ಕುಮಟಾ: ಮೂರು ದಿನಗಳ ಕಾರ್ಯಾಚರಣೆ ನಂತರ ಸಮುದ್ರ ಪಾಲಾದ ಮತ್ತಿಬ್ಬರ ಶವ ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಬಾಡದಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರು ಪ್ರವಾಸಿಗರ ಶವ ಮೂರನೇ ದಿನ ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ನಾಲ್ವರಲ್ಲಿ ಇಬ್ಬರ ಶವ ಮೂರು ದಿನಗಳ ಹಿಂದೆಯೇ ಪತ್ತೆಯಾಗಿತ್ತು. ಈಗ ಮತ್ತಿಬ್ಬರ ಶವವೂ ಸಮುದ್ರದ ಅರ್ಧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಸಿಎ ವಿದ್ಯಾರ್ಥಿ ಬೆಂಗಳೂರಿನ ರಾಜಾಜಿನಗರದ ತೇಜಸ್ ದಾಮೋದರ ಮತ್ತು ಬೆಂಗಳೂರಿನ ಕನಕಪುರ ರಸ್ತೆಯ ಸಿಎ ಫಾರ್ಮ್ ನೌಕರ ಕಿರಣಕುಮಾರ್ ಮರಿರಾಜ ಜಿ. ಅವರಶವ ಪತ್ತೆಯಾಗಿದ್ದು, ಪೊಲೀಸರು ಶವವನ್ನು ತಾಲೂಕು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯ 89 ಸಿಬ್ಬಂದಿಯ ಜೊತೆಗೆ ಕೆಲ ವಿದ್ಯಾರ್ಥಿಗಳು ಕೂಡ ಪ್ರವಾಸಕ್ಕೆಂದು ಕುಮಟಾ ತಾಲೂಕಿನ ಬಾಡದ ಕಡಲತೀರದ ರೆಸಾರ್ಟ್‌ಗೆ ಆಗಮಿಸಿದ್ದರು. ಸಮುದ್ರಕ್ಕಿಳಿದ ಕೆಲ ಪ್ರವಾಸಿಗರ ಪೈಕಿ ನಾಲ್ವರು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಬೆಂಗಳೂರು ಸಿಎ ಫಾರ್ಮ್ ನೌಕರ ಅರ್ಜುನ್ ವಾಸುದೇವ ಮತ್ತು ಬೆಂಗಳೂರಿನ ಪೀಣ್ಯ 2ನೇ ಕ್ರಾಸ್‌ನ ಸಿಎ ವಿದ್ಯಾರ್ಥಿನಿ ಚೈತ್ರಶ್ರೀ ಗೋಪಾಲ ಎಂಬವರ ಶವಗಳು ಮೂರು ದಿನಗಳ ಹಿಂದೆಯೇ ಪತ್ತೆಯಾಗಿತ್ತು.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement