ಜನವರಿಯಲ್ಲಿ ಚುನಾವಣೆಯೇ ? ಕರ್ನಾಟಕದ 1129 ಜಿಪಂ, 3656 ತಾಪಂ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಅಧಿಸೂಚನೆ ಪ್ರಕಟ

ಬೆಂಗಳೂರು: ಕರ್ನಾಟಕದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಪ್ರಕಟಿಸಿದೆ.
 ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆಯ ಪ್ರಕಾರ, ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 1,129 ಸ್ಥಾನಗಳು ಹಾಗೂ ತಾಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 3,656 ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಳಿಸಲಾಗಿದೆ. ಮಹಿಳೆಯರಿಗೆ ಶೇಕಡಾ 50ಕ್ಕೂ ಹೆಚ್ಚಿನ ಸ್ಥಾನಗಳು ಮೀಸಲಾಗಿರುವುದು ಈ ಬಾರಿಯ ವಿಶೇಷತೆ. ಜನವರಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಸಾಧ್ಯತಯಿದೆ ಎಂದುಹೇಳಾಗುತ್ತಿದೆ.
ಜಿಲ್ಲಾ ಪಂಚಾಯಿತಿ ಚುನಾವಣೆಗೆ ವರ್ಗವಾರು ಮೀಸಲಾತಿ ವಿವರ:
ರಾಜ್ಯದ 31 ಜಿಲ್ಲಾ ಪಂಚಾಯತಿಗಳಲ್ಲಿ ಒಟ್ಟು 1,129 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮಹಿಳೆಯರಿಗೆ 571 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಪರಿಶಿಷ್ಟ ಜಾತಿ (ಎಸ್‌ಸಿ): ಒಟ್ಟು 225 ಸ್ಥಾನ (ಮಹಿಳೆಯರಿಗೆ 121 ಸ್ಥಾನ)
ಪರಿಶಿಷ್ಟ ಪಂಗಡ (ಎಸ್‌ಟಿ): ಒಟ್ಟು 102 ಸ್ಥಾನ (ಮಹಿಳೆಯರಿಗೆ 59 ಸ್ಥಾನ)
ಹಿಂದುಳಿದ ವರ್ಗ ‘ಅ’ (ಬಿಸಿ-ಎ): ಒಟ್ಟು 183 ಸ್ಥಾನ (ಮಹಿಳೆಯರಿಗೆ 98 ಸ್ಥಾನ)
ಹಿಂದುಳಿದ ವರ್ಗ ‘ಬ’ (ಬಿಸಿ-ಬಿ): ಒಟ್ಟು 43 ಸ್ಥಾನ (ಮಹಿಳೆಯರಿಗೆ 25 ಸ್ಥಾನ)
ಸಾಮಾನ್ಯ ವರ್ಗ (ಜನರಲ್):‌ ಒಟ್ಟು 576 ಸ್ಥಾನ (ಮಹಿಳೆಯರಿಗೆ 268 ಸ್ಥಾನಗಳು)
ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ 
ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲೂಕು ಪಂಚಾಯಿತಿಗಳಿಂದ ಒಟ್ಟು 3,656 ಸ್ಥಾನಗಳಿಗೆ ವರ್ಗವಾರು ಮೀಸಲಾತಿ ಪ್ರಕಟಿಸಲಾಗಿದೆ.
ಒಟ್ಟು 3,656 ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1,905 ಸ್ಥಾನಗಳು ಮಹಿಳೆಯರಿಗೆ ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ (ಎಸ್‌ಸಿ): 733 (ಮಹಿಳೆಯರಿಗೆ 429)
ಪರಿಶಿಷ್ಟ ಪಂಗಡ (ಎಸ್‌ಟಿ) : 394 (ಮಹಿಳೆಯರಿಗೆ 287)
ಹಿಂದುಳಿದ ವರ್ಗ ‘ಅ’ : 508 (ಮಹಿಳೆಯರಿಗೆ 306)
ಹಿಂದುಳಿದ ವರ್ಗ ‘ಬ’ : 111 (ಮಹಿಳೆಯರಿಗೆ 64)
ಸಾಮಾನ್ಯ : 1,910 (ಮಹಿಳೆಯರಿಗೆ 819)
ಜಿಲ್ಲಾವಾರು ಸ್ಥಾನಗಳ ವಿವರ
ಬೆಳಗಾವಿ : ಗರಿಷ್ಠ 301 ಸ್ಥಾನಗಳು (ಮಹಿಳೆಯರಿಗೆ 154)
ತುಮಕೂರು: 196 ಸ್ಥಾನಗಳು (ಮಹಿಳೆಯರಿಗೆ 100)
ಕಲಬುರಗಿ: 175 ಸ್ಥಾನಗಳು (ಮಹಿಳೆಯರಿಗೆ 90)
ಮೈಸೂರು: 163 ಸ್ಥಾನಗಳು (ಮಹಿಳೆಯರಿಗೆ 84)
ಬಾಗಲಕೋಟೆ: 136 ಸ್ಥಾನಗಳು (ಮಹಿಳೆಯರಿಗೆ 73)
ಮಂಡ್ಯ : 135 ಸ್ಥಾನಗಳು (ಮಹಿಳೆಯರಿಗೆ 69)
ಹಾಸನ : 134 ಸ್ಥಾನಗಳು (ಮಹಿಳೆಯರಿಗೆ 70)
ರಾಯಚೂರು: 133 ಸ್ಥಾನಗಳು (ಮಹಿಳೆಯರಿಗೆ 69)
ದಕ್ಷಿಣ ಕನ್ನಡ : 126 ಸ್ಥಾನಗಳು (ಮಹಿಳೆಯರಿಗೆ 65)
ಚಿತ್ರದುರ್ಗ : 125 ಸ್ಥಾನಗಳು (ಮಹಿಳೆಯರಿಗೆ 65)
ಬೀದರ : 123 ಸ್ಥಾನಗಳು (ಮಹಿಳೆಯರಿಗೆ 63)
ಹಾವೇರಿ : 122 ಸ್ಥಾನಗಳು (ಮಹಿಳೆಯರಿಗೆ 63)
ಶಿವಮೊಗ್ಗ: 113 ಸ್ಥಾನಗಳು (ಮಹಿಳೆಯರಿಗೆ 59)
ಕೋಲಾರ : 107 ಸ್ಥಾನಗಳು (ಮಹಿಳೆಯರಿಗೆ 54)
ಚಿಕ್ಕಬಳ್ಳಾಪುರ : 105 ಸ್ಥಾನಗಳು (ಮಹಿಳೆಯರಿಗೆ 56)
ಕೊಪ್ಪಳ : 104 ಸ್ಥಾನಗಳು (ಮಹಿಳೆಯರಿಗೆ 55)
ಚಿಕ್ಕಮಗಳೂರು : 100 ಸ್ಥಾನಗಳು (ಮಹಿಳೆಯರಿಗೆ 54)
ದಾವಣಗೆರೆ : 98 ಸ್ಥಾನಗಳು (ಮಹಿಳೆಯರಿಗೆ 51)
ಧಾರವಾಡ: 89 ಸ್ಥಾನಗಳು (ಮಹಿಳೆಯರಿಗೆ 47)
ಚಾಮರಾಜನಗರ: 83 ಸ್ಥಾನಗಳು (ಮಹಿಳೆಯರಿಗೆ 43)
ಬಳ್ಳಾರಿ: 80 ಸ್ಥಾನಗಳು (ಮಹಿಳೆಯರಿಗೆ 42)
ಬೆಂಗಳೂರು ದಕ್ಷಿಣ (ರಾಮನಗರ): 77 ಸ್ಥಾನಗಳು (ಮಹಿಳೆಯರಿಗೆ 40)
ಬೆಂಗಳೂರು ನಗರ: 76 ಸ್ಥಾನಗಳು (ಮಹಿಳೆಯರಿಗೆ 40)
ಬೆಂಗಳೂರು ಗ್ರಾಮಾಂತರ: 75 ಸ್ಥಾನಗಳು (ಮಹಿಳೆಯರಿಗೆ 38)
ಗದಗ : 77 ಸ್ಥಾನಗಳು (ಮಹಿಳೆಯರಿಗೆ 41)
ಕೊಡಗು : 48 ಸ್ಥಾನಗಳು (ಮಹಿಳೆಯರಿಗೆ 26)
ಉತ್ತರ ಕನ್ನಡ : 118 ಸ್ಥಾನಗಳು (ಮಹಿಳೆಯರಿಗೆ 65)
ಉಡುಪಿ : 95 ಸ್ಥಾನಗಳು (ಮಹಿಳೆಯರಿಗೆ 49)
ವಿಜಯಪುರ: 157 ಸ್ಥಾನಗಳು (ಮಹಿಳೆಯರಿಗೆ 83)
ವಿಜಯನಗರ: 93 ಸ್ಥಾನಗಳು (ಮಹಿಳೆಯರಿಗೆ 49)
ಯಾದಗಿರಿ: 92 ಸ್ಥಾನಗಳು (ಮಹಿಳೆಯರಿಗೆ 48)
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಮಂಗಳವಾರದ ನಡೆದಿದ್ದ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಜನವರಿ‌ಯಲ್ಲಿ ಚುನಾವಣೆ ನಡೆಸುವ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಮುಖ್ಯಮಂತ್ರಿ ಶಿವಕುಮಾರಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಡಿಸೆಂಬರ್ ನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿ ಜನವರಿಯಲ್ಲಿ ಚುನಾವಣೆ ಪೂರ್ಣಗೊಳಿಸುವಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಳಿಕ ಗ್ರಾಮ ಪಂಚಾಯತಿ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement