

ಅಮೆರಿಕದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಎನ್ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಕಂಪನಿಯ ಸಿಇಒ ಆಗಿ ಬಂದಿದ್ದಾರೆ. ಈ ಕ್ರಮವು ಎನ್ವಿಡಿಯಾಕ್ಕೆ ನಾಟಕೀಯ ಬೆಳವಣಿಗೆಯಾಗಿದೆ. ಯಾಕೆಂದರೆ ಹುವಾಂಗ್ ನಿರ್ಗಮನದ ನಂತರ ಅವರನ್ನು ಮರಳಿ ಕರೆತರುವುದನ್ನು ಕಂಪನಿಯು ಮಂಡಳಿಯು ತಳ್ಳಿಹಾಕಿತ್ತು, ಅವರ ವಿವಾಹೇತರ ಸಂಬಂಧ ಹಾಗೂ ಚೀನಾದ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಅಮೆರಿಕ ಗುಪ್ತಚರ ಇಲಾಖೆ ಶಂಕಿಸಿರುವ ಸಿಂಗಾಪುರ ಮೂಲದ ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕ ಆಲಿಸ್ ಹುವಾಂಗ್ ಜೊತೆಗಿನ ಸಂಬಂಧವೂ ಸೇರಿದಂತೆ ಕೆಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೆನ್ಸನ್ ಹುವಾಂಗ್ ಜೆನ್ಸನ್ ಹುವಾಂಗ್ ಎನ್ವಿಡಿಯಾ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. .
ಅವರನ್ನು ಮರಳಿ ಅದೇ ಹುದ್ದೆಗೆ ಕರೆತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದಾಗಿ ಮಧ್ಯಪ್ರವೇಶಿಸಿ, ಕಂಪನಿಯ ಆಡಳಿತ ಮಂಡಳಿಯ ಮೇಲೆ ಭಾರೀ ಒತ್ತಡ ಹೇರಿದ್ದರು ಎಂದು ಸಿಎನ್ಎನ್ ವರದಿ ಮಾಡಿದೆ. ಹುವಾಂಗ್ ರಾಜೀನಾಮೆ ನೀಡಿದ ಕೇವಲ 11 ದಿನಗಳಲ್ಲೇ ಅವರನ್ನು ಮತ್ತೆ ಸಿಇಒ ಹುದ್ದೆಗೆ ನೇಮಿಸುವಂತೆ ಶ್ವೇತಭವನದಿಂದ ಪ್ರಯತ್ನ ನಡೆದಿತ್ತು ಎಂದು ವರದಿ ತಿಳಿಸಿದೆ.
ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾಗಿ, ಆಡಳಿತದ ಮೇಲೆ ಒತ್ತಡ ಹೆಚ್ಚಾಗಿದ್ದ ಸಂದರ್ಭದಲ್ಲಿ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದರು. ಎನ್ವಿಡಿಯಾದ ಭವಿಷ್ಯವು ಅಮೆರಿಕದ ಒಟ್ಟಾರೆ ಆರ್ಥಿಕತೆ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಮಹತ್ವಾಕಾಂಕ್ಷೆಗಳಿಗೆ ನಿರ್ಣಾಯಕವಾಗಿದೆ ಎಂಬ ನಿಲುವಿಗೆ ಟ್ರಂಪ್ ಬಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಪ್ರಯತ್ನದ ನೇತೃತ್ವವನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ವಹಿಸಿದ್ದರು. ವಾರಾಂತ್ಯದಲ್ಲಿ ಅವರು ಆಡಳಿತದ ಪರವಾಗಿ ಜೆನ್ಸನ್ ಹುವಾಂಗ್ ಅವರ ಜೊತೆ ಸಂಪರ್ಕ ಸಾಧಿಸಿ, ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವಂತೆ ಎನ್ವಿಡಿಯಾ ಆಡಳಿತ ಮಂಡಳಿಯ ಸದಸ್ಯರಿಗೆ ಖಾಸಗಿಯಾಗಿ ಮನವಿ ಮಾಡಿದ್ದರು. ಚೀನಾ ಗುಪ್ತಚರ ಇಲಾಖೆ ಜೊತೆ ಸಂಪರ್ಕ ಹೊಂದಿರುವ ಶಂಕೆಯಿರುವ ಮಹಿಳೆಯೊಬ್ಬರ ಜೊತೆ ಹುವಾಂಗ್ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಗಳು ವ್ಯಕ್ತವಾಗಿದ್ದವು. ಆದರೆ, ಹುವಾಂಗ್ ಅವರಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿದೆ ಎಂಬುದಕ್ಕೆ ಸರ್ಕಾರಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಹಿರಿಯ ಅಧಿಕಾರಿಗಳು ಕಂಪನಿಗೆ ಭರವಸೆ ನೀಡಿದ್ದರು.
ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ನೇಮಕ ಮಾಡುವಂತೆ ಟ್ರಂಪ್ ಸ್ವತಃ ಎನ್ವಿಡಿಯಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಅಮೆರಿಕದ ತಂತ್ರಜ್ಞಾನ ಹಾಗೂ ಆರ್ಥಿಕ ಪ್ರಾಬಲ್ಯವನ್ನು ಉಳಿಸಿಕೊಳ್ಳುವಲ್ಲಿ ಹುವಾಂಗ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.
ಎನ್ವಿಡಿಯಾ ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸಿರುವುದಾಗಿ ಘೋಷಿಸಿದ ಸ್ವಲ್ಪ ಹೊತ್ತಿನಲ್ಲೇ ಮಾತನಾಡಿದ ಟ್ರಂಪ್, “ನಾನು ಆಡಳಿತ ಮಂಡಳಿಯೊಂದಿಗೆ ನೇರವಾಗಿಯೂ ಪರೋಕ್ಷವಾಗಿಯೂ ಮಾತನಾಡುತ್ತಿದ್ದೆ. ಈ ವಿಷಯದಲ್ಲಿ ನನಗೆ ಬಲವಾದ ಅಭಿಪ್ರಾಯವಿತ್ತು” ಎಂದು ಹೇಳಿದ್ದರು.“ನಮ್ಮ ಅತ್ಯುತ್ತಮ ತಾರೆಯರಲ್ಲಿ ಒಬ್ಬರು ಮತ್ತೆ ಕಣಕ್ಕೆ ಮರಳಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದೂ ಟ್ರಂಪ್ ಪ್ರತಿಕ್ರಿಯಿಸಿದ್ದರು.
ಸಿಎನ್ಎನ್ ವರದಿಯು ಉಲ್ಲೇಖಿಸಿರುವ ಈ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಶ್ವೇತಭವನದ ಈ ಪ್ರಯತ್ನವನ್ನು ಅತ್ಯಂತ ಗೌಪ್ಯವಾಗಿ ನಡೆಸಲಾಗಿತ್ತು. ಕಂಪನಿಯ ಸೋಮವಾರದ ಅಧಿಕೃತ ಘೋಷಣೆಗೆ ಕೆಲವೇ ಕ್ಷಣಗಳ ಮೊದಲು ಎನ್ವಿಡಿಯಾದ ಕೆಲವು ಹಿರಿಯ ಉದ್ಯೋಗಿಗಳಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ವರದಿ ತಿಳಿಸಿದೆ.


ಹುವಾಂಗ್ ಅವರನ್ನು ಮರಳಿ ಕರೆತರಲು ಟ್ರಂಪ್ ಏಕೆ ಬಯಸಿದರು?
ಜೆನ್ಸನ್ ಹುವಾಂಗ್ ಅವರು ಸಿಇಒ ಸ್ಥಾನದಿಂದ ನಿರ್ಗಮಿಸಿದ ಬಳಿಕ ಎನ್ವಿಡಿಯಾ ಷೇರುಗಳ ಮೌಲ್ಯದಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. ಇದು ಅಮೆರಿಕದ ಷೇರು ಮಾರುಕಟ್ಟೆಯಲ್ಲೂ ನಷ್ಟಕ್ಕೆ ಕಾರಣವಾಗಿತ್ತು. ಅಲ್ಲದೆ, ಅಮೆರಿಕದ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಬೆಳವಣಿಗೆಯ ವೇಗ ಕುಂಠಿತವಾಗುತ್ತಿದೆಯೇ ಎಂಬ ಆತಂಕಕ್ಕೂ ಕಾರಣವಾಗಿತ್ತು.
ಷೇರು ಮಾರುಕಟ್ಟೆಯ ಕುಸಿತದ ಕುರಿತು ಟ್ರಂಪ್ ಹಲವು ದಿನಗಳಿಂದ ತಮ್ಮ ಸಲಹೆಗಾರರ ಜೊತೆ ಚರ್ಚೆ ನಡೆಸಿದ್ದರು. ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸಬೇಕಾದರೆ ಎನ್ವಿಡಿಯಾದಲ್ಲಿ ಹುವಾಂಗ್ ಅವರನ್ನು ಮತ್ತೆ ನಾಯಕತ್ವಕ್ಕೆ ಕರೆತರುವುದು ಅತ್ಯಗತ್ಯ ಎಂಬ ನಿರ್ಧಾರಕ್ಕೆ ಅವರು ಬಂದಿದ್ದರು ಎಂದು ವರದಿ ತಿಳಿಸಿದೆ.
ಆರಂಭದಲ್ಲಿ ಎನ್ವಿಡಿಯಾದ ಸಿಇಒ ಸ್ಥಾನಕ್ಕೆ ಆಪಲ್ನ ಮಾಜಿ ಸಿಇಒ ಟಿಮ್ ಕುಕ್ ಅವರನ್ನು ನೇಮಿಸುವ ಸಾಧ್ಯತೆಯನ್ನೂ ಟ್ರಂಪ್ ಪ್ರಸ್ತಾಪಿಸಿದ್ದರು. ಆದರೆ, ಕಂಪನಿಯು ತನ್ನ ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ (Colette Kress) ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿತ್ತು. ಕಳೆದ ವಾರ ಸಿಎನ್ಬಿಸಿಗೆ ಅವರು ನೀಡಿದ ಸಂದರ್ಶನವನ್ನು ವೀಕ್ಷಿಸಿದ ಬಳಿಕ ಟ್ರಂಪ್ ತೃಪ್ತರಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಾಲ್ಕು ದಿನಗಳ ಏಷ್ಯಾ ಪ್ರವಾಸ ಮುಗಿಸಿ ಶುಕ್ರವಾರ ಅಮೆರಿಕಕ್ಕೆ ಮರಳಿದ ಬಳಿಕ ಟ್ರಂಪ್ ಅವರ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ತಮ್ಮ ಏಷ್ಯಾ ಪ್ರವಾಸದ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಜೆನ್ಸನ್ ಹುವಾಂಗ್ ಅವರನ್ನು ಹೊಗಳಿದ್ದರು ಎಂದು ಟ್ರಂಪ್ ಹೇಳಿದ್ದರು. ಇದೇ ಸಂದರ್ಭದಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಸತತ ಐದು ದಿನಗಳ ಐತಿಹಾಸಿಕ ಕುಸಿತವನ್ನು ದಾಖಲಿಸಿತ್ತು.
ಈ ಹಿಂದೆ ಟ್ರಂಪ್ ಸಾರ್ವಜನಿಕವಾಗಿಯೇ ಜೆನ್ಸನ್ ಹುವಾಂಗ್ ಅವರನ್ನು ‘ಲೆಜೆಂಡ್’ ಎಂದು ಬಣ್ಣಿಸಿ, ಅವರು ಮತ್ತೆ ಎನ್ವಿಡಿಯಾ ಸಿಇಒ ಆಗಿ ಬರುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಬಳಿಕ ಈ ಪ್ರಯತ್ನದ ಸಂಪೂರ್ಣ ಹೊಣೆಯನ್ನು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ವಹಿಸಿದ್ದರು. ಸಿಲಿಕಾನ್ ವ್ಯಾಲಿಯ ಪ್ರಭಾವಿ ವ್ಯಕ್ತಿಗಳೊಂದಿಗೆ ವ್ಯಾನ್ಸ್ ಹೊಂದಿರುವ ನಿಕಟ ಸಂಪರ್ಕವೂ ಈ ಜವಾಬ್ದಾರಿ ವಹಿಸಲು ಪ್ರಮುಖ ಕಾರಣವಾಗಿತ್ತು.
ಮುಂದಿನ 72 ಗಂಟೆಗಳ ಅವಧಿಯಲ್ಲಿ ವ್ಯಾನ್ಸ್ ಅವರು ನೇರವಾಗಿ ಜೆನ್ಸನ್ ಹುವಾಂಗ್ ಅವರ ಜೊತೆ ಸಮನ್ವಯ ಸಾಧಿಸಿ, ಎನ್ವಿಡಿಯಾ ಆಡಳಿತ ಮಂಡಳಿಯನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದರು. ಹುವಾಂಗ್ ಅವರಿಂದ ಯಾವುದೇ ಕಾನೂನುಬಾಹಿರ ಕೃತ್ಯ ನಡೆದಿರುವುದು ಅಥವಾ ಅವರ ಮುಂದುವರಿಕೆ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡಲಿದೆ ಎಂಬುದಕ್ಕೆ ಸರ್ಕಾರಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂಬುದನ್ನು ಮಂಡಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು ಎಂದು ಮೂಲಗಳು ಸಿಎನ್ಎನ್ಗೆ ತಿಳಿಸಿವೆ.
ಈ ಇಡೀ ಪ್ರಯತ್ನದಲ್ಲಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತು ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕೂಡ ಭಾಗಿಯಾಗಿದ್ದರು ಎಂದು ವರದಿ ಹೇಳಿದೆ.



ನಿಮ್ಮ ಕಾಮೆಂಟ್ ಬರೆಯಿರಿ