ಕಾರವಾರ: ಮೊಬೈಲ್ ಚಾರ್ಜರ್ ವೈರ್ ಬಾಯಿಗೆ ಹಾಕಿಕೊಂಡ 8 ತಿಂಗಳ ಮಗು ಸಾವು

ಕಾರವಾರ: ಸ್ವಿಚ್ ಬೋರ್ಡಿಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈಯರ್ ಅನ್ನು ಮಗು ಬಾಯಲ್ಲಿ ಕಚ್ಚಿದ ನಂತರ ವಿದ್ಯುತ್ ಪ್ರಹರಿಸಿ 8 ತಿಂಗಳ ಮಗು ಸಾವಿಗೀಡಾದ ಘಟನೆ ಕಾರವಾರ ತಾಲ್ಲೂಕಿನ ಸಿದ್ದರದಲ್ಲಿ ಇಂದು, ಬುಧವಾರ ನಡೆದಿದೆ. ಸಿದ್ದರದ ಸಂತೋಷ ಕಲ್ಗುಟಕರ, ಸಂಜನಾ ಕಲ್ಗುಟಕರ ದಂಪತಿಯ ಏಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಎಂಬ ಪುಟ್ಟ ಮಗು ಮೃತಪಟ್ಟಿದೆ. … Continued