ಬಂಗಬಂಧು ಶೇಕ್ ಮುಜೀಬುರ್‌ ಗಾಂಧಿ ಪ್ರಶಸ್ತಿಗೆ ಆಯ್ಕೆ

ನವ ದೆಹಲಿ: ಬಂಗಬಂಧು ಬಾಂಗ್ಲಾದೇಶದ ಶೇಕ್ ಮುಜೀಬುರ್‌ 2020ರ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಸೋಮವಾರ ತಿಳಿಸಿದೆ.

ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ದೂರದೃಷ್ಟಿ ಹಾಗೂ ಗಲ್ಫ್ ಪ್ರದೇಶದಲ್ಲಿ ಶಾಂತಿ ಹಾಗೂ ಅಹಿಂಸೆ ಉತ್ತೇಜಿಸುವ ಪ್ರಯತ್ನವನ್ನು ಗುರುತಿಸಿ 2019ರ ಪ್ರತಿಷ್ಠಿತ ಗಾಂಧಿ ಪ್ರಶಸ್ತಿಯನ್ನು ಓಮನ್ ನ ದಿವಂಗತ ಸುಲ್ತಾನ್ ಖಬೂಸ್ ಬಿನ್ ಸಯೀದ್ ಅಲ್ ಸಯೀದ್ ಅವರಿಗೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಗಾಂಧಿ ಶಾಂತಿ ಪ್ರಶಸ್ತಿಯನ್ನು ಮಹಾತ್ಮಾ ಗಾಂಧಿಯವರ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ವರ್ಷವಾದ 1995ರಲ್ಲಿ ಭಾರತ ಸರಕಾರ ಸ್ಥಾಪಿಸಿತ್ತು. ಗಾಂಧಿ ಶಾಂತಿ ಪ್ರಶಸ್ತಿಯ ತೀರ್ಪುಗಾರರ ಅಧ್ಯಕ್ಷೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದು, ಜ್ಯೂರಿಯಲ್ಲಿ ಇಬ್ಬರು ಮಾಜಿ ಅಧಿಕಾರಿಗಳು, ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯಲ್ಲಿ ಅತಿದೊಡ್ಡ ಪ್ರತಿಪಕ್ಷದ ನಾಯಕರು ಇದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸುಲಭ್ ಅಂತರ್ ರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಸ್ಥಾಪಕರಾದ ಬಿಂದೇಶ್ವರ ಪಾಠಕ್ ಅವರೂ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement