ಬೆಂಗಳೂರು:ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ ಅನಾಹುತ, ಇಬ್ಬರು ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮತ್ತೊಂದು ಅವಘಡ ನಡೆದಿದೆ. ಬೆಂಗಳೂರು ನಗರದ ದೇವರಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತಾಯಿ ಲಕ್ಷ್ಮೀದೇವಿ (82), ಪುತ್ರಿ ಭಾಗ್ಯ ರೇಖಾ (59) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.  210 ನೇ ಫ್ಲ್ಯಾಟ್‌ನಲ್ಲಿದ್ದ ತಾಯಿ ಹಾಗೂ ಮಗಳು ಸಜೀವದಹನ ಆಗಿದ್ದಾರೆ ಎನ್ನಲಾಗಿದೆ. ಅಪಾರ್ಟ್ಮೆಂಟ್‍ ಒಳಗೆ … Continued

ಬೆಂಗಳೂರಿನಲ್ಲಿ ಒಂದೇ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

ಬೆಂಗಳೂರು: ಶಾಲೆ-ಕಾಲೇಜು ಆರಂಭದ ಬೆನ್ನಲ್ಲೇ ಕೊರೊನಾ ವೈರಸ್ ಸೋಂಕಿನ ಭೀತಿ ಎದುರಾಗಿದ್ದು, ಬೆಂಗಳೂರಿನಲ್ಲಿ ಇಂದು ಒಂದೇ ಕಾಲೇಜಿನಲ್ಲಿ 16 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ದಾಸರಹಳ್ಳಿ ವಲಯದ ಚಿಕ್ಕಬಾಣಾವರದಲ್ಲಿರುವ ನರ್ಸಿಂಗ್ ಕಾಲೇಜೊಂದರ 16 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದಯು ವರದಿಯಾಗಿದೆ. ಮೊದಲು ಕಾಲೇಜಿನ ಒಬ್ಬ ವಿದ್ಯಾರ್ಥಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ … Continued

ಕೋವಿಡ್-3ನೇ ಅಲೆ ಆತಂಕ: ಬೆಂಗಳೂರಲ್ಲಿ ಮಕ್ಕಳಲ್ಲಿ ಕಳೆದ ವರ್ಷದಷ್ಟೇ ಸೋಂಕಿನ ಪ್ರಮಾಣ

ಬೆಂಗಳೂರು:ನಗರದಲ್ಲಿ ಪತ್ತೆಯಾಗುತ್ತಿರುವ ಮಕ್ಕಳಲ್ಲಿನ ಕೋವಿಡ್ ಸೋಂಕಿನ ಪ್ರಮಾಣ ಕಳೆದ ವರ್ಷದಷ್ಟೇ ಇದೆ ಎಂದು ಬಿಬಿಎಂಬಿ ಆಯುಕ್ತ ಗೌರವ ಗುಪ್ತಾ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಗರದಲ್ಲಿ ಈವರೆಗೆ ವರದಿಯಾದ ಮಕ್ಕಳ ಪ್ರಕರಣಗಳನ್ನು ಕಳೆದ ವರ್ಷದ ದತ್ತಾಂಶಗಳೊಂದಿಗೆ ಹೋಲಿಸಲಾಗಿದೆ ಮತ್ತು ಇವೆರಡೂ ಬಹುತೇಕ ಒಂದೇ ಆಗಿರುತ್ತವೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 450 … Continued

ಪೊಲೀಸರು ಬಂದಿದ್ದು ನೋಡಿ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಸರಗಳ್ಳ !

ಬೆಂಗಳೂರು: ಪೊಲೀಸರು ಬೆನ್ನಟ್ಟಿ ಬಂದಿದ್ದನ್ನು ನೋಡಿ ಶಂಕಿತ ಸರಗಳ್ಳ ಸೈನೈಡ್ ಸೇವಿಸಿ ಸಾವಿಗೀಡಾದ್ದಾನೆ. ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಇದೀಗ ಸೈನೈಡ್ ಕಂಟಕ ಎದುರಾಗಿದೆ. ಬೆಂಗಳೂರು ಹೊರವಲಯದ ಹೊಸಕೋಟೆ ಸಮೀಪ ಪಿಳ್ಳಂಗುಪ್ಪೆ ಕೈಗಾರಿಕ ಪ್ರದೇಶದಲ್ಲಿ ಸರಗಳ್ಳತನ ಪ್ರಕರಣದ ಶಂಕಿತ ಅರೋಪಿ ಶಂಕರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೆ.ಆರ್. ಪುರ ಪೊಲೀಸರು ಮುಂದಾಗಿದ್ದರು. ಈ … Continued

ಕೊರೊನಾ ಕ್ರಮ: ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು; ನಗರದಲ್ಲಿ ಕೊವಿಡ್‌ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 (1) ಜಾರಿಗೊಳಿಸಲಾಗಿದೆ. ಆದೇಶದ ಪ್ರಕಾರ, ಕೊರೊನಾ ನಿಯಂತ್ರಿಸಲು ನಗರ ವ್ಯಾಪ್ತಿಯಲ್ಲಿ, ವಸತಿ ಸಂಕೀರ್ಣಗಳಲ್ಲಿ ಜಿಮ್‌ಗಳು, ಈಜುಕೊಳಗಳು ಮತ್ತು ಪಾರ್ಟಿ ಹಾಲ್‌ಗಳಂತಹ ಕಾರ್ಯಾಚರಣೆ ನಿರ್ಬಂಧಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 144 (1) ವಿಧಿಸಲಾಗಿದ್ದು, ಇದು ಕೆಲವು ಚಟುವಟಿಕೆಗಳನ್ನು ತಡೆಯಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ. … Continued

‘ಈಸ್ ಆಫ್ ಲಿವಿಂಗ್ ಇಂಡೆಕ್ಸ್’ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

ನವ ದೆಹಲಿ: ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EoLI) 2020 ಮತ್ತು ಮುನಿಸಿಪಲ್ ಪರ್ಫಾರ್ಮೆನ್ಸ್ ಇಂಡೆಕ್ಸ್ (MPI) 2020ʼರ ಕ್ರಮಾಂಕಗಳನ್ನು ಕೇಂದ್ರ ಸಚಿವ ಎಚ್. ಎಸ್. ಪುರಿ . ಪ್ರಕಟಿಸಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಮೊದಲ ಸ್ಥಾನ ಪಡೆದಿದೆ. ಭಾರತದ 111 ನಗರಗಳಲ್ಲಿ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (EoLI) 2020 ನಡೆಸಲಾಗಿದ್ದು, ಇದರಲ್ಲಿ … Continued