ವಿಜಯಪುರ | ಎಸ್ಬಿಐ ಚಡಚಣ ಬ್ಯಾಂಕ್ ದರೋಡೆ ಪ್ರಕರಣ : ಪಾಳುಬಿದ್ದ ಮನೆ ಮೇಲ್ಛಾವಣಿಯಲ್ಲಿ 41 ಲಕ್ಷ ರೂ, 6 ಕೆಜಿ ಚಿನ್ನ ಪತ್ತೆ..!
ವಿಜಯಪುರ: ಜಿಲ್ಲೆಯ ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ (SBI Robbery) ಪ್ರಕರಣದಲ್ಲಿ ದೋಚಿದ್ದ ಚಿನ್ನಾಭರಣ ಪತ್ತೆ ಹಚ್ಚುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ದರೋಡೆಗೆ ಬಳಿಸಿದ ವಾಹನದಲ್ಲೂ ಸ್ವಲ್ಪ ಹಣ, ಚಿನ್ನಾಭರಣ ಪತ್ತೆಯಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. … Continued