ಯೋಗ ನೇಪಾಳದ್ದು ಎಂದು ಮತ್ತೆ ವಿವಾದ ಸೃಷ್ಟಿಸಿದ ಒಲಿ

ಕಠ್ಮಂಡು: ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆದರೆ ಭಾರತದ ನೆರೆರಾಷ್ಟ್ರ ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಯೋಗದ ಬಗ್ಗೆ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ. “ಯೋಗ” ನೇಪಾಳದಲ್ಲಿ ಜನಿಸಿದ್ದೇ ಹೊರತು ಭಾರತದಲ್ಲಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಯೋಗವು ನೇಪಾಳದ್ದು, ಭಾರತದ್ದಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ, ಭಾರತದ ಸ್ವರೂಪ ಈಗಿನಂತಿರಲಿಲ್ಲ ಬದಲಾಗಿ ವಿವಿಧ ವಿಭಾಗಗಳಲ್ಲಿ ವಿಂಗಡನೆಯಾಗಿತ್ತು ಎಂದು ಒಲಿ ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ತಮ್ಮ ನಿವಾಸ ಬಾಲುವತಾರ್‌ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಒಲಿ ಈ ಹೇಳಿಕೆ ನೀಡಿದ್ದಾರೆ. ಭಾರತೀಯ ತಜ್ಞರು ಇದರ ಬಗ್ಗೆ ಸತ್ಯ ಮರೆಮಾಚುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಈಗಿರುವ ಭಾರತವು ಹಿಂದೆ ಇರಲಿಲ್ಲ. ಆ ಸಮಯದಲ್ಲಿ ಭಾರತವನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಮತ್ತು ಆಗ ಭಾರತ ಉಪಖಂಡ ಅಥವಾ ಒಂದು ಖಂಡವಾಗಿತ್ತು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಮುನ್ನ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆ ನೇಪಾಳದಲ್ಲಿದೆ ಮತ್ತು ಭಗವಾನ್ ರಾಮ ನೇಪಾಳಿ ಎಂದು ಕಳೆದ ಜುಲೈನಲ್ಲಿ ಒಲಿ ಹೇಳಿಕೊಂಡು ವಿವಾದ ಸೃಷ್ಟಿಸಿದ್ದರು.
ನಿಜವಾದ ಅಯೋಧ್ಯೆ ಬಿರ್ಗುಂಜ್ ನ ಪಶ್ಚಿಮದಲ್ಲಿರುವ ಥೋರಿ ಎಂಬ ನಗರದಲ್ಲಿದ್ದರೂ, ಭಗವಾನ್ ರಾಮನು ಅಲ್ಲಿಯೇ ಜನಿಸಿದನೆಂದು ಭಾರತ ಹೇಳಿಕೊಂಡಿದೆ. ಈ ಹಕ್ಕುಗಳಿಂದ ಸೀತಾದೇವಿ ಭಾರತದ ರಾಜಕುಮಾರ ರಾಮನನ್ನು ಮದುವೆಯಾದಳೆಂದು ನಾವು ನಂಬಿದ್ದೇವೆ. ಆದಾಗ್ಯೂ, ವಾಸ್ತವದಲ್ಲಿ , ಅಯೋಧ್ಯೆ ಬಿರ್ಗುಂಜ್‌ನ ಪಶ್ಚಿಮಕ್ಕೆ ಇರುವ ಹಳ್ಳಿಯಾಗಿದೆ ‘ಎಂದುಒಲಿ ಕಠ್ಮಂಡುವಿನ ಪ್ರಧಾನ ಮಂತ್ರಿಯ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement