ಸ್ಮರಣ ಶಕ್ತಿ: ಎರಡು ವರ್ಷದ ಅನಿಕೇತ್‌ ಭಟ್‌ಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌-2022 ಪ್ರಮಾಣಪತ್ರ

ಬೆಂಗಳೂರು: ಬುದ್ಧಿಮತ್ತೆ ಕಾರಣಕ್ಕೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅನಿಕೇತ್ ಭಟ್ ಎಂಬ ಎರಡು ವರ್ಷವೂ ಆಗದ ಪುಟ್ಟ ಬಾಲಕನಿಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌-2022 ಪ್ರಮಾಣ ಪತ್ರ ನೀಡಲಾಗಿದೆ.
ಈತ ನವೆಂಬರ್ 15, 2022 ರಂದು ದೃಢಪಡಿಸಿದಂತೆ 1 ವರ್ಷ ಮತ್ತು 10 ತಿಂಗಳ ವಯಸ್ಸಿಗೆ 15 ಕಾಡು ಪ್ರಾಣಿಗಳು, 15 ಸಾಕು ಪ್ರಾಣಿಗಳು, 22 ಪಕ್ಷಿಗಳು, 15 ಹಣ್ಣುಗಳು, ಭಾರತದ 28 ರಾಜ್ಯಗಳು, 15 ದೇಶಗಳ ಧ್ವಜಗಳು, 14 ವಾಹನಗಳನ್ನು ಗುರುತಿಸಿ ಮೆಚ್ಚುಗೆ ಪಡೆದಿದ್ದಾನೆ.

1 ರಿಂದ 10 ರವರೆಗೆ ಎಣಿಕೆ (ಹಿಂದಿ ಮತ್ತು ಕನ್ನಡ), 2 ನರ್ಸರಿ ಪ್ರಾಸಗಳು, ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು ಹೇಳಿದ್ದಾನೆ. ಈತನ ಬುದ್ಧಿಮತ್ತೆಗೆ ಈಗ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಪ್ರಮಾಣ ಪತ್ರ ನೀಡಿದೆ. ಅನಿಕೇತ ಭಟ್‌ ಅನಿಕೇತ್ ಭಟ್ 2020 ಡಿಸೆಂಬರ್ 19ರಂದು ಜನಿಸಿದ್ದಾನೆ.

ಅನಿಕೇತ ಭಾರತದ ಪ್ರಧಾನಿ, ಕರ್ನಾಟಕದ ಮುಖ್ಯಮಂತ್ರಿ, ಭಾರತದ ರಾಷ್ಟ್ರಪತಿ ಹೀಗೆ ಅನೇಕರ ಹೆಸರುಗಳನ್ನು ಹೇಳುತ್ತಾನೆ. ಇನ್ನೂ ಸ್ಪಷ್ಟವಾಗಿ ಮಾತನಾಡಲು ಬಾರದ ಈ ಪುಟ್ಟ ಪೋರನ ಬುದ್ಧಿಶಕ್ತಿ ಮಾತ್ರ ಅಸಾಧಾರಣ.
ವಿವಿಧ ರಾಜ್ಯಗಳನ್ನೊಳಗೊಂಡ ಭಾರತದ ನಕಾಶೆಯನ್ನು ತೋರಿಸಿ ಯಾವುದೇ ರಾಜ್ಯದ ಮೇಲೆ ಕೈಯಿಟ್ಟು ಇದು ಯಾವ ರಾಜ್ಯವೆಂದು ಕೇಳಿದರೆ ಈ ಪುಟ್ಟಪೋರ ಅದನ್ನು ನಿಖರವಾಗಿ ಹೇಳುತ್ತಾನೆ. ನಮ್ಮ ದೇಶವಷ್ಟೇ ಅಲ್ಲ, ಬೇರೆಬೇರೆ 20ಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜ (ಫ್ಲ್ಯಾಗ್‌) ತೋರಿಸಿದರೆ ಸಾಕು ಧ್ವಜ ನೋಡಿಯೇ ಆ ರಾಷ್ಟ್ರದ ಹೆಸರನ್ನು ಹೇಳುತ್ತಾನೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಭಾರೀ ಟ್ವಿಸ್ಟ್​; ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ ಫೋಟೋಗಳು ವೈರಲ್‌..!

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಿಳಗಿಯವರಾದ ಈತನ ತಂದೆ-ತಾಯಿ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಆನಂದ ಭಟ್‌ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ಶ್ರೀಲತಾ. ಬಿಳಗಿಯ ನರೇಂದ್ರ ಭಟ್ ಮತ್ತು ಲಲಿತಾ ಅವರ ಮೊಮ್ಮಗ. ತಾಯಿ ಶ್ರೀಲತಾ ಮಗನ ಬೌದ್ಧಿಕ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement