ಅವನಿ ಲೇಖಾರಾ ಪ್ಯಾರಾಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ, 10 ಮೀಟರ್ ಏರ್ ರೈಫಲ್‌ ನಲ್ಲಿ ಚಿನ್ನದ ಪದಕ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಅವನಿ ಲೇಖಾರಾ ಗೆದ್ದಿದ್ದಾರೆ. ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಕ್ರೀಡಾಕೂಟದಲ್ಲಿ ಅಗ್ರ ಪದಕ ಗೆದ್ದ ಐದನೇ ಭಾರತೀಯರಾಗಿದ್ದಾರೆ. ಲೇಖಾರಾ ಫೈನಲ್‌ನಲ್ಲಿ ಒಟ್ಟು 249.6 ಅಂಕಗಳನ್ನು ಗಳಿಸಿದರು, ಡಿಸೆಂಬರ್ 2018 ರಲ್ಲಿ ಉಕ್ರೇನ್‌ನ ಇರಿನಾ ಶ್ಚೆಟ್ನಿಕ್ ಸ್ಥಾಪಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದರು. … Continued