ವಿದ್ಯುತ್ ಸರಬರಾಜು ಕಂಪನಿಗಳ ಅಸಮರ್ಥತತೆಯಿಂದಾದ ನಷ್ಟ ಬಳಕೆದಾರರ ಮೇಲೆ ಹೇರುವುದ್ಯಾಕೆ..? ವಸಂತ ಲದವಾ ಪ್ರಶ್ನೆ

ಹುಬ್ಬಳ್ಳಿ: ವಿದ್ಯುತ್ ಸರಬರಾಜು ಕಂಪನಿಗಳು ೨೦೨೦-೨೧ರಲ್ಲಿ ೧೩೫೨.೧೪ ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದ್ದರಿಂದ ಈ ಕೊರತೆ ವಿದ್ಯತ್ ದರ ಏರಿಕೆ ಮೂಲಕ ಭರಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಅನುಮೋದನೆಗಾಗಿ ಮನವಿ ಸಲ್ಲಿಸಿವೆ. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸುವ ಹೇಳಿಕೆ ನೀಡಿದೆ. ಕಂಪನಿಗಳ ಆಡಳಿತ ಅಸಮರ್ಥತೆ ಮತ್ತು ವೈಫಲ್ಯತೆಯಿಂದ ಅನುಭವಿಸಿದ ನಷ್ಟ ರಾಜ್ಯದ ೫೫,೫೭,೧೦೮ ಮುಗ್ದ ಬಳಕೆದಾರರ ಮೇಲೆ ಹೇರುವ ಕ್ರಮ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ತೀವ್ರವಾಗಿ ಖಂಡಿಸಿದ್ದಾರೆ.
ದೇಶದ ಅತ್ಯುನ್ನತ ಲೆಕ್ಕಪರಿಶೋಧನಾ ಸಂಸ್ಥೆ ಸಿ.ಎ.ಜಿ. ಎಸ್ಕಾಮಗಳ ನಷ್ಟಕ್ಕೆ ಆಡಳಿತದ ಅಸಮರ್ಥತೆ ಕಾರಣವೆಂದು ಸ್ಪಷ್ಟಪಡಿಸಿದೆ. ಆದ್ದರಿಂದ ನಷ್ಟಕ್ಕೆ ಕೇವಲ ಕಂಪನಿಗಳನ್ನೇ ಹೊಣೆಗಾರರನ್ನಾಗಿ ಮಾಡುವ ಬದಲು ಬಳಕೆದಾರರ ಮೇಲೆ ದರ ಹೇರುವುದನ್ನು ವಸಂತ ಲದವಾ ತೀವ್ರವಾಗಿ ವಿರೋಧಿಸಿದ್ದಾರೆ.
ಎಸ್ಕಾಮಳು ಗ್ರಿಡ್ ಸಂಹಿತೆ ಮೀರಿ ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ಕೈಪಿಡಿ ಮೀರಿ ೩೮೭೦ ಕೋಟಿ ರೂ.ಗಳ ವೆಚ್ಚದ ಯೋಜನೇತರ ಯೋಜನೆಯಿಂದ ೫೨೩೦ ದಶಲಕ್ಷ ಯುನಿಟ್ ಪ್ರಸರಣಾ ಸಾಮರ್ಥ್ಯ ಹೆಚ್ಚಿಸಿದೆ. ಈ ಯೋಜನೆಯ ಉಪಕೇಂದ್ರಗಳ ನಿರ್ಮಾಣಕ್ಕೆ ವಿನ್ಯಾಸ ಸಿದ್ಧಪಡಿಸಿ ಟೆಂಡರ್ ಕರೆಯುವ ಮೊದಲು ಯೋಜನಾ ಕ್ಷೇತ್ರಗಳ ಸ್ಥಿತಿಗತಿ ಪರಿಶೀಲಿಸಿ ಅರಣ್ಯ ಇಲಾಖೆ, ರೈಲು ಇಲಾಖೆ, ಭಾರತೀಯ ಟೆಲಿಗ್ರಾಫ್ ಇಲಾಖೆಗಳ ಅನುಮೋದನೆ ಪಡೆಯದ ಕಾರಣ ‌ ೧೫೫೪.೨೭ ಕೋಟಿ ರೂ.ಗಳ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗಿದೆ. ಪರಿಶೀಲಿಸಿದ ೫೩ ಯೋಜನೆಗಳಲ್ಲಿ ೫೦ ಯೋಜನೆಗಳು ಹನ್ನೆರಡು ವರ್ಷದ ವರೆಗೆ ತಡವಾಗಿವೆ. ಇದರಿಂದ ೫೫೬.೪೨ ಕೋಟಿ ರೂ.ಗಳ ಮೌಲ್ಯದ ೧೬೫೬ ದಶಲಕ್ಷ ಯುನಿಟ್ ವಿದ್ಯುತ್‌ಚ್ಛಕ್ತಿ ಉಳಿತಾಯದಿಂದ ವಂಚಿತವಾಯಿತು. ೫೬೬.೯೨ ಕೋಟಿ ರೂ.ಗಳ ವೆಚ್ಚದ ೨೦ ಕೆಲಸಗಳು ಡಿಸೆಂಬರ ೨೦೧೯ರ ವರೆಗೂ ಅಪೂರ್ಣಗೊಂಡಿವೆ. ೨೦೧೪ ರಿಂದ ೨೦೧೯ರ ವರೆಗೆ ಸಾಲದ ಮೇಲೆ ಪ್ರತಿವರ್ಷ ೫೫.೧೬ ಕೋಟಿ ರೂ. ಬಡ್ಡಿ ತೆರಲಾಗಿದೆ. ೪೪೯.೮೧ ಕೋಟಿ ರೂ. ವೆಚ್ಚದ ವಿತರಣಾ ಪರಿವರ್ತಕ ಕೇಂದ್ರ (ಡಿಟಿಸಿ) ಅನುಷ್ಠಾನದಲ್ಲಿ ೧೩೩.೬೩ ಕೋಟಿ ರೂ.ಬಡ್ಡಿ ತುಂಬಿದ ಎಸ್ಕಾಂ ಪ್ರತಿ ವರ್ಷ ೪೦.೪೩ ಕೋಟಿ ರೂ.ಗಳಷ್ಟು ಬಡ್ಡಿ ತುಂಬಬೇಕಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣ ವೆಚ್ಚದ ಮೀಟರಿಂಗ್‌ ಯೋಜನೆ ಪೂರ್ಣ ಫಲಪ್ರದವಾಗಲಿಲ್ಲ ಡಿಟಿಸಿ ಮಟ್ಟದಲ್ಲಿ ಆಗುತ್ತಿರುವ ನಿರ್ದಿಷ್ಟ ಹಾನಿ ನಿರ್ಧರಿಸುವಲ್ಲಿ, ಅಪೂರ್ಣ ಬಳಕೆಯ ಮ್ಯಾಪಿಂಗ್‌ ಸಂಹವನವಿಲ್ಲದ ಮೀಟರುಗಳ, ಅಸಮರ್ಥ ಜಾಲಬಂಧ, ತಂತ್ರಾಂಶ ಏಕೀಕರಣಗಳ ಕೊರತೆಗಳಿಂದ ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ.
ನಿರ್ದಿಷ್ಠ ವಿತರಣಾ ಹಾನಿ ತಡೆಯುವಲ್ಲಿ ವಿಫಲಲವಾಗಿದ್ದರಿಂದ ಕಂಪನಿ ೩೭೪.೯೮ ಕೋಟಿ ರೂ.ಗಳ ದಂಡ ತೆರಬೇಕಾಯಿತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ದುರಸ್ತಿ ಕಾರ್ಯಗಳು ಕೈಗೊಳ್ಳುವಲ್ಲಿ ತನ್ನದೇ ಆದ ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ. ಪರಿಶೋಧಿತ ಪರಿವರ್ತಕಗಳ ಪೈಕಿ ರೂ. ೪೧.೫೫ ಕೋಟಿ ವೆಚ್ಚದ ೬೪% ಪರಿವರ್ತಕಗಳು ಏಳೂವರೆ ವರ್ಷದ ವರೆಗೆ ದುರಸ್ತಿಯಾಗದೆ, ವ್ಯವಸ್ಥೆಯಲ್ಲಿ ಬಳಕೆಯಾಗದ ಕಾರಣ ೭೫.೯೦ ಕೋಟಿ ರೂ. ವೆಚ್ಚದಲ್ಲಿ ಹೊಸ ಪರಿವರ್ತಗಳನ್ನು ಖರೀದಿಸಲಾಗಿದೆ. ಇದು ಅತ್ಯುನ್ನತ ಲೆಕ್ಕ ತಪಾಸಣೆ ಸಂಸ್ಥೆ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ ಎಂದು ವಸಂತ ಲದವಾ ಹೇಳಿದ್ದಾರೆ.
ಹೆಸ್ಕಾಂ, ಕೆ.ಇ.ಆರ್.ಸಿ. ಅನಮೋದನೆ ಇಲ್ಲದೆ ವಿದ್ಯುತ್ ಖರೀದಿ ಬಿಲ್ ಸಮಯಕ್ಕೆ ಸರಿಯಾಗಿ ಸಂದಾಯ ಮಾಡದಿರುವ ಕಾರಣ ರೂ. ೬೨೪.೪೦ ಕೋಟಿ ರೂ. ಬಡ್ಡಿ ೨೫.೨೫ ಕೋಟಿ ರೂ. ದುಡಿಯುವ ಬಂಡವಾಳ ಸಾಲದ ಬಡ್ಡಿ ತುಂಬಿದೆ. ಸರಕು ಮತ್ತು ಸೇವಾ ತೆರಿಗೆ ವಿಧಿವಿಧಾನಗಳು ಸಮಯಕ್ಕೆ ಸರಿಯಾಗಿ ನಿರ್ವಹಿಸದ ಕಾರಣ ೫.೮೩ ಕೋಟಿ ರೂ. ಬಡ್ಡಿ ಮತ್ತು ದಂಡಗಳ ಕ್ರಮ ಎದುರಿಸುತ್ತಿದೆ. ಎಸ್ಕಾಂಗಳ ಇಂಥ ಅಚಾತುರ್ಯ, ನ್ಯೂನ್ಯತೆ ಅಸಮರ್ಥತೆಯ ಕಾರಣದಿಂದ ಕಂಪನಿಗಳು ನಷ್ಟ/ಕೊರತೆ ಅನುಭವಿಸುತ್ತಿದ್ದು ಅವುಗಳ ಹೊಣೆ ಕೇವಲ ಆಡಳಿತದ ಮೇಲೆ ಹೇರಬೇಕಾಗಿದ್ದು ಬಳಕೆದಾರರ ಮೇಲೆ ಹೇರುವ ಕ್ರಮ ಖಂಡನೀಯ ಎಂದು ವಸಂತ ಲದವಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಕ್ರಮ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

 

 

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement