ಮಾಜಿ ಸಂಸದ ಸಿದ್ನಾಳ ನಿಧನ

ಬೆಳಗಾವಿ : ನಾಲ್ಕು ಬಾರಿ ಕಾಂಗ್ರೆಸ್‌ ಸಂಸದರಾಗಿದ್ದ ಹಿರಿಯ ರಾಜಕಾರಣಿ ಎಸ್.ಬಿ.ಸಿದ್ನಾಳ (86) ಮಂಗಳವಾರ ನಿಧನರಾದರು. ಉದ್ಯಮಿಗಳಾದ ಶಶಿಕಾಂತ ಸಿದ್ನಾಳ ಹಾಗೂ ಶಿವಕಾಂತ ಸಿದ್ನಾಳ ಇವರ ಪುತ್ರರು. ಅವರು 7,8,9,10ನೆಯ ಲೋಕಸಭೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ  ನಾಲ್ಕು ಬಾರಿ ಆಯ್ಕೆಯಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿದ್ದರು. 1972ರಲ್ಲಿ ಕಿತ್ತೂರು ವಿಧಾನಸಭಾ ಚುನಾವಣೆಯಲ್ಲಿ … Continued