ಮಹಿಳಾ ವಿಶ್ವಕಪ್ 2022: ಕಟ್ಟಾ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನವದೆಹಲಿ: ಭಾನುವಾರ ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯ ತನ್ನ ಆರಂಭಿಕ ಹಾಗೂ ಅತ್ಯಂತ ಮಹತ್ವದ ಪಂದ್ಯದಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಕಟ್ಟಾ ಎದುರಾಳಿ ಪಾಕಿಸ್ತಾನವನ್ನು 107 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಸೋಲಿಸಿದ
ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ತಮ್ಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಹೆಚ್ಚು ಟೀಕೆಗೆ ಒಳಗಾಗಿದ್ದ ಬೌಲಿಂಗ್ ದಾಳಿಯ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಅನ್ನು ದುರ್ಬಲಗೊಳಿಸಿತು.
245 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಬಿಸ್ಮಾ ಮರೂಫ್ ಅವರ ಮಹಿಳಾ ತಂಡ ಹೋರಾಟ ನೀಡಲೂ ವಿಫಲವಾಯತು. ಹಾಗೂ ಅಂತಿಮವಾಗಿ 43 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಪಂದ್ಯದಲ್ಲಿ ಭಾರತದ ೀ ಬೃಹತ್ ಗೆಲುವು ಮತ್ತು ನೆಟ್ ರನ್ ರೇಟ್‌ನ ಭಾಋತಕ್ಕೆ ಹೆಚ್ಚು ಆತ್ಮವಿಶ್ವಾಸ ನೀಡಲಿದೆ.
ಭಾರತವು ಏಕದಿನ ಪಂದ್ಯಗಳಲ್ಲಿ 10-0 ದಾಖಲೆಯೊಂದಿಗೆ ತಮ್ಮ ವಿಶ್ವಕಪ್‌ನ ಆರಂಭಿಕ ಹಂತವನ್ನು ತಲುಪಿತ್ತು ಮತ್ತು 50-ಓವರ್‌ಗಳ ಆಟದ ಸ್ವರೂಪದಲ್ಲಿ ಮಿಥಾಲಿ ರಾಜ್ ತಂಡವು ಅದನ್ನು ಪಾಕಿಸ್ಯತಾನದ ವಿರುದ್ಧವೂ ಮುಂದುವರಿಸಿತು. ಪಾಕ್‌ ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ (30) ಹೊರತುಪಡಿಸಿ, ಪಾಕಿಸ್ತಾನದ ಇತರ ಬ್ಯಾಟ್ಸ್‌ಮನ್‌ಗಳಿಗೆ 20 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ರಾಜೇಶ್ವರಿ ಗಾಯಕ್ವಾಡ್ ಮಾಂತ್ರಿಕ ಸ್ಪಿನ್‌..
ಭಾಋತದ ಮಹಿಳಾ ತಂಡದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಭಾನುವಾರ ಪಾಕಿಸ್ತಾನಕ್ಕೆ ಸಿಂಗಸ್ವಪ್ನವಾದರು.
ಪಾಕಿಸ್ತಾನ ನಿಧಾನಗತಿಯ ಆರಂಭವನ್ನು ಪಡೆದ ನಂತರ ಗಾಯಕ್ವಾಡ್ ಅವರು ಜವೇರಿಯಾ ಖಾನ್ (11) ಅವರನ್ನು ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸು ನೀಡಿದರು. ಪಾಕಿಸ್ತಾನದ ತಂಡ ಮೊದಲ 10 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳಲಿಲ್ಲ ಆದರೆ ಭಾರತ ಕರಾರುವಕ್ಕಾದ ಬೌಲಿಂಗ್‌ನಿಮಧಾಗಿ ಅವರಿಗೆ ರನ್‌ ಗಳಿಸಲೂ ಸಹ ಸಾಧ್ಯವಾಗಲಿಲ್ಲ.
ಅಲಿಯಾ ರಿಯಾಜ್ (11), ಫಾತಿಮಾ ಸನಾ (17) ಮತ್ತು ಸಿದ್ರಾ ನವಾಜ್ (13) ಅವರನ್ನು ಔಟ್ ಮಾಡಿದ ಗಾಯಕ್ವಾಡ್ ಅವರು ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನೇ ಅಲ್ಲಾಡಿಸಿದರು.
ಗಾಯಕ್ವಾಡ್ 10 ಓವರ್‌ಗಳಲ್ಲಿ 4/34 ಸಾಧನೆ ಮಾಡಿದರು. ಹಿರಿಯ ವೇಗಿ ಜೂಲನ್ ಗೋಸ್ವಾಮಿ ಎಂದಿನಂತೆ ಉತ್ತಮವಾಗಿ ಬೌಲಿಂಗ್‌ ಮಾಡಿದರು. ಅವರು ತಮ್ಮ 8 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 16 ರನ್‌ಗಳನ್ನು ನೀಡಿ ಸಿದ್ರಾ ಅಮೀನ್ ಮತ್ತು ನಿದಾ ದಾರ್ (4) ವಿಕೆಟ್‌ಗಳನ್ನು ಪಡೆದರು.
ತನ್ನ ಮಗುವಿನೊಂದಿಗೆ ಬಂದಿರುವ ಪಾಕಿಸ್ತಾನದ ನಾಯಕಿ ಮರೂಫ್, 15 ರನ್ ಗಳಿಸಿ ಔಟಾದಾಗ ದೀಪ್ತಿ ಶರ್ಮಾ ಅವರಿಂದ ಔಟಾದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ವಿಶ್ವಕಪ್ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಪೂಜಾ ವಸ್ತ್ರಕರ್
ಮೊದಲು ಬ್ಯಾಟ್‌ ಮಾಡಿದ ಭಾರತದ ತಂಡದ ಪೂಜಾ ವಸ್ತ್ರಾಕರ್ ಕೇವಲ 59 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ಭಾಋತ ತಂಡಕ್ಕೆ ಭದ್ರ ಬುನಾದಿ ಒದಗಿಸಿದರು. ಸ್ನೇಹಾ ರಾಣಾ (48 ಎಸೆತಗಳಲ್ಲಿ 53) ಅವರೊಂದಿಗೆ ಪಂದ್ಯ-ಪ್ರಶಸ್ತಿ ವಿಜೇತೆ ಪೂಜಾ 7 ನೇ ವಿಕೆಟ್ 123 ರನ್ ಜೊತೆಯಾಟ ನಡೆಸಿದರು. .

ಮಿಥಾಲಿ, ಹರ್ಮನ್‌ಪ್ರೀತ್ ವಿಫಲ
ಸ್ಮೃತಿ ಮಂದಾನ (75 ಎಸೆತಗಳಲ್ಲಿ 52) ಅವರ ಕ್ಲಾಸಿ ಅರ್ಧಶತಕದ ನಂತರ ಸ್ಪಿನ್ನರ್‌ಗಳಾದ ನಶ್ರಾ ಸಂಧು ಮತ್ತು ನಿದಾ ದರ್ ಮಧ್ಯಮ ಕ್ರಮಾಂಕದಲ್ಲಿ ಬೇಗನೆ ನಿರ್ಗಮಿಸಿದಾಗ ಭಾರತವು 150 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವಂತಿತ್ತು. ನಾಯಕಿ ಮಿಥಾಲಿ ರಾಜ್ (9), ಹರ್ಮನ್‌ಪ್ರೀತ್ ಕೌರ್ (5) ರನ್‌ ಮತ್ತು ರಿಚಾ ಘೋಷ್ (1) ಅವರನ್ನು ತ್ವರಿತವಾಗಿ ಕಳೆದುಕೊಂಡ ಭಾರತ 34ನೇ ಓವರ್‌ನಲ್ಲಿ 6 ವಿಕೆಟ್‌ಗೆ 114 ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು.
ಆದಾಗ್ಯೂ, ವಸ್ತ್ರಾಕರ್ ಮತ್ತು ರಾಣಾ ಅವರ ಜೊತೆಯಾಟ ಭಾರತದ ಮೊತ್ತವನ್ನು 244ಕ್ಕೆ ತಂದಿ ನಿಲ್ಲಿಸಿತು. ರಾಣಾ 48 ಎಸೆತಗಳಲ್ಲಿ 4 ಬೌಂಡರಿ ಮೂಲಕ 53 ರನ್‌ ಗಳಿಸಿದರೆ, ವಸ್ತ್ರಾಕರ್ 59 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 67 ರನ್ ಗಳಿಸಿ ಭಾರತ ಬೋರ್ಡ್‌ನಲ್ಲಿ 244 ರನ್ ಗಳಿಸುವಂತೆ ಮಾಡಿದರು.
ಇದಕ್ಕೂ ಮೊದಲು, 3ನೇ ಓವರ್‌ನಲ್ಲಿ ಭಾರತ 0 ರನ್‌ಗೆ ಶಫಾಲಿ ವರ್ಮಾ ಅವರನ್ನು ಕಳೆದುಕೊಂಡ ನಂತರ ಸ್ಮೃತಿ ಮತ್ತು ದೀಪ್ತಿ ಶರ್ಮಾ (40) 2ನೇ ವಿಕೆಟ್‌ಗೆ 92 ರನ್ ಸೇರಿಸಿದರು.
ಗುರುವಾರ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಭಾರತ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್..
ಭಾರತ 50 ಓವರ್‌ಗಳಲ್ಲಿ 244/7 (ಪೂಜಾ 67, ಸ್ನೇಹಾ 53; ಸಂಧು 2/36) ಮೌಂಟ್ ಪಾಕಿಸ್ತಾನ 43 ಓವರ್‌ಗಳಲ್ಲಿ 137-ಆಲೌಟ್ (ಅಮೀನ್ 30; ಗಾಯಕ್‌ವಾಡ್ 4/31, ಗೋಸ್ವಾಮಿ 2/26)

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement