ಧಾರಾಕಾರ ಮಳೆ: ಅಘನಾಶಿನಿ ನದಿ ತಟದಲ್ಲಿ ಪ್ರವಾಹ ಭೀತಿ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಒಂದುವಾರದಿಂದ ಎಡೆ-ಬಿಡದೆ ಮಳೆ ಸುರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.
ಅಘನಾಶನಿ ನದಿಯು ಉಕ್ಕಿ ಹರಿಯುತ್ತಿದೆ. ರಭಸದಿಂದ ಬಿಸುತ್ತಿರುವ ಬಿರುಗಾಳಿಯಿಂದ ಸಮುದ್ರದ ಭೋರ್ಗರೆತವು ಹೆಚ್ಚಿದ್ದು ಅಘನಾಣಿನಿಯ ನೀರು ಸಮುದ್ರ ಸೇರದೆ ತಗ್ಗು ಪ್ರದೇಶಕ್ಕೆ ನುಗ್ಗುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.
ಅಘನಾಶಿನಿ ಹಿನ್ನೀರು ಪ್ರದೇಶವಾದ ಲುಕ್ಕೇರಿ, ಮಾಸೂರು, ಹಣ್ಣೇಮಠ ಇತ್ಯಾದಿ ಪ್ರದೇಶದಲ್ಲಿ ನದಿಯ ನೀರು ತುಂಬಿದ್ದು ಭತ್ತದ ಗದ್ದೆಗಳೆಲ್ಲ ನೀರಿನಲ್ಲಿ ಮುಳುಗಿದೆ. ಮದ್ಗುಣಿ ,ಹಣ್ಣೇಮಠದಲ್ಲಿ ಮನೆಯ ಬಾಗಿಲಿನ ತನಕ ಪ್ರವಾಹದ ನೀರು ತುಂಬಿದೆ. ಹೆಗಡೆ ,ಮಿರ್ಜಾನ ತಾರಿ ,ಮೊಸಳೆ ಸಾಲು,ದಿವಗಿ ಇತ್ಯಾದಿ ಪ್ರದೇಶದಲ್ಲಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಸಜ್ಜಾಗಿರುವ ತಾಲೂಕಾ ಆಡಳಿತ;
ಪ್ರವಾಹದಿಂದ ಜನರನ್ನು ರಕ್ಷಿಸಲು ತಾಲೂಕಾ ಆಡಳಿತ ಸಜ್ಜಾಗಿದೆ.ತಗ್ಗು ಪ್ರದೇಶದ ಜನರಿಗೆ ಈಗಾಗಲೆ ಎಚ್ಚರಿಕೆ ನೀಡಿದ್ದೇವೆ ಎಂದು ಉಪವಿಭಾಗಾಧಿಕಾರಿ ಎಂ.ಅಜೀತ ಅವರು ತಿಳಿಸಿದರು. ದೋಣಿ ಇತ್ಯಾದಿ ಪರಿಕರವನ್ನು ಸಿದ್ದವಾಗಿಟ್ಟಿದ್ದೇವೆ. ಅಗತ್ಯ ಬಿದ್ದಲ್ಲಿ ನದಿ ನೀರು ತುಂಬಿದ ಪ್ರದೇಶದ ಜನರಿಗೆ ತಾತ್ಕಾಲಿಕ ವಸತಿಗಾಗಿ ಏರ್ಪಾಡು ಮಾಡಿದ್ದೆವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement