ಬೆಳಗಾವಿ: ನಗರದ ಮಾಂಡೋಳಿ ರಸ್ತೆಯಲ್ಲಿರುವ ವಕೀಲೆ ಪೂಜಾ ಕಾಕತಕರ ಅವರ ಮನೆಯ ಮೇಲೆ ತಡರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆದಿರುವುದು ವರದಿಯಾಗಿದೆ.
ಕಳೆದ 18 ವರ್ಷಗಳಿಂದ ಹೈ-ಪ್ರೊಫೈಲ್ ಕೇಸ್ಗಳ ಪರ ವಾದ ಮಂಡಿಸುತ್ತಿರುವ ಪೂಜಾ ಕಾಕತಕರ ಅವರ ನಿವಾಸವನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಮಧ್ಯರಾತ್ರಿ ವೇಳೆ ಕಿಡಿಗೇಡಿಗಳು ಮನೆಯ ಮೊದಲ ಮಹಡಿಗೆ ಗುಂಡು ಹಾರಿಸಿದ್ದಾರೆ. ಈ ಸಮಯದಲ್ಲಿ ಪೂಜಾ ಅವರ ಪುತ್ರಿ ಅಲ್ಲಿ ಓದುತ್ತಾ ಕುಳಿತಿದ್ದರು. ಗುಂಡು ಮನೆಯ ಕಿಟಕಿಯ ಗಾಜಿಗೆ ತಗುಲಿದ್ದು, ಅದೃಷ್ಟವಶಾತ್ ಮಗಳು ಪಾರಾಗಿದ್ದಾರೆ. ಕಿಟಕಿಯ ಗಾಜಿನ ಮೇಲೆ ಗುಂಡು ತಗುಲಿರುವ ಗುರುತುಗಳು ಕಂಡುಬಂದಿವೆ.
ಬೆಳಗಾವಿ ಗ್ರಾಮೀಣ ಪೊಲೀಸರು ಮತ್ತು ‘ಸುಕೋ’ (SUKO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗುಂಡು ತಗುಲಿದ ಗಾಜಿನ ಚೂರುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ