ಮದ್ಯ ಸೇವಿಸಿ ಮೃತಪಟ್ಟರೆ ವಿಮಾ ಪರಿಹಾರ ಸಿಗುವುದಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವ ದೆಹಲಿ: ವಿಪರೀತ ಮದ್ಯಪಾನದಿಂದಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರ ಪಡೆಯಲು ಅರ್ಹತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎಂ. ಶಾಂತನಗೌಡರ್ ಮತ್ತು ವಿನೀತ್ ಸರನ್ ಅವರಿದ್ದ ನ್ಯಾಯಪೀಠವು ರಾಜ್ಯ ಗ್ರಾಹಕ ವೇದಿಕೆ ಮತ್ತು ರಾಷ್ಟ್ರೀಯ ಗ್ರಾಹಕ ವೇದಿಕೆಯ ಏಕಕಾಲದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಿಮಾಚಲ ಪ್ರದೇಶದ ಕುಟುಂಬವೊಂದರ ಮನವಿಯನ್ನು ವಜಾ ಮಾಡಿದೆ.
ಹಿಮಾಚಲ ಪ್ರದೇಶದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮೃತ ಚೌಕಿದಾರ್ ಓಂಪ್ರಕಾಶ್ ಅವರ ಕುಟುಂಬ ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಅಪಘಾತದಿಂದಾಗಿ ಮೃತಟ್ಟಿದ್ದರೆ ಅಥವಾ ಗಾಯಗೊಂಡಿದ್ದರೆ ಮಾತ್ರ ಆತನ ಕಾನೂನು ಉತ್ತರಾಧಿಕಾರಿ ವಿಮೆಗೆ ಜವಾಬ್ದಾರನಾಗಿರುತ್ತಾನೆ. ಮದ್ಯ ಸೇವನೆಯಿಂದಾಗಿ ಸತ್ತರೆ ಆ ಸಾವು ಆಕಸ್ಮಿಕವಲ್ಲ. ಹಾಗಾಗಿ ಸತ್ತವರ ಕುಟುಂಬಕ್ಕೆ ಆದ ನಷ್ಟವನ್ನು ಸರಿದೂಗಿಸಲು ಸಂಸ್ಥೆಗೆ ಯಾವ ಶಾಸನಬದ್ದ ಬಾಧ್ಯತೆಗಳಿಲ್ಲ ಎಂದು ಕೋರ್ಟ್ ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement