‘ದಿ ಕೇರಳ ಸ್ಟೋರಿ’ ಟೀಸರ್ ವಿವಾದ: ಡಿಜಿಪಿ ಆದೇಶದ ಮೇರೆಗೆ ಎಫ್ಐಆರ್ ದಾಖಲು; ನಿಷೇಧಕ್ಕೆ ಆಗ್ರಹಿಸಿದ ಕಾಂಗ್ರೆಸ್
ತಿರುವನಂತಪರಂ: ಭಯೋತ್ಪಾದಕರ ಸುರಕ್ಷಿತ ತಾಣವೆಂದು ಬಿಂಬಿಸಿದ ಆರೋಪದ ಮೇಲೆ “ದಿ ಕೇರಳ ಸ್ಟೋರಿ” ಚಿತ್ರದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇರಳದ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ಅವರು ಮಂಗಳವಾರ ತಿರುವನಂತಪುರಂ ಪೊಲೀಸ್ ಆಯುಕ್ತ ಸ್ಪರ್ಜನ್ ಕುಮಾರ್ ಅವರಿಗೆ ಸೂಚಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಚಿತ್ರದ ಟೀಸರ್ ಕೇರಳದಿಂದ 32,000 ಕ್ಕೂ ಹೆಚ್ಚು ಮಹಿಳೆಯರನ್ನು … Continued