ಬೆಂಗಳೂರು : 2023 ರಲ್ಲಿ ಬೆಂಗಳೂರಿನಲ್ಲಿ ಭಾರತದಲ್ಲೇ ಅತಿ ಹೆಚ್ಚು ವರದಕ್ಷಿಣೆ ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಲ್ಲಿ 2023 ರಲ್ಲಿ ಒಟ್ಟು 1,013 ದೂರುಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ಇತ್ತೀಚಿನ ಮಾಹಿತಿಯ ಪ್ರಕಾರ, ಈ ಸಂಖ್ಯೆ ದೇಶದ 18 ಇತರ ಮೆಟ್ರೋ ನಗರಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳಿಗಿಂತ ಹೆಚ್ಚಾಗಿದೆ.
ವರದಕ್ಷಿಣೆ ಸಂಬಂಧಿತ ಅಪರಾಧಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು 2023 ರಲ್ಲಿ ಶೇ 14 ರಷ್ಟು ಹೆಚ್ಚಾಗಿದ್ದು, ದೇಶಾದ್ಯಂತ 15,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು ವರ್ಷವಿಡೀ 6,100 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ಇತ್ತೀಚಿನ ವರದಿ ತಿಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ‘ಭಾರತದಲ್ಲಿ ಅಪರಾಧ 2023’ ವರದಿಯ ಪ್ರಕಾರ 2023 ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ 15,489 ಪ್ರಕರಣಗಳು ದಾಖಲಾಗಿವೆ . 2022 ರಲ್ಲಿ 13,479 ಮತ್ತು 2021 ರಲ್ಲಿ 13,568 ಪ್ರಕರಣಗಳು ದಾಖಲಾಗಿತ್ತು.
ಉತ್ತರ ಪ್ರದೇಶವು ಕಾಯ್ದೆಯಡಿ ಅತಿ ಹೆಚ್ಚು 7,151 ಪ್ರಕರಣಗಳನ್ನು ದಾಖಲಾಗಿದೆ., ನಂತರ ಸ್ಥಾನದಲ್ಲಿ ಬಿಹಾರ (3,665) ಮತ್ತು ಕರ್ನಾಟಕದಲ್ಲಿ (2,322) ಪ್ರಕರಣಗಳು ದಾಖಲಾಗಿವೆ. 2023 ರಲ್ಲಿ ವರದಕ್ಷಿಣೆ ಸಾವಿನ ಪ್ರಕರಣಗಳಲ್ಲಿ ಒಟ್ಟು 6,156 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶವು 2,122 ಸಾವುಗಳೊಂದಿಗೆ ಮತ್ತೆ ಅಗ್ರಸ್ಥಾನದಲ್ಲಿದೆ, ನಂತರ ಬಿಹಾರ 1,143 ಸಾವುಗಳನ್ನು ಕಂಡಿದೆ. 2023 ರಲ್ಲಿ ದೇಶಾದ್ಯಂತ 833 ಕೊಲೆ ಪ್ರಕರಣಗಳಲ್ಲಿ ಇದಕ್ಕೆ ವರದಕ್ಷಿಣೆ ಕಾರಣ ಎಂದು ಪಟ್ಟಿ ಮಾಡಲಾಗಿದೆ. ಇದೇವೇಳೆ ಪಶ್ಚಿಮ ಬಂಗಾಳ, ಗೋವಾ, ಅರುಣಾಚಲ ಪ್ರದೇಶ, ಲಡಾಖ್ ಮತ್ತು ಸಿಕ್ಕಿಂ ಸೇರಿದಂತೆ ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರ್ಷದಲ್ಲಿ ಶೂನ್ಯ ವರದಕ್ಷಿಣೆ ಪ್ರಕರಣಗಳನ್ನು ವರದಿ ಮಾಡಿವೆ.
ಪೊಲೀಸರ ಪ್ರಕಾರ, ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳದ ದೂರುಗಳಲ್ಲಿ ಹೆಚ್ಚಳಕ್ಕೆ ಘಟನೆಗಳ ಹೆಚ್ಚಳಕ್ಕಿಂತ ಸಂತ್ರಸ್ತರು ಹೆಚ್ಚಿನ ಪ್ರಮಾಣದಲ್ಲಿ ವರದಿ ಮಾಡಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಟ್ನಾದಲ್ಲಿ ಕೇವಲ 104 ಪ್ರಕರಣಗಳು ದಾಖಲಾಗಿದ್ದರೆ, ಲಕ್ನೋ ಕೇವಲ 19 ಪ್ರಕರಣಗಳನ್ನು ವರದಿ ಮಾಡಿದೆ. ಈ ಸಂಖ್ಯೆಯಲ್ಲಿನ ಹೆಚ್ಚಳವು ಬೆಂಗಳೂರಿನಲ್ಲಿ ಹೆಚ್ಚಿನ ವರದಕ್ಷಿಣೆ ಅಪರಾಧಗಳು ನಡೆಯುತ್ತಿವೆ ಎಂದರ್ಥವಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ, ಬದಲಿಗೆ, ಹೆಚ್ಚಿನ ಮಹಿಳೆಯರು ದೌರ್ಜನ್ಯವನ್ನು ವರದಿ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ಇದು ತೋರಿಸುತ್ತದೆ ಎಂದು ದಿ ಹಿಂದೂ ವರದಿ ತಿಳಿಸಿದೆ. ನಗರದ ಬಲವಾದ ಮಹಿಳಾ ಹಕ್ಕುಗಳ ಗುಂಪುಗಳ ಜಾಲ ಮತ್ತು ಕೆಲಸ ಮಾಡುವ ಮಹಿಳೆಯರಲ್ಲಿ ಉತ್ತಮ ಜಾಗೃತಿಯಿಂದಾಗಿ ಸಂತ್ರಸ್ತ ಮಹಿಳೆಯರು ಪ್ರಕರಣ ದಾಖಲಿಸಲು ಮುಂದೆ ಕಾರಣವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ