ಆಘಾತಕಾರಿ….: ಗುಜರಾತಿನಲ್ಲಿ 6 ತಿಂಗಳಲ್ಲಿ ಹೃದಯಾಘಾತದಿಂದ ಸಾವಿಗೀಡಾದವರಲ್ಲಿ 80% ರಷ್ಟು ಮಂದಿ 11-25 ವರ್ಷದವರು…!

ಅಹಮದಾಬಾದ್: ಕಳೆದ ಆರು ತಿಂಗಳಲ್ಲಿ ಗುಜರಾತಿನಲ್ಲಿ ಒಟ್ಟು 1,052 ಜನರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರಲ್ಲಿ 80% ರಷ್ಟು ಜನ 11-25 ವಯಸ್ಸಿನವರು ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ ದಿಂಡೋರ್ ಶುಕ್ರವಾರ ಹೇಳಿದ್ದಾರೆ. ಹೆಚ್ಚುತ್ತಿರುವ ಹೃದಯಾಘಾತಗಳನ್ನು ಗಮನದಲ್ಲಿಟ್ಟುಕೊಂಡು, ಸುಮಾರು ಎರಡು ಲಕ್ಷ ಶಾಲಾ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರಿಗೆ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಮಾಡುವಲ್ಲಿ ತರಬೇತಿ … Continued

ಹೃದಯಾಘಾತದ ನಂತರ 1 ತಾಸು ಕಾಲ ಹೃದಯದ ಬಡಿತ ನಿಂತು ಹೋಗಿತ್ತು… ಆದರೂ ಬದುಕುಳಿದ ಈ ವ್ಯಕ್ತಿ…! ಈ ಪವಾಡ ಹೇಗಾಯ್ತು..?

ನಾಗಪುರ : ಮಹಾರಾಷ್ಟ್ರದ ನಾಗಪುರದ ವ್ಯಕ್ತಿಯೊಬ್ಬರಿಗೆ ಸುಮಾರು ಒಂದು ಗಂಟೆಗಳ ಕಾಲ ಹೃದಯ ಬಡಿತ ನಿಂತು ಹೋಗಿದ್ದರೂ ಅವರು ಜೀವಂತವಾಗಿ ಬದುಕುಳಿದಿದ್ದಾರೆ….! ಈ ಪವಾಡ ಸದೃಶ ಘಟನೆಗೆ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 32 ವರ್ಷದ ರೋಗಿಯು ಆಗಸ್ಟ್ 25 ರಂದು ಹೃದಯಾಘಾತಕ್ಕೊಳಗಾದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರು … Continued

ವೀಡಿಯೊ..| ಔಷಧಿ ಖರೀದಿಗೆಂದು ಔಷಧದ ಅಂಗಡಿಗೆ ಬಂದಾಗಲೇ ಹೃದಯಘಾತದಿಂದ ಸಾವು

ಮೈಸೂರು: ಈ ಹೃದಯ ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕುಳಿತಲ್ಲೇ ಕುಸಿಯುವುದು, ಮಾತನಾಡುತ್ತಿರುವಾಗಲೇ ಸ್ತಬ್ದವಾಗುವುದು, ನೃತ್ಯ ಮಾಡುತ್ತಲೇ ಬೀಳುವುದು.. ಹೀಗೆ ಸಾವಿನ ಹತ್ತಾರು ಸನ್ನಿವೇಶಗಳು ಕಂಡುಬರುತ್ತಿವೆ. ಮೈಸೂರಿನಲ್ಲಿ ಔಷಧದ ಅಂಗಡಿಯೊಂದಕ್ಕೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆಯೊಂದು ವರದಿಯಾಗಿದೆ. ಘಟನೆಯ ದೃಶ್ಯಗಳು … Continued

ಹಿರಿಯ ಹಾಸ್ಯನಟ ಬ್ಯಾಂಕ್‌ ಜನಾರ್ಧನಗೆ ಹೃದಯಾಘಾತ : ಆಸ್ಪತ್ರೆಗೆ ದಾಖಲು

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ದನ (74 ವರ್ಷ) ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು ಇರಿಸಿ, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಕುಟುಂಬದ ಸಮೀಪವರ್ತಿಗಳಿಂದ ತಿಳಿದುಬಂದಿದೆ. ಇವರಿಗೆ ಆಂಜಿಯೋಗ್ರಾಂ ಆಪರೇಷನ್‌ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ. ಕನ್ನಡ ಸಿನಿಮಾ,ಟಿವಿ ಗಳಲ್ಲಿ ಹಾಸ್ಯನಟನಾಗಿ … Continued

ಟಿವಿ ಶೋಗೆ ಡಬ್ಬಿಂಗ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟ ನಟ-ನಿರ್ದೇಶಕ ಜಿ ಮಾರಿಮುತ್ತು

ಚೆನ್ನೈ: ಜನಪ್ರಿಯ ತಮಿಳು ನಟ ಮತ್ತು ನಿರ್ದೇಶಕ ಜಿ ಮಾರಿಮುತ್ತು ಅವರು ಇಂದು ಗುರುವಾರ (ಸೆಪ್ಟೆಂಬರ್ 8) ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು. ಶುಕ್ರವಾರ ಬೆಳಿಗ್ಗೆ 8:30 ರ ಸುಮಾರಿಗೆ ಅವರು ‘ಎಥಿರ್ ನೀಚಲ್’ ಎಂಬ ತಮ್ಮ ದೂರದರ್ಶನ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವಾಗ ಅವರು ಕುಸಿದುಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ … Continued

ಗುಂಡ್ಲುಪೇಟೆ : ಹೃದಯಾಘಾತದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

ಚಾಮರಾಜನಗರ: ಹದಿನೈದು ವರ್ಷದ ಎಸ್ಸೆಸ್ಸೆಲ್ಸಿ  ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತವಾಗಿ ಅಸುನೀಗಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್‌ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿನಿ ಫೆಲಿಶಾ (15) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಈಕೆ ಇಲ್ಲಿನ ಕ್ರೈಸ್ತ ಮಿಷನರಿ ಹಾಸ್ಟೆಲ್​ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿದ್ಯಾರ್ಥಿನಿ … Continued

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕಿನಲ್ಲಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ ವೇಳೆ ದುರಂತ ಸಂಭವಿಸಿದೆ ನಿನ್ನೆ ಬ್ಯಾಂಕಾಕ್ ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಪಂದನಾ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ … Continued

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಹೃದಯಾಘಾತದಿಂದ ನಿಧನ

ಬೆಂಗಳೂರು : ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್‌. ಧ್ರುವನಾರಾಯಣ ( (61)) ಹೃದಯಾಘಾತದಿಂದ ಶನಿವಾರ ಬೆಳಿಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಆರ್.ಧ್ರುವನಾರಾಯಣ ಅವರಿಗೆ ಶನಿವಾರ (ಮಾರ್ಚ್‌ 11) ಬೆಳಗ್ಗೆ 6:30ರ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ತಮ್ಮ ವೈದ್ಯರು ಹಾಗೂ ಕಾರು ಚಾಲಕನಿಗೆ ಕರೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. … Continued

ಕನ್ನಡದ ಹೆಸರಾಂತ ನಟ ಲಕ್ಷ್ಮಣ ಹೃದಯಾಘಾತದಿಂದ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹೆಸರಾಂತ ಖಳ ನಟ ಹಾಗೂ ಪೋಷಕ ನಟ ಲಕ್ಷ್ಮಣ ಹೃದಯಾಘಾತದಿಂದಾಗಿ ಇಂದು, ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂಧ ಬಳಲುತ್ತಿದ್ದ ಲಕ್ಷ್ಮಣ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು (ಜ.23) ಬೆಳಗ್ಗೆ ಸುಮಾರು … Continued

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕಾರು ಹತ್ತುವ ಮುನ್ನವೇ ಚಾಲಕನಿಗೆ ಹೃದಯಾಘಾತ, ಸಾವು

ಬೆಂಗಳೂರು: ಶನಿವಾರ ತಡರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರ ಕಾರು ಚಾಲಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜ್ಯಪಾಲರನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಆಗಮಿಸಿದ್ದ ಚಾಲಕ ರವಿಕುಮಾರ ಅವರಿಗೆ ರಾಜ್ಯಪಾಲರನ್ನು ಕರೆದೊಯ್ಯುವ ಮೊದಲೇ ಹೃದಯಾಘಾತವಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೂರ್ವನಿರ್ಧರಿತ ಶೆಡ್ಯೂಲ್‌ನಂತೆ ವಿಮಾನ ನಿಲ್ದಾಣಕ್ಕೆ … Continued