ಚೀನಾದ ಜೊತೆಗಿನ ಗಾಲ್ವಾನ್ ಘರ್ಷಣೆ ನಂತರ 68,000 ಸೈನಿಕರು, 90 ಟ್ಯಾಂಕ್‌ಗಳನ್ನು ಪೂರ್ವ ಲಡಾಖ್‌ಗೆ ವಿಮಾನದಲ್ಲಿ ಒಯ್ದ ಭಾರತದ ವಾಯುಪಡೆ

ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿನ ಮಾರಣಾಂತಿಕ ಘರ್ಷಣೆಯ ನಂತರ 68,000ಕ್ಕೂ ಹೆಚ್ಚು ಸೇನಾ ಸೈನಿಕರು, ಸುಮಾರು 90 ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಭಾರತೀಯ ವಾಯುಪಡೆಯು ಪೂರ್ವ ಲಡಾಖ್‌ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಕ್ಷಿಪ್ರ ನಿಯೋಜನೆಗಾಗಿ ವಿಮಾನದಲ್ಲಿ ಒಯ್ದಿತ್ತು ಎಂದು ಕ್ಷಣಾ ಮತ್ತು ಭದ್ರತಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯೊಂದು ಹೇಳಿದೆ. … Continued