ವೀಡಿಯೊ..| ಬಿಜೆಪಿ, ಅದರ ಬೆಂಬಲಿಗರನ್ನು ‘ರಾಕ್ಷಸರು’ ಎಂದು ಕರೆದ ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲಾ : ಭುಗಿಲೆದ್ದ ವಿವಾದ

ನವದೆಹಲಿ: ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲಾ ಅವರು ಬಿಜೆಪಿ ಮತ್ತು ಅದರ ಬೆಂಬಲಿಗರ ಬಗ್ಗೆ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ.
ಆಡಳಿತ ಪಕ್ಷ ಮತ್ತು ಅದಕ್ಕೆ ಮತ ಹಾಕುವವರು “ರಾಕ್ಷಸರು (demons)” ಎಂದು ಹರ್ಯಾಣದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರ ಹೇಳಿಕೆ ಬಿಜೆಪಿಯಿಂದ ತೀವ್ರ ಖಂಡನೆಗೆ ಒಳಗಾಗಿದ್ದಾರೆ.
“ಬಿಜೆಪಿ ಮತ್ತು ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯ ಜನರು ‘ರಾಕ್ಷಸರು’ ಮತ್ತು ಪಕ್ಷಕ್ಕೆ ಮತ ಚಲಾಯಿಸಿ ಅವರನ್ನು ಬೆಂಬಲಿಸುವವರು ಕೂಡ ‘ರಾಕ್ಷಸರು’ ಎಂದು ಕೈತಾಲ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುರ್ಜೆವಾಲಾ ಹೇಳಿದರು.
ಇಂದು, ನಾನು ಅವರನ್ನು ಈ ಮಹಾಭಾರತದ ಭೂಮಿಯಿಂದ ಶಪಿಸುತ್ತೇನೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಕೇಂದ್ರ ಸಚಿವ ಹರ್ದೀಪ ಸಿಂಗ್ ಪುರಿ ಸುರ್ಜೆವಾಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಈ ರೀತಿಯ ಹೇಳಿಕೆಗಳು ಕಾಂಗ್ರೆಸ್ ಅನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಉಳಿಯುವಂತೆ ಮಾಡುತ್ತದೆ ಎಂದು ಹೇಳಿದರು. “ಪುನರಾವರ್ತಿತ ಚುನಾವಣಾ ಸೋಲುಗಳು ಕಾಂಗ್ರೆಸ್ ಅನ್ನು ಅಪ್ರಸ್ತುತತೆಗೆ ತಳ್ಳಿವೆ ಎಂದು ಪುರಿ ಹೇಳಿದರು.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರು.”ರಾಜಕುಮಾರನನ್ನು ಮತ್ತೆ ಮತ್ತೆ ಬಿಂಬಿಸಲು ವಿಫಲವಾದ ಕಾಂಗ್ರೆಸ್ ಈಗ ಸಾರ್ವಜನಿಕರನ್ನು ನಿಂದಿಸಲು ಪ್ರಾರಂಭಿಸಿದೆ ಎಂದು ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಏನು ನಂಬುತ್ತಾರೆ? ನೀವು ಸಾರ್ವಜನಿಕರನ್ನು “ರಾಕ್ಷಸರು” ಎಂದು ಪರಿಗಣಿಸುತ್ತೀರಾ? ನಿಮ್ಮ ಮೊಹಬ್ಬತ್ ಕಿ ದುಕಾನ್ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ತಮ್ಮ ಸರ್ಕಾರ ಭಾಷಣವನ್ನು ಪರಿಶೀಲಿಸುತ್ತದೆ ಎಂದು ಹೇಳಿದರು. “‘ರಾಕ್ಷಸ’ ಪ್ರವೃತ್ತಿಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಮಾತ್ರ ಇಂತಹ ಅಸಭ್ಯ ಭಾಷೆಯನ್ನು ಬಳಸುವ ಬಗ್ಗೆ ಯೋಚಿಸಬಹುದು ಎಂದು ಖಟ್ಟರ್ ಹೇಳಿದರು.

ವಿವಾದ ಭುಗಿಲೆದ್ದ ನಂತರ ಸೋಮವಾರ ಸುರ್ಜೇವಾಲಾ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡು ಟ್ವೀಟ್‌ ಮಾಡಿದ್ದಾರೆ. ಭಾವನಾತ್ಮಕ ವಿಷಯಗಳ ಹಿಂದೆ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಸಮಾಜವನ್ನು ದ್ವೇಷದ ಬೆಂಕಿಗೆ ಎಸೆದು ಯುವ ಪ್ರತಿಭೆಗಳ ಕನಸುಗಳನ್ನು ಸಾಯಿಸುವವರು ರಾಕ್ಷಸರಿಗಿಂತ ಕಡಿಮೆಯೇ? ಈ ಜನರು ಪದಗಳನ್ನು ಹಿಡಿದು ಸಮಸ್ಯೆಗಳನ್ನು ಕೊಲ್ಲಲು ಬಯಸುತ್ತಾರೆ. ಈ ಸರ್ಕಾರವು ನಿರಂತರವಾಗಿ ಭಾವನಾತ್ಮಕ ವಿಷಯಗಳ ಹಿಂದೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ.
“ಜನಪ್ರತಿನಿಧಿಯಾಗಿ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು, ಅಧಿಕಾರದಲ್ಲಿರುವವರ ಕಣ್ಣುಗಳನ್ನು ತೆರೆಸುವುದು ಮತ್ತು ಸಾರ್ವಜನಿಕ ಸಂಬಂಧಿತ ಪ್ರಶ್ನೆಗಳನ್ನು ಕೇಳುವುದು ನನ್ನ ಧರ್ಮ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಈ ಧರ್ಮವನ್ನು ಅನುಸರಿಸುತ್ತೇನೆ ಎಂದು ಸುರ್ಜೇವಾಲಾ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದ ಎಡಬ್ಲ್ಯುಎಸಿಎಸ್‌ (AWACS) ವಿಮಾನ ನಾಶವಾಗಿದ್ದನ್ನು ಒಪ್ಪಿಕೊಂಡ ಪಾಕ್‌ ನಿವೃತ್ತ ಏರ್ ಮಾರ್ಷಲ್

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement