ʼಕಾಂಗ್ರೆಸ್ ಫೈಲ್ಸ್ʼ : ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ ವಿರುದ್ಧ ವೀಡಿಯೊ ಸರಣಿ ಅಭಿಯಾನ ಆರಂಭಿಸಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಕ್ಷವು 70 ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರಗಳನ್ನು ಆರೋಪಿಸುವ ವೀಡಿಯೊ ಸರಣಿಯ ‘ಕಾಂಗ್ರೆಸ್ ಫೈಲ್ಸ್’ ನ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಮೂರು ನಿಮಿಷಗಳ ವೀಡಿಯೊದಲ್ಲಿ ಎರಡು ಅವಧಿಗೆ ಯುಪಿಎ ಸರ್ಕಾರ ಮುನ್ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಒಳಗೊಂಡಿದೆ.
ಸಾರ್ವಜನಿಕರ ಕಷ್ಟಪಟ್ಟು ದುಡಿದ 48,20,69,00,00,000 ರೂ.ಗಳನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ವಿಡಿಯೋದಲ್ಲಿ ಬಿಜೆಪಿ ಆರೋಪಿಸಿದೆ.
ಇದರಿಂದ ಭದ್ರತೆಯಿಂದ ಹಿಡಿದು ದೇಶದ ಅಭಿವೃದ್ಧಿಯವರೆಗೆ ಹಲವು ಕೆಲಸಗಳನ್ನು ಮಾಡಬಹುದಿತ್ತು ಎಂದು ಬಿಜೆಪಿ ಹೇಳಿದೆ. ಈ ಮೊತ್ತವನ್ನು ಬಳಸಿಕೊಂಡು, 24 ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆ, 300 ರಫೇಲ್ ಜೆಟ್‌ಗಳು ಮತ್ತು 1,000 ಮಂಗಲ್ ಮಿಷನ್‌ ತಯಾರಿಸಬಹುದು ಅಥವಾ ಖರೀದಿಸಬಹುದು. ಆದರೆ ದೇಶವು ಕಾಂಗ್ರೆಸ್‌ನ ಭ್ರಷ್ಟಾಚಾರದ ವೆಚ್ಚವನ್ನು ಭರಿಸಬೇಕಾಯಿತು ಮತ್ತು ಅದು ಪ್ರಗತಿಯ ಓಟದಲ್ಲಿ ಹಿಂದುಳಿಯುವಂತಾಯಿತು” ಎಂದು ವೀಡಿಯೊ ಸಂದೇಶದಲ್ಲಿ ಹೇಳಲಾಗಿದೆ.
2004-2014ರ ಯುಪಿಎ ಅವಧಿಯಲ್ಲಿ ಹಲವು ಹಗರಣಗಳು ನಡೆದಿವೆ… ಕಲ್ಲಿದ್ದಲು ಹಗರಣ 1.86 ಲಕ್ಷ ಕೋಟಿ, 2ಜಿ ಸ್ಪೆಕ್ಟ್ರಂ ಹಗರಣ 1.76 ಲಕ್ಷ ಕೋಟಿ, ಎಂಜಿಎನ್ಆರ್‌ಇಜಿಎ ಹಗರಣ 10 ಲಕ್ಷ ಕೋಟಿ, ಕಾಮನ್ ವೆಲ್ತ್ ಹಗರಣ 70 ಸಾವಿರ ಕೋಟಿ, 362 ಕೋಟಿ ರೂ. ಇಟಲಿ ಜತೆಗಿನ ಹೆಲಿಕಾಪ್ಟರ್ ಡೀಲ್ ನಲ್ಲಿ ಭ್ರಷ್ಟಾಚಾರ, ರೈಲ್ವೆ ಮಂಡಳಿ ಅಧ್ಯಕ್ಷರಿಗೆ 12 ಕೋಟಿ ಭ್ರಷ್ಟಾಚಾರ ಎಂದು ಬಿಜೆಪಿ ವೀಡಿಯೊದಲ್ಲಿ ಹೇಳಿದೆ.
ವೀಡಿಯೊದ ಕೊನೆಯಲ್ಲಿ ಬಿಜೆಪಿ, “ಇದು ಕಾಂಗ್ರೆಸ್ ಭ್ರಷ್ಟಾಚಾರದ ಟ್ರೇಲರ್ ಮಾತ್ರ, ಚಿತ್ರ ಇನ್ನೂ ಮುಗಿದಿಲ್ಲ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಪಿಕಪ್ ವಾಹನ ಪಲ್ಟಿಯಾಗಿ 18 ಮಂದಿ ಸಾವು, ನಾಲ್ವರಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement