ಪತ್ರಕರ್ತ ಪುನಿಯಾಗೆ ಜಾಮೀನು

ನವ ದೆಹಲಿ: :ಸಿಂಗು ಗಡಿಯಲ್ಲಿ ಪೊಲೀಸರ  ಕರ್ತವ್ಯಕ್ಕೆ ಅಡ್ಡಿ   ಮತ್ತು ಪೊಲೀಸ್ ಸಿಬ್ಬಂದಿಗೆ ನೋವುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದ  ಸ್ವತಂತ್ರ ಪತ್ರಕರ್ತ (ಫ್ರೀಲ್ಯಾನ್ಸ್ ‌ಜರ್ನಲಿಸ್ಟ್)  ಮಂದೀಪ್ ಪುನಿಯಾ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.

ಆದೇಶದಲ್ಲಿ, ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ರೋಹಿಣಿ ನ್ಯಾಯಾಲಯ) ಸತ್ವೀರ್ ಸಿಂಗ್ ಲಂಬಾ ಅವರು ಜಾಮೀನಿಗೆ  25 ಸಾವಿರ ರೂ.ಗಳ ಬಾಂಡ್‌ ನೀಡುವಂತೆ  ಆದೇಶದಲ್ಲಿ ಹೇಳಿದ್ದಾರೆ.

ದೂರುದಾರರು, ಬಲಿಪಶುಗಳು ಮತ್ತು ಸಾಕ್ಷಿಗಳು ಪೊಲೀಸ್ ಸಿಬ್ಬಂದಿ ಮಾತ್ರ. ಆದ್ದರಿಂದ, ಆರೋಪಿ   ಯಾವುದೇ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement