ಬೆಂಗಳೂರು: ಎರಡು ದಿನಗಳ ಹಿಂದೆ ಕನ್ನಡ ಭಾರತದ ಅತ್ಯಂತ ಕೊಳಕು ಭಾಷೆ ಎಂದು ಗೂಗಲ್ ಸರ್ಚ್ನಲ್ಲಿ ತೋರಿಸುವ ಮೂಲಕ ಕನ್ನಡಿಗರ ವಿರೋಧವನ್ನು ಎದುರಿಸಿತ್ತು. ಈಗ ಅಮೆಜಾನ್ ಇದೇ ರೀತಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಗೂಗಲ್ನಲ್ಲಿ ಕನ್ನಡ ಭಾಷೆಗೆ ಅವಹೇಳನ ಮಾಡಿ, ಕ್ಷಮೆ ಕೇಳಿದ ಬೆನ್ನಲ್ಲೇ ಜಗತ್ತಿನ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ವೇದಿಕೆ ಅಮೆಜಾನ್ನಲ್ಲಿ ಕನ್ನಡ ಧ್ವಜದ ಬಣ್ಣದ ಬಿಕಿನಿ ಮಾರಾಟಕ್ಕೆ ಇಡಲಾಗಿದೆ. ಕೆನಡಾ ದೇಶದಲ್ಲಿ ಅಮೆಜಾನ್ ಆನ್ಲೈನ್ ಶಾಪಿಂಗ್ ಸೈಟ್ನಲ್ಲಿ ಕನ್ನಡ ಧ್ವಜವಾದ ಕೆಂಪು, ಹಳದಿ ಬಣ್ಣವಿರುವ ಜೊತೆಗೆ ಕರ್ನಾಟಕದ ಧ್ವಜದ ಲಾಂಛನವಿರುವ ಬಿಕಿನಿ ಮಾರಾಟಕ್ಕೆ ಇಡಲಾಗಿದೆ.
ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಈ ಬಿಕಿನಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇದರ ಪೂರೈಕೆ ಭಾರತದಲ್ಲಿ ಇಲ್ಲ.ಕೆನಡಾ ದೇಶದಲ್ಲಿ ಈ ಅವಾಂತರ ನಡೆದಿದೆ. ಕರ್ನಾಟಕದ ಹೆಸರು ಬಳಸಿ ಈ ಧ್ವಜದ ಚಿತ್ರವಿರುವ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ.
ಎರಡು ದಿನಗಳ ಹಿಂದಷ್ಟೇ ಗೂಗಲ್ನಲ್ಲಿ ವೆಬ್ಸೈಟ್ ಲಿಂಕ್ ಒಂದು ಭಾರತದ ಕೊಳಕು ಭಾಷೆ ಯಾವುದು ಎಂದು ಸರ್ಚ್ ಮಾಡಿದರೆ ಗೂಗಲ್ನಲ್ಲಿ ಕನ್ನಡ ಎಂದು ತೋರಿಸುತ್ತಿತ್ತು. ಟ್ವಿಟ್ಟರ್ನಲ್ಲಿ ಕನ್ನಡಿಗರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತುಕೊಂಡ ಗೂಗಲ್ ಕನ್ನಡದಲ್ಲಿಯೇ ಕ್ಷಮೆಯನ್ನೂ ಕೇಳಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ