ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನಲ್ಲಿ ಪತ್ತೆಯಾದ ಎರಡನೇ ಮಹಾಯುದ್ಧದ ಬೃಹತ್ ಬಾಂಬ್ ಗುರುವಾರ ಮುಂಜಾನೆ ಸುರಕ್ಷಿತವಾಗಿ ಸ್ಫೋಟಗೊಂಡಿದೆ ಎಂದು ನಗರದ ಅಗ್ನಿಶಾಮಕ ಸೇವೆ ತಿಳಿಸಿದೆ.
ನಗರದ ಜನನಿಬಿಡ ನಾರ್ಡೆಂಡ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದ ವೇಳೆ 500 ಕಿಲೋಗ್ರಾಂಗಳಷ್ಟು ಸ್ಫೋಟಿಸದ ಬಾಂಬ್ ಅನ್ನು ಬುಧವಾರ ಪತ್ತೆ ಮಾಡಲಾಗಿತ್ತು. ಸ್ಥಳ ಅಗ್ನಿಶಾಮಕ ದಳದವರು ಅದನ್ನು ತೆಗೆಯುವುದು “ನಿರ್ದಿಷ್ಟ ಸವಾಲು” ಎಂದು ಹೇಳಿತ್ತು..
ಸುಮಾರು ಎರಡು ಮೀಟರ್ (6.5 ಅಡಿ) ಆಳದಲ್ಲಿ ಮಕ್ಕಳ ಆಟದ ಮೈದಾನದ ಪಕ್ಕದಲ್ಲಿಯೇ ಈ ಬೃಹತ್ ಬಾಂಬ್ ಪತ್ತೆಯಾಗಿತ್ತು ಎಂದು ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಪತ್ರಿಕೆ ವರದಿ ಮಾಡಿದೆ.
ವರದಿ ಪ್ರಕಾರ, ಮಧ್ಯರಾತ್ರಿಯ ನಂತರ ಸಂಭವಿಸಿದ ನಿಯಂತ್ರಿತ ಸ್ಫೋಟವು “ಗುಡುಗು ಸದ್ದು ಮಾಡುವಂತೆ ಭಾಸವಾಗುತ್ತಿತ್ತು ಮತ್ತು ಮೂರು ಮೀಟರ್ ಆಳ ಮತ್ತು ಹತ್ತು ಮೀಟರ್ ಅಗಲದ ರಂಧ್ರ ನಿರ್ಮಾಣಕ್ಕೆ ಕಾರಣವಾಯಿತು.
ಸುತ್ತಮುತ್ತಲಿನ ಕಟ್ಟಡಗಳಿಗೆ ಆಗುವ ಹಾನಿ ಕಡಿಮೆ ಮಾಡುವ ಸಲುವಾಗಿ, ಬಾಂಬ್ ಸ್ಫೋಟಿಸುವ ಮೊದಲು 40 ಟ್ರಕ್ ಲೋಡ್ ಮರಳಿನಿಂದ ಅದನ್ನು ಮುಚ್ಚಲಾಗಿತ್ತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.ಸುಮಾರು 25 ಸಾವಿರ ಜನರನ್ನು ಈ ಪ್ರದೇಶವನ್ನು ಸ್ಥಳಾಂತರಿಸಲು ತಿಳಿಸಲಾಗಿತ್ತು.
ಮಹಾಯುದ್ಧದ ಸಂಘರ್ಷ ಮುಗಿದು 76 ವರ್ಷಗಳ ನಂತರ ಜರ್ಮನಿಯಲ್ಲಿ ಎರಡನೇ ಮಹಾಯುದ್ಧದ ಈ ಬೃಹತ್ ಬಾಂಬ್ ಪತ್ತೆಯಾಗಿದೆ.
2020 ರಲ್ಲಿ ಬರ್ಲಿನ್ ಬಳಿಯ ಭೂಮಿಯಲ್ಲಿ ಏಳು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು., ಅಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳಿಗಾಗಿ ಯುರೋಪಿನ ತನ್ನ ಮೊದಲ ಕಾರ್ಖಾನೆ ನಿರ್ಮಿಸಲು ಯೋಜಿಸಿದೆ.
ಕಳೆದ ವರ್ಷ ಫ್ರಾಂಕ್‌ಫರ್ಟ್, ಕಲೋನ್ ಮತ್ತು ಡಾರ್ಟ್ಮಂಡ್‌ನಲ್ಲಿ ಸಹ ಬಾಂಬ್‌ಗಳು ಪತ್ತೆಯಾಗಿತ್ತು. ಫ್ರಾಂಕ್‌ಫರ್ಟ್‌ನಲ್ಲಿ, 2017 ರಲ್ಲಿ 1.4 ಟನ್ ಬಾಂಬ್‌ನ ಆವಿಷ್ಕಾರವು 65,000 ಜನರನ್ನುಅಲ್ಲಿಂದ ಸ್ಥಳಾಂತರಿಸಲು ಕಾರಣವಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ