿತು. ಪುಲಿಯೆಲ್ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ, ಮಾರ್ಚ್ 13ರ ವೇಳೆಗೆ 180 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಪ್ರತಿಕೂಲ ಘಟನೆಗಳು ಮಾರ್ಚ್ 12ರ ವೇಳೆಗೆ 77,314 ಆಗಿದ್ದು, ಒಟ್ಟು ಲಸಿಕೆ ಪಡೆದವರ ಸಂಖ್ಯೆಯ ಶೇ 0.004 ಆಗಿದೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸುವ ನೆಪದಲ್ಲಿ ಯಾರೂ ಪ್ರತ್ಯೇಕವಾದ ಕ್ಲಿನಿಕಲ್ ಡೇಟಾವನ್ನು ಕೇಳುವಂತಿಲ್ಲ ಎಂದು ಕೇಂದ್ರವು ಒತ್ತಿಹೇಳಿದೆ. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ವಾದ ಮಂಡಿಸಿದರು.
ನ್ಯಾಯವಾದಿ ವಿಪಿನ್ ನಾಯರ್ ಪ್ರತಿನಿಧಿಸಿದ ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್, ಕೋವಾಕ್ಸಿನ್ ಅಗತ್ಯವಿರುವ ಎಲ್ಲಾ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿದೆ. 3ನೇ ಹಂತದ ಪರಿಣಾಮಕಾರಿತ್ವದ ಪ್ರಯೋಗಗಳು ಕೋವಿಡ್ ವಿರುದ್ಧ 77.8 ಪ್ರತಿಶತದಷ್ಟು ಪರಿಣಾಮಕಾರಿ ಎಂದು ಬಹಿರಂಗಪಡಿಸಿದೆ. ಕ್ಲಿನಿಕಲ್ ಪ್ರಯೋಗಗಳ ಸಂಶೋಧನೆಗಳನ್ನು ಸಾರ್ವಜನಿಕವಾಗಿ ಲಭ್ಯವಿರುವ ಪ್ರತಿಷ್ಠಿತ ಪೀರ್ ರಿವ್ಯೂಡ್ ಜರ್ನಲ್‌ಗಳಲ್ಲಿ ಮತ್ತು ಅದರ ವೆಬ್‌ಸೈಟ್‌ನಲ್ಲಿ ವ್ಯಾಪಕವಾಗಿ ಪ್ರಕಟಿಸಲಾಗಿದೆ ಎಂದು ಕೋರ್ಟ್​ಗೆ ತಿಳಿಸಿದೆ.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement