ಯೂಟ್ಯೂಬ್‌ನ ನೇರಪ್ರಸಾರದಲ್ಲೂ ‘ಇಸ್ರೋ’ದ ಚಂದ್ರಯಾನ-3 ಹೊಸ ದಾಖಲೆ : ಬರೋಬ್ಬರಿ 80 ಲಕ್ಷ ಜನರಿಂದ ವೀಕ್ಷಣೆ…!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡುವುದರೊಂದಿಗೆ ಯೂ ಟ್ಯೂಬ್‌ನಲ್ಲಿ ವೀಕ್ಷಣೆಯಲ್ಲೂ ‘ಇಸ್ರೋ’ ಹೊಸ ಮೈಲುಗಲ್ಲು ದಾಖಲಿಸಿದೆ. ಸುಮಾರು 80 ಲಕ್ಷ ಜನರು ಇಸ್ರೋವಿನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನ ನೇರಪ್ರಸಾರವನ್ನು ವೀಕ್ಷಿಸುವ ಮೂಲಕ ‘ಇಸ್ರೋ’ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯೂಟ್ಯೂಬ್‌ನ ಇತಿಹಾಸದಲ್ಲಿ ನೇರಪ್ರಸಾರವನ್ನು … Continued