ತಾಯಂದಿರ ದಿನ -2022: ಕೈ ತೋಳುಗಳಿಲ್ಲದಿದ್ದರೇನಂತೆ… ತನ್ನ ಕಾಲುಗಳಿಂದಲೇ ಹೆಣ್ಣು ಮಗುವಿಗೆ ಡ್ರೆಸ್‌ ಹಾಕುವ ಈ ಹೀರೋ ಅಮ್ಮ | ವೀಕ್ಷಿಸಿ

ತಾಯಂದಿರ ದಿನದ ಈ ಸಂದರ್ಭದಲ್ಲಿ, ಅಂಗವಿಕಲ ವ್ಯಕ್ತಿಯ ಸವಾಲುಗಳ ನಡುವೆಯೂ ತನ್ನ ಹೆಣ್ಣು ಮಗುವನ್ನು ಸ್ವತಃ ನೋಡಿಕೊಳ್ಳುವ ಎರಡೂ ಕೈಗಳಿಲ್ಲದ ಈ ಸ್ಫೂರ್ತಿದಾಯಕ ಮಹಿಳೆಯ ವೀಡಿಯೊ ಹೊರಬಂದಿದೆ. ಹಾಗೂ ಅಂತರ್ಜಾಲದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ವೀಡಿಯೊದಲ್ಲಿ ಬೆಲ್ಜಿಯಂ ಕಲಾವಿದೆ ಸಾರಾ ತಲ್ಬಿ ಕಾಣಿಸಿಕೊಂಡಿದ್ದಾರೆ. ಅವರು ತೋಳುಗಳಿಲ್ಲದೆಯೇ ಜನಿಸಿದರು. ವೀಡಿಯೊವನ್ನು ಮೂಲತಃ ಎರಡು ವರ್ಷಗಳ ಹಿಂದೆ ಮಹಿಳೆಯ ಯೂ ಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅಲ್ಲಿ ಅವರು ವೀಕ್ಷಕರಿಗೆ ತನ್ನ ದೈನಂದಿನ ದಿನಚರಿಯನ್ನು ಮಾಡುತ್ತಿರುವುದನ್ನು ತೋರಿಸುವ ತನ್ನ ಜೀವನದ ಬಗ್ಗೆ ನಿಯಮಿತವಾದ ನವೀಕರಣಗಳನ್ನು ನೀಡುತ್ತಾರೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಾಯಂದಿರ ದಿನದಂದು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಮರು ಹಂಚಿಕೊಂಡಿದ್ದಾರೆ.
ವಿಶ್ವ ತಾಯಂದಿರ ದಿನದ ಸಂದರ್ಭದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎಂದು ಹೇಳುವುದು ಸರಿಯಾಗಿದೆ. ತಮ್ಮ ಮಕ್ಕಳನ್ನು ಪ್ರೀತಿ, ಸ್ಫೂರ್ತಿ ಮತ್ತು ಮೌಲ್ಯಗಳನ್ನು ಧಾರೆಯೆರೆದು ಅವರನ್ನು ಸಮರ್ಥರನ್ನಾಗಿ ಮಾಡುವ ಎಲ್ಲಾ ತಾಯಂದಿರಿಗೆ ಅನೇಕ ಶುಭಾಶಯಗಳು ಎಂದು ಬರೆದು ಈ ವೀಡಿಯೊ ಟ್ವೀಟ್‌ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕಲಾವಿದೆ ಸಾರಾ ತಲ್ಬಿ ಮಗುವಿಗೆ ತನ್ನ ಎರಡೂ ಕಾಲುಗಳನ್ನು ಬಳಸಿ ಡ್ರೆಸ್‌ ಹಾಕುವುದನ್ನು ನೋಡಬಹುದು. ತನ್ನ ಕಾಲಿನ ಮೂಲಕವೇ ಅವರು ಪುಟ್ಟ ಮಗುವಿಗೆ ಶರ್ಟ್‌ಗಳನ್ನು ಹಾಕುತ್ತಾರೆ. ಇಂಟರ್‌ನೆಟ್‌ ಅವರ ಮಮಕಾರ ಹಾಗೂ ಸ್ಫೂರ್ತಿಗೆ ಸೆಲ್ಯೂಟ್‌ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement