ದೀದಿ ಪಕ್ಷದಲ್ಲಿ ಬಣ ರಾಜಕೀಯದ ಸದ್ದು ; ಆಂತರಿಕ ತಲ್ಲಣದಿಂದ ದುರ್ಬಲವಾಗುತ್ತಿದೆಯೇ ಟಿಎಂಸಿ..?

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸದ್ಯ ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಿರಿಯ ಸಂಸದರಾದ ಕಾಕಲಿ ಘೋಷ್ ದಸ್ತಿದಾರ್ ಮತ್ತು ಕಲ್ಯಾಣ ಬ್ಯಾನರ್ಜಿ ನಡುವಿನ ಬಹಿರಂಗ ಜಗಳ ಹಾಗೂ ಅದರ ಬೆನ್ನಲ್ಲೇ ದಸ್ತಿದಾರ್ ಅವರ ಬಹಿರಂಗ ಬಂಡಾಯ, ಟಿಎಂಸಿ ಪಕ್ಷದೊಳಗಿನ ಆಂತರಿಕ ವೈರುಧ್ಯಗಳನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಈ ಪಕ್ಷದಲ್ಲಿ … Continued

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿಯನ್ನೇ ಬಿಜೆಪಿ ಆಯ್ಕೆ ಮಾಡಿದ್ದೇಕೆ ? ಇದರ ಹಿಂದಿನ ಲೆಕ್ಕಾಚಾರವೇನು ?

ಕೋಲ್ಕತ್ತಾ: ದಶಕಗಳ ಕಾಲ ಮಮತಾ ಬ್ಯಾನರ್ಜಿಯವರ ಅತ್ಯಂತ ಆಪ್ತ ಹೋರಾಟಗಾರನಾಗಿ, ಎಡಪಂಥೀಯರ ವಿರುದ್ಧ ಬೀದಿಗಿಳಿದು ಹೋರಾಡಿದ್ದ ಸುವೇಂದು ಅಧಿಕಾರಿ, ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಉದಯದ ಮಹಾ ನಾಯಕನಾಗಿ ಹೊರಹೊಮ್ಮಿದ್ದಾರೆ. ಮೇ ೯ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದು, ಇದು ರಾಜ್ಯದ ಅವರ ರಾಜಕೀಯ ಪಯಣದಲ್ಲಿ ಅತಿದೊಡ್ಡ ಮೈಲಿಗಲ್ಲಾಗಿದೆ. ಶುಕ್ರವಾರ … Continued

ಬಿಹಾರದಲ್ಲಿ ಹೀನಾಯ ಸೋಲಿನ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ತೀವ್ರ ; ಕಾಂಗ್ರೆಸ್‌ ನಾಯಕತ್ವದ ಮುಂದೆ ದೊಡ್ಡ ಸವಾಲು…

ಬಿಹಾರದಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದ ನಂತರ ‘ಇಂಡಿಯಾ’ (INDIA) ಮೈತ್ರಿಕೂಟವು ಅತ್ಯಂತ ಗಂಭೀರವಾದ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮೈತ್ರಿಕೂಟದ ಹಲವಾರು ಪ್ರಾದೇಶಿಕ ಅಂಗಪಕ್ಷಗಳು ಕಾಂಗ್ರೆಸ್ ನೇತೃತ್ವದ ಈ ಮೈತ್ರಿಕೂಟದ ಕಾರ್ಯತಂತ್ರ, ನಾಯಕತ್ವ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಬಹಿರಂಗವಾಗಿ ಪ್ರಶ್ನೆಗಳನ್ನು ಎತ್ತುತ್ತಿವೆ. ಇವು ಆರಂಭದಲ್ಲಿ ಅಸಮಾಧಾನದ ಸಣ್ಣ ಮಾತುಗಳಾಗಿದ್ದವು, ಆದರೆ ಬಿಹಾರದ ಚುನಾವಣೆಯಲ್ಲಿ ಮಹಾಘಟಬಂಧನದ ಹೀನಾಯ ಸೋಲಿನ … Continued

ಇಂದು ಯೋಗ ದಿನಾಚರಣೆ ; ಇದು ಆರೋಗ್ಯ -ಯೋಗಕ್ಷೇಮದ ಒಂದು ಸಮಗ್ರ ವಿಧಾನ

(೨೧.೦೬.೨೦೨೫ ರಂದು ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಲೇಖನ) ಪ್ರತಿವರ್ಷ ಜೂನ್ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ೨೦೦ಕ್ಕೂ ಹೆಚ್ಚಿನ ರಾಷ್ಟ್ರಗಳು ಆಚರಿಸುತ್ತಿವೆ. ಯೋಗದ ಕುರಿತಾದ ಮಾಹಿತಿ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಯೋಗದ ಮೂಲಕ … Continued

ಸಮ ಸಮಾಜ ನಿರ್ಮಾಣ, ಅಂತರಂಗ-ಬಹಿರಂಗ ಶುದ್ಧಿಯಿಂದ ಜಗಜ್ಯೋತಿಯಾದ ಕಾಯಕಯೋಗಿ ವಿಶ್ವಗುರು ಬಸವಣ್ಣ…

ವಿಶ್ವ ಗುರು ಮತ್ತು ಕರ್ನಾಟಕದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ೮೯೧ನೇ ಜಯಂತಿಯನ್ನು ೧೦-೦೫-೨೦೨೪ ರಂದು ಆಚರಿಸಲಾಗುತ್ತಿದ್ದು, ತನ್ನಿಮಿತ್ತ ಲೇಖನ) ನಡೆಯನ್ನೇ ನುಡಿಯಾಗಿಸಿದ ಪುಣ್ಯ ಪುರುಷರಲ್ಲಿ ಬಸವಣ್ಣನವರು ಅಗ್ರಗಣ್ಯರು. ತಮ್ಮ ನಡೆ-ನುಡಿಯಗಳನ್ನು ಸ್ಪಟಿಕದ ಸಲಾಖೆಯಂತೆ ನೇರ ಹಾಗೂ ಪಾರದರ್ಶಕವಾಗಿಸಿಕೊಂಡು, ತಮ್ಮ ನಡೆಯಿಂದ ಸಮಾಜಕ್ಕೆ ಚೇತನ ತುಂಬಿದವರು ಅಣ್ಣ ಬಸವಣ್ಣನವರು ; ತಮ್ಮ ನುಡಿಯಿಂದ ಲಿಂಗವನ್ನು ಮೆಚ್ಚಿಸಿ, … Continued

ಲೋಕಸಭಾ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್‌ ವರಿಷ್ಠರಿಗೆ ತಲೆನೋವಾದ ಕರ್ನಾಟಕದ ನಾಯಕರ ʼಸಿಎಂ ಕುರ್ಚಿʼ ಜಗಳ

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಂದೇ ಎಂದು ಎಷ್ಟೇ ಬಾರಿ ಪಕ್ಷದ ಮುಖಂಡರು ಮಾಧ್ಯಮಗಳ ಮುಂದೆ ಹೇಳಿಕೊಂಡರೂ ಒಡಕು ಹಾಗೂ ಅಸಮಾಧಾನ ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಈಗ ಎರಡು ಬಣಗಳ ನಡುವೆ ಈಗ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಹೇಳಿಕೆಗಳ ಸಮರ ಜೋರಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನೇ ಐದು … Continued

ಋತುಚರ್ಯ…: ದೈಹಿಕ-ಮಾನಸಿಕ ಪರಿಣಾಮಗಳನ್ನು ನಿಭಾಯಿಸುವ ಜೀವನಶೈಲಿ ಮತ್ತು ಆಯುರ್ವೇದ ಆಹಾರ ಕ್ರಮಗಳು

  ಋತುಚರ್ಯ ಎಂಬುದು ಪುರಾತನ ಆಯುರ್ವೇದ ಅಭ್ಯಾಸವಾಗಿದೆ ಮತ್ತು ಇದು ಎರಡು ಪದಗಳನ್ನು ಒಳಗೊಂಡಿದೆ, “ಋತು” ಅಂದರೆ ಕಾಲಮಾನ ಮತ್ತು “ಚರ್ಯ” ಅಂದರೆ ನಿಯಮ ಅಥವಾ ಶಿಸ್ತು. ಋತುಚರ್ಯವು ಆಯುರ್ವೇದದ ಶಿಫಾರಸ್ಸಿನಂತೆ ಕಾಲೋಚಿತ ಬದಲಾವಣೆಗಳಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ನಿಭಾಯಿಸಲು ಬೇಕಾದ ಜೀವನಶೈಲಿ ಮತ್ತು ಆಯುರ್ವೇದ ಆಹಾರ ಕ್ರಮವನ್ನು ಒಳಗೊಂಡಿದೆ. ಋತುಚರ್ಯವು ಕಾಲೋಚಿತ … Continued

ಹಿಂದುತ್ವ ಪ್ರತಿಪಾದಕ ಪಕ್ಷವಾದ ಬಿಜೆಪಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿದ್ದು ಹೇಗೆ…?

ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳು ಗುರುವಾರ ಬರಲು ಆರಂಭವಾಗುತ್ತಿದ್ದಂತೆಯೇ ಕಳೆದ ಸಲಕ್ಕಿಂತ ಕಡಿಮೆ ಸ್ಥಾನಗಳಿಸಿದರೂ ತ್ರಿಪುರವನ್ನು ಬಿಜೆಪಿ ಮೈತ್ರಿಕೂಟ ಉಳಿಸಿಕೊಳ್ಳುವುದು ಸ್ಪಷ್ಟವಾಯಿತು. ನಾಗಾಲ್ಯಾಂಡ್‌ನಲ್ಲಿ, ಬಿಜೆಪಿ-ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ನೇತೃತ್ವದ ಆಡಳಿತಾರೂಢ ಒಕ್ಕೂಟ ಅಧಿಕಾರಕ್ಕೆ ಬೇಕಾದ ಬಹುಮತ ಪಡೆಯಲು ಯಶಸ್ವಿಯಾಯಿತು. ಮೇಘಾಲಯದಲ್ಲಿಯೂ ಬಿಜೆಪಿ ಕಿರಿಯ ಪಾಲುದಾರ, ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) … Continued

ಮೊಸರು ಉಪಯೋಗಿಸುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ…?

ಆಯುರ್ವೇದವು ಮನುಷ್ಯನ ಆರೋಗ್ಯಕರ ಜೀವನ ಶೈಲಿಯ ವಿಜ್ಞಾನ. ಆರೋಗ್ಯವು ದೋಷ , ಧಾತು, ಮಲ ಅಗ್ನಿ (ಜೈವಿಕ ಬೆಂಕಿ) ಮತ್ತು ವ್ಯಕ್ತಿಯ ಮಾನಸಿಕ ಸಾಮರ್ಥ್ಯದ ಸಮತೋಲನ ಸ್ಥಿತಿಯಾಗಿದೆ. ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವೇ ದೇಹದ ಮೂರು ಸ್ತಂಭಗಳು. ಆಹಾರದ ಪರಿಕಲ್ಪನೆಯನ್ನು ಆಯುರ್ವೇದದ ಸಾಹಿತ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವರ್ಣಿಸಲಾಗಿದೆ. ಆಹಾರವು ವಿವಿಧ ಸ್ಥಳ ಧರ್ಮ, … Continued

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಬೇಕು ಯಾಕೆಂದರೆ…..ಇದು ರಸ್ತೆ ಅಭಿವೃದ್ಧಿಗಿಂತ ಹೆಚ್ಚು ಪರಿಸರ ಸ್ನೇಹಿ, ಮಿತವ್ಯಯಕಾರಿ, 3.40 ಕೋಟಿ ಜನರ ನಿರೀಕ್ಷೆ

ಕಳೆದ ಅನೇಕ ವರ್ಷಗಳಿಂದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕಾಗಿ ರಾಜ್ಯದ ಉತ್ತರ ಕರ್ನಾಟಕದ ೧೬ ಜಿಲ್ಲೆಗಳ ಸುಮಾರು ೩.೪೦ ಕೋಟಿ ಜನರ ನಿರೀಕ್ಷೆಯಲ್ಲಿದ್ದಾರೆ. ಮೂಲಭೂತ ಸೌಕರ್ಯಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಅತ್ಯವಶ್ಯ ಮತ್ತು ಅನಿವಾರ್ಯ. ಇಂದಿಗೂ ರಾಜ್ಯದ ೮೦ ತಾಲೂಕುಗಳಿಗೆ ರೈಲು ಸೌಲಭ್ಯವಿಲ್ಲ. ಸುಮಾರು ೮೫%ಕ್ಕೂ … Continued