140 ವರ್ಷದ ಹಳೆಯದಾದ ಗುಜರಾತ್ ಕೇಬಲ್‌ ಸೇತುವೆ ಕುಸಿತ : 141ಕ್ಕೆ ಏರಿದ ಸಾವಿನ ಸಂಖ್ಯೆ

ಅಹ್ಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನವೀಕರಣಗೊಂಡ ಒಂದು ವಾರದ ನಂತರ ಕುಸಿದು ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸುಮಾರು 177 ಜನರನ್ನು ರಕ್ಷಿಸಲಾಗಿದೆ ಮತ್ತು ತಂಡಗಳು ಇನ್ನೂ ನಾಪತ್ತೆಯಾಗಿರುವ ಹಲವರಿಗಾಗಿ ಹುಡುಕಾಟ ನಡೆಸುತ್ತಿವೆ. ಶೋಧಕಾರ್ಯ ಹಾಗೂ ರಕ್ಷಣಾ ಕಾರ್ಯ ಮುಂದುವರಿದೆ. ಸ್ಥಳದಲ್ಲಿ ಸೇನೆ, ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್​ ಬೀಡುಬಿಟ್ಟಿದೆ.ಭಾನುವಾರ ಸಂಜೆ 6:42ಕ್ಕೆ ತೂಗುಸೇತುವೆ ಕುಸಿಯುವ … Continued

ಗುಜರಾತಿನಲ್ಲಿ 140 ವರ್ಷಗಳಷ್ಟು ಹಳೆಯ ಕೇಬಲ್ ಸೇತುವೆ ಕುಸಿದು ಕನಿಷ್ಠ 35 ಮಂದಿ ಸಾವು: ದುರಸ್ತಿ ಮಾಡಿ ಕಳೆದ ವಾರ ತೆರೆಯಲಾಗಿತ್ತು…

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿ ಪ್ರದೇಶದಲ್ಲಿ ಇಂದು, ಭಾನುವಾರ ಮಚ್ಚು ನದಿಯಲ್ಲಿ ಕೇಬಲ್ ಸೇತುವೆ ಕುಸಿದ ಪರಿಣಾಮ ಕನಿಷ್ಠ 35 ಜನರು ಮೃತಪಟ್ಟಿದ್ದು, ಇನ್ನೂ ಹಲವರು ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ಘಟನೆ ಸಂಭವಿಸಿದಾಗ ಸುಮಾರು 400 ಜನರು ಸೇತುವೆಯ ಮೇಲೆ ಇದ್ದರು ಮತ್ತು ಸುಮಾರು 100 ಜನರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ, … Continued