ಸಿದ್ದರಾಮಯ್ಯ -ಶಿವಕುಮಾರ ಜೊತೆ 8 ಸಚಿವರ ಪ್ರಮಾಣ ವಚನಕ್ಕೆ ಕ್ಷಣಗಣನೆ : ಇಲ್ಲಿದೆ ಸಚಿವರ ಪಟ್ಟಿ

ಬೆಂಗಳೂರು :ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಮಂದಿ ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12:30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯಲ್ಲಿ ತಡರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, … Continued

ಎಸ್ ಎಸ್ ಎಲ್‌ ಸಿ ಪೂರಕ ಪರೀಕ್ಷೆ ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ

ಬೆಂಗಳೂರು: ಜೂನ್‌ನಲ್ಲಿ ನಡೆಯಲಿರುವ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಗೆ ನೋಂದಾಯಿಸಲು ಹಾಗೂ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಕೊನೆಯ ದಿನಾಂಕವನ್ನು ಮೇ 18ರ ವರೆಗೆ ವಿಸ್ತರಿಸಲಾಗಿದೆ. 2023ನೇ ಜೂನ್ ನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲೆಗಳಿಂದ … Continued

ಎಸ್ಸೆಸ್ಸೆಲ್ಸಿ : ರಾಜ್ಯದಲ್ಲಿ ಶೇ.83.89ರಷ್ಟು ಫಲಿತಾಂಶ, 100ಕ್ಕೆ ನೂರು ಫಲಿತಾಂಶ ಪಡೆದ 4 ವಿದ್ಯಾರ್ಥಿಗಳು, ಚಿತ್ರದುರ್ಗ ಜಿಲ್ಲೆ ಪ್ರಥಮ-ಯಾದಗಿರಿಗೆ ಕೊನೆಯ ಸ್ಥಾನ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ(ಕೆಎಸ್‌ಇಎಬಿ) ಸೋಮವಾರ ( ಮೇ 8 ರಂದು) ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಈ ವರ್ಷದ ಫಲಿತಾಂಶ ಶೇ.83.89ರಷ್ಟಾಗಿದೆ. ಪರೀಕ್ಷೆ ಬರೆದ ಒಟ್ಟು 8,35,102 ವಿದ್ಯಾರ್ಥಿಗಳಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಪಡೆದಿದ್ದಾರೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, … Continued

ಇಂದಿನಿಂದ ಭಕ್ತರ ದರ್ಶನಕ್ಕೆ ತೆರೆದ ಬದರೀನಾಥ ದೇವಸ್ಥಾನ : 15 ಕ್ವಿಂಟಾಲ್ ಹೂಗಳಿಂದ ದೇಗುಲಕ್ಕೆ ಸಿಂಗಾರ | ವೀಕ್ಷಿಸಿ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇರುವ ಬದರೀನಾಥ ದೇಗುಲ ಇಂದು, ಗುರುವಾರ (ಏಪ್ರಿಲ್‌ 27) ಬೆಳಿಗ್ಗೆ 7:10 ಕ್ಕೆ ಧಾರ್ಮಿಕ ವಿಧಿ ವಿಧಾನಗಳು ನಡೆದ ನಂತರ ಭಕ್ತರಿಗೆ ತೆರೆಯಲಾಯಿತು. ಚಳಿಗಾಲದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಬದರೀನಾಥ ದೇಗುಲದ ಬಾಗಿಲುಗಳನ್ನು ಮಂತ್ರಘೋಷಗಳೊಂದಿಗೆ ತೆರೆಯಲಾಯ್ತು. ಇಂದು, ಗುರುವಾರ ದೇಗುಲದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು 15 ಕ್ವಿಂಟಲ್ ವಿವಿಧ … Continued

ಈ ವರ್ಷ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಮಳೆಯಾಗಬಹುದು: ಸ್ಕೈಮೆಟ್ ಮುನ್ಸೂಚನೆ | ಎಲ್ಲೆಲ್ಲಿ ಮಳೆ ಕಡಿಮೆ?

ನವದೆಹಲಿ : ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಿರ್ಣಾಯಕ ಮಾನ್ಸೂನ್ ತಿಂಗಳುಗಳಲ್ಲಿ ಭಾರತವು ಮಳೆಯ ಕೊರತೆ ಕಾಣುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ತಿಳಿಸಿದೆ. ಸ್ಕೈಮೆಟ್ ಪ್ರಕಾರ, ಮಾನ್ಸೂನ್ ನಾಲ್ಕು ತಿಂಗಳ ಅವಧಿಯಲ್ಲಿ ದೀರ್ಘಾವಧಿಯ ಸರಾಸರಿ (ಎಲ್‌ಟಿಎ) ಮಳೆಯ 94 ಪ್ರತಿಶತದಷ್ಟು ಇರುತ್ತದೆ. ಅದು 96 ಮತ್ತು 104 ಪ್ರತಿಶತದ ನಡುವೆ ಇರುವಾಗ ಅದನ್ನು ಸಾಮಾನ್ಯ … Continued

ಯಶಸ್ವಿನಿ ಯೋಜನೆ ನೋಂದಣಿ ಅವಧಿ ಮಾರ್ಚ್ 31ರ ವರೆಗೆ ವಿಸ್ತರಣೆ

ಬೆಂಗಳೂರು: ಸಹಕಾರಿ ಸಂಘದ ಸದಸ್ಯರು, ರೈತರಿಗೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿ ಮತ್ತು ಹೊಸ ಸದಸ್ಯರ ನೋಂದಣಿ ಅವಧಿಯನ್ನು ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಜನ ಯೋಜನೆಗೆ ನೋಂದಾಯಿಸಿಕೊಳ್ಳತೊಡಗಿದ್ದಾರೆ. ಹೀಗಾಗಿ ಅವಧಿ ವಿಸ್ತರಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು, ಇದನ್ನು ಪರಿಗಣಿಸಿ ನೋಂದಣಿ ಅವಧಿ ವಿಸ್ತರಿಸಲಾಗಿದೆ. ಸಹಕಾರಿ … Continued

ಒಡಿಯೂರು ತುಳು ಸಾಹಿತ್ಯ ಸಮ್ಮೇಳನ : ಅಧ್ಯಕ್ಷರಾಗಿ ಡಾ. ವಸಂತಕುಮಾರ ಪೆರ್ಲ ಆಯ್ಕೆ

ಒಡಿಯೂರು: ಜನವರಿ 30 ಹಾಗೂ 31 ರ ಸೋಮವಾರ ಮತ್ತು ಮಂಗಳವಾರ ಒಡಿಯೂರಿನಲ್ಲಿ ನಡೆಯಲಿರುವ 23ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಆಯ್ಕೆಯಾಗಿದ್ದಾರೆ. ನಮ್ಮ ನೆಲ, ನಮ್ಮ ಜಲ ಎಂಬ ಪರಿಕಲ್ಪನೆ ಅಡಿಯಲ್ಲಿ ನಡೆಯಲುರುವ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ವಿವಿಧ ಜಾನಪದ ನೃತ್ಯಸ್ಪರ್ಧೆಗಳು ನಡೆಯಲಿವೆ. ತುಳು … Continued

ಬಿಎಂಟಿಸಿ ವಜ್ರ ಬಸ್‌ ದೈನಂದಿನ-ಮಾಸಿಕ ಪಾಸ್‌ ದರ ಹೆಚ್ಚಳ

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಬಿಎಂಟಿಸಿ ಶಾಕ್ ನೀಡಿದೆ. ಏರಿಕೆಯಾಗುತ್ತಿರುವ ಇಂಧನ ದರ ಹಾಗೂ ಇತರ ವೆಚ್ಚಗಳ ಹಿನ್ನೆಲೆಯಲ್ಲಿ ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ. ಬಿಎಂಟಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅದನ್ನು ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದೊಂದು ವರ್ಷದಿಂದ ಇಂಧನ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದ್ದರೂ ಬಸ್‌ … Continued