ಕರ್ನಾಟಕದ ಮಾದರಿ ಸಂಗ್ರಹಣೆ, ಲ್ಯಾಬ್ ಟೆಸ್ಟ್ ವಿಧಾನವೇ ಸರಿಯಿಲ್ಲ ; ಇ20 ಪೆಟ್ರೋಲ್ನಲ್ಲಿ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ ತಳ್ಳಿಹಾಕಿದ ಕೇಂದ್ರ
ನವದೆಹಲಿ: ಇ20 (E20) ಪೆಟ್ರೋಲ್ನಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ಕೇಂದ್ರ ಸರ್ಕಾರ ಶನಿವಾರ ತಳ್ಳಿಹಾಕಿದೆ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾದ ಒಟ್ಟು 893 ಪೆಟ್ರೋಲ್ ಮಾದರಿಗಳೂ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. … Continued