ನಕ್ಸಲಿಸಂ-‘ಡಿಸ್ಕೋ ಡ್ಯಾನ್ಸರ್-ಬಾಲಿವುಡ್‌ ನಟ- ಸಿಪಿಎಂ-ಟಿಎಂಸಿ-ಬಿಜೆಪಿ: ಮಿಥುನ್‌ ದಾ ಕ್ರಮಿಸಿದ ದಾರಿ ವಿಚಿತ್ರ, ವಿಭಿನ್ನ

ಅತ್ಯಂತ ಪ್ರಸಿದ್ಧ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಭಾನುವಾರ (ಮಾ.೭) ಬಿಜೆಪಿಗೆ ಸೇರಿದ್ದಾರೆ. ಬಂಗಾಳದಲ್ಲಿ ಪ್ರಧಾನಿ ಮೋದಿಯವರ ಬೃಹತ್‌ ಸಮಾವೇಶದಲ್ಲಿ ಅವರ ಬಿಜೆಪಿ ಸೇರ್ಪಡೆಯಾಗಿದೆ. ಬಾಲಿವುಡ್‌ನಲ್ಲಿ ಡಿಸ್ಕೊ ಡ್ಯಾನ್ಸ್‌ಗೆ ಹೆರುವಾಸಿಯಾಗಿದ್ದ ಅವರು ನಟನೆಯಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದವರು. ತಮ್ಮ ನಟನೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದವರು. ಈಗ ಅವರು ರಾಜಕೀಯದಲ್ಲಿ ಮತ್ತೊಂದು ಮಜಲಿಗೆ ಹೊರಳಿದ್ದಾರೆ.

ಮಿಥುನ್‌ ಚಕ್ರವರ್ತಿ ತಮ್ಮ ಜೀವನದಲ್ಲಿ ಸವೆಸಿದ ಹಾದಿ ಬಹಳ ಹೊಡ್ಡದು. ಅದೇ ರೀತಿ ಕಂಡ ಏರಳಿತಗಳೂ ಸಹ ಅಷ್ಟೇ ಮಹತ್ವ ಪಡೆದಂಥವುಗಳು.
ಮಿಥುನ್ ಚಕ್ರವರ್ತಿ ನಕ್ಸಲ್ ಸಂಪರ್ಕ:
ಹಳೆಯ ಮಾತು ಇದೆ, “ನೀವು 20 ನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಅಲ್ಲದಿದ್ದರೆ, ನಿಮಗೆ ಹೃದಯವಿಲ್ಲ. ನೀವು ಇನ್ನೂ 30 ನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಆಗಿದ್ದರೆ, ನಿಮಗೆ ಮೆದುಳು ಇಲ್ಲ ಎಂದು. ಅದೇರೀತಿ ಮಿಥಹುನ ಚಕ್ರವರ್ತಿಯ ಜೀವನದಲ್ಲಿಯೂ ಆಗಿದೆ. ಒಂದು ಕಾಲದಲ್ಲಿ ನಕ್ಸಲೈಟ್ ಚಳವಳಿ ಭಾಗವಾಗಿದ್ದ ಮಿಥುನ್‌ ಅವರು ಕೆಳ-ಮಧ್ಯಮ ವರ್ಗದ ಬಂಗಾಳಿ ಕುಟುಂಬದಲ್ಲಿ ಜನಿಸಿದವರು. ಮತ್ತು 1960ರ ದಶಕದ ಉತ್ತರಾರ್ಧದಲ್ಲಿ, ತಮ್ಮ 20ರ ಆಸುಪಾಸಿನಲ್ಲಿ ಸಾವಿರಾರು ಬಂಗಾಳಿ ಯುವಕರಂತೆ ಅವರು ಸಹ ನಕ್ಸಲ್ ಚಳವಳಿಗೆ ಸೇರಿದರು.
ಅಂತಿಮವಾಗಿ ಚಿತ್ರರಂಗಕ್ಕೆ ಕಾಲಿಡುವ ಮೊದಲು ಮೊದಲು ಮಿಥುನ್‌ ದಾ ತನ್ನ ಸಹೋದರನ ವಿಲಕ್ಷಣವಾಗಿ ಅಪಘಾತದಲ್ಲಿ ಮೃತಪಟ್ಟ ನಂತರದಲ್ಲಿ ನಕ್ಸಲ್‌ ಚಳುವಳಿಯನ್ನು ತೊರೆದರು. ಆದರೆ ನಕ್ಸಲಿಸಂ ಬಿಡುವ ಮೊದಲು, ಚಕ್ರವರ್ತಿಗೆ ನಕ್ಸಲ್ ನಾಯಕ ಚಾರು ಮಜುಂದಾರ್ ಮತ್ತು ರವಿ ರಂಜನ್ ಅಲಿಯಾಸ್ ಭಾ ಅವರೊಂದಿಗೆ ನಿಕಟ ಸಂಪರ್ಕವಿತ್ತು. ಕುತೂಹಲವೆಂದರೆ, ಭಾ ಅವರ ಪ್ರಾರ್ಥನೆ ಮತ್ತು ಕುಶಲ ಕೌಶಲ್ಯಗಳಿಂದ ಪ್ರಸಿದ್ಧರಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ನಕ್ಸಲರ ಮೇಲೆ ಪೊಲೀಸರು ದಬ್ಬಾಳಿಕೆ ಪ್ರಾರಂಭಿಸಿದಾಗ, ಮಿಥುನ್ ತಲೆಮರೆಸಿಕೊಂಡು ಸ್ವಲ್ಪ ಸಮಯದ ವರೆಗೆ ಪರಾರಿಯಾಗಿ ಕಾನೂನಿಂದ ತಪ್ಪಿಸಿಕೊಂಡಿದ್ದರು..!
ಆದರೆ ತಮ್ಮ ಸಹೋದರನ ಮರಣದ ನಂತರ, ಪೊಲೀಸರು ತನ್ನನ್ನು ಬಂಧಿಸುವ ಅವಕಾಶವಿದ್ದರೂ, ನಕ್ಸಲಿಸಂ ಅನ್ನು ತೊರೆದು ತನ್ನ ಕುಟುಂಬಕ್ಕೆ ಮರಳಲು ನಿರ್ಧರಿಸಿದರು. ನಂತರದಲ್ಲಿ ಅವರು ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ) ಗೆ ಸೇರಿದರು. ನಂತರ ಅವರ ಜೀವನ ಕ್ರಮ ಬದಲಾಯಿತು.
ಆದಾಗ್ಯೂ, ನಕ್ಸಲೈಟ್ ಎಂಬ ಲೇಬಲ್ ಹೋಗುವುದು ಅಷ್ಟು ಸುಲಭವಲ್ಲ. ಅವರು ಮುಂಬೈಗೆ (ಆಗ ಬಾಂಬೆ) ಇಳಿಯುವ ಮೊದಲು, ಅವರ ಹೆಸರು ನಕ್ಸಲಿಸಂ ಹಿನ್ನೆಲೆ ಕಾರಣದಿಂದ ಚಲನಚಿತ್ರ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು. ಅದೃಷ್ಟವಶಾತ್, ಅವರು ಕೆಲಸಕ್ಕಾಗಿ ಹೆಚ್ಚಿನ ಸಮಯ ಕಾಯಬೇಕಾಗಿ ಬರಲಿಲ್ಲ. 1976ರಲ್ಲಿ ಮೃಗಯಾ ಚಿತ್ರವನ್ನು ಪೂರ್ಣಗೊಳಿಸಿದರು. ಇದಕ್ಕಾಗಿ ಅತ್ಯುತ್ತಮ ನಟನೆಗಾಗಿ ಅವರಿಗೆ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿತು. 1982 ರ ಹೊತ್ತಿಗೆ, ಅವರ ಐ ಆಮ್‌ ಎ ಡಿಸ್ಕೋ ಡ್ಯಾನ್ಸರ್’ ಹಾಡು ಹೊರಬಂದಾಗ, ಅವರು ದೇಶಾದ್ಯಂತ ಮನೆಮಾತಾದರು.
ಆದರೂ, ಒಂದು ಚಿತ್ರವು ಅವರನ್ನು ಆತಂಕಕ್ಕೀಡು ಮಾಡಿತು ಮತ್ತು ಅವರ ನಕ್ಸಲ್ ಭೂತಕಾಲವನ್ನು ನೆನಪಿಸಿತು. 1980ರಲ್ಲಿ ಬಿಡುಗಡೆಯಾದ ದಿ ನಕ್ಸಲೈಟ್ಸ್ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರ ನೀಡಲಾಯಿತು. ತನ್ನ ಭೂತಕಾಲದ ನೆನಪುಗಳು ಮತ್ತೆ ತನಗೆ ಮರಳಿ ಬರಬಹುದು ಎಂಬ ಕಾರಣಕ್ಕೆ ಅವರು ಮೊದಲು ಈ ಪ್ರಸ್ತಾಪ ಸ್ವೀಕರಿಸಲು ಒಪ್ಪಿರಲಿಲ್ಲ. ಆದರೆ ಕೊನೆಗೆ ಗಟ್ಟಿ ನಿರ್ಧಾರ ಮಾಡಿ ಒಪ್ಪಿಕೊಂಡು ಸಿನೆಮಾ ಶೂಟಿಂಗ್‌ ಮುಗಿಸಿದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಲಿಲ್ಲ.ಮುಂದೆ ಅವರು ಬೆಳೆದು ಬಾಲಿವುಡ್‌ನಲ್ಲಿ ಖ್ಯಾತ ನಾಯಕ ನಟರಾದರು ಎಂಬುದು ಬೇರೆ ಮಾತು.
ಸಿನೆಮಾದಿಂದ ರಾಜಕೀಯ ನಂಟು..:
1980ರ ದಶಕದಲ್ಲಿ, ಮಿಥುನ್ ಅವರಿಗೆ ಸುಭಾಸ್ ಚಕ್ರವರ್ತಿಯೊಂದಿಗೆ ನಿಕಟ ಸಂಪರ್ಕ ಬೆಳೆಯಿತು.
ಇದು ಅವರು ಹೋಪ್ ’86 ಆಯೋಜಿಸಲು ಕಾರಣವಾಯಿತು, ಈ ಕಾರ್ಯಕ್ರಮವು ಪ್ರವಾಹ ಪರಿಹಾರಕ್ಕಾಗಿ ಹಣ ಸಂಗ್ರಹಿಸಲು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಎಡಪಂಥೀಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಚಿತ್ರಣದ ಕಾರ್ಯಕ್ರಮಕ್ಕಾಗಿ ಮಿಥುನ್ ದೊಡ್ಡ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರನ್ನು ಕರೆತರುವಲ್ಲಿ ಯಶಸ್ವಿಯಾದರು.
ಮಿಥುನ್ ಚಕ್ರವರ್ತಿ ಸಿಪಿಎಂ ಸರ್ಕಾರಕ್ಕೆ ಆಗ ತುಂಬಾ ಹತ್ತಿರದಲ್ಲಿದ್ದರು, ಅದು ಪ್ರತಿ ಬಾರಿ ನಿಧಿಸಂಗ್ರಹಣೆ ಕಾರ್ಯಕ್ರಮವನ್ನು ಆಯೋಜಿಸಿದಾಗ ಅವರು ಉಚಿತ ಪ್ರದರ್ಶನಗಳನ್ನು ನೀಡುತ್ತಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ ನಿಧನದೊಂದಿಗೆ ಅವರು ಸಿಪಿಎಂನಿಂದ ದೂರವಾದರು.
ಪೌರಾಣಿಕ ನಟಿ ಸುಚಿತ್ರಾ ಸೇನ್ ನಿಧನರಾದಾಗ ಅವರು ಕೋಲ್ಕತ್ತಾದಲ್ಲಿದ್ದರು. ಆ ಸಮಯದಲ್ಲಿ, ಅದು ಮುಂದೆ ನಟಿಯ ಕೊನೆಯ ವಿಧಿಗಳ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಅವರ ಜೊತೆ ಸಂಪರ್ಕ ಬಂತು. 2014 ರ ಜನವರಿಯಲ್ಲಿ ಕಿಯೊರತಲಾ ಶವಾಗಾರದಲ್ಲಿಯE ಅವರಿಗೆ ರಾಜ್ಯಸಭಾ ಟಿಕೆಟ್ ನೀಡಿದರು. ಅವರು ಫೆಬ್ರವರಿ 2014 ರಲ್ಲಿ ರಾಜ್ಯಸಭಾ ಸದಸ್ಯರಾದರು. ಆದಾಗ್ಯೂ, ಶಾರದಾ ಚಿತ್‌ ಫಂಡ್‌ ಹಗರಣದ ಸಂಬಂಧ ಅವರು ೨೦೧೬ರಲ್ಲಿ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2021ರಲ್ಲಿ ಅವರು ಪುನಃ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಮಾ.೭ರಂದು ಕೊಲ್ಕತ್ತಾದ ಪ್ರಧಾನಿ ಮೋದಿಯವರ ಬೃಹತ್‌ ಸಮಾವೇಶದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಆಗ ಅವರು ಹೇಳಿದರು, “ನಾನು ಕನಸು ಕಾಣದ ಸಂಗತಿಯೆಂದರೆ, ಇಂದು ನಾನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಪ್ರಧಾನಿ ಮೋದಿ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡಿರುವುದು. ಇದು ಕನಸಲ್ಲದೆ ಮತ್ತೇನು ಎಂದು ಉದ್ಘರಿಸಿದರು. ಒಂದು ಕಾಲದಲಿ ಕಮ್ಯುನಿಸ್ಟ್‌ ಪಕ್ಷಕ್ಕೆ ನಿಷ್ಟರಾಗಿದ್ದ ಅವರು, ನಂತರ ತೃಣಮೂಲ ಕಾಂಗ್ರೆಸ್‌ , ಈಗ ಬಿಜೆಪಿಗೆ ಹೀಗೆ ಅವರ ರಾಜಕೀಯ ಪಯಣ ಬಳೆಯಿತು. ಆದರೆ ಇದು ತಕ್ಷಣವೇ ಆಗಿದ್ದಲ್ಲ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಕೆಲವು ವರ್ಷಗಳ ಅಂತರದಲ್ಲಿ ಅವರ ಪ್ರಯಾಣ ನಡೆಯಿತು. ಒಟ್ಟಿನಲ್ಲಿ ತಮ್ಮ ೨೦ರ ಹರೆಯದಲ್ಲಿ ನಕ್ಸಲ್‌ ಚಳವಳಿಯಲ್ಲಿದ್ದ ಮಿಥುನ್‌ ಚಕ್ರವರ್ತಿ ಈಗ ಅದಕ್ಕೆ ತದ್ವಿರುದ್ಧ ನಿಲುವಿನ ಬಿಜೆಪಿ ವರೆಗಿನ ಅವರ ಪಯಣದಲ್ಲಿ ಮಧ್ಯದಲ್ಲಿ ಮಿಥುನ್‌ ಬಹಳಷ್ಟುಏಳುಬೀಳುಗಳನ್ನು ಕಂಡು ಮಾಗಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಅವರು ಈಗಲೂ ಮಿಥುನ್‌ ದಾ ಆಗಿಯೇ ಇದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement