ಭಾರತದ ರಕ್ಷಣಾ ಬಜೆಟ್ ಶೇ. 15 ರಷ್ಟು ಹೆಚ್ಚಳ
ನವದೆಹಲಿ: ಭಾರತ ಸರ್ಕಾರವು 2026–27ರ ಹಣಕಾಸು ವರ್ಷಕ್ಕೆ ತನ್ನ ರಕ್ಷಣಾ ಬಜೆಟ್ ಅನ್ನು ಗಣನೀಯವಾಗಿ ಹೆಚ್ಚಿಸಿದೆ. ಸಶಸ್ತ್ರ ಪಡೆಗಳನ್ನು ಬಲಪಡಿಸಲು ಮತ್ತು ಮಿಲಿಟರಿ ಆಧುನೀಕರಣಕ್ಕೆ ವೇಗ ನೀಡಲು ಈ ಬಾರಿ 7.84 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಕಳೆದ ಬಜೆಟ್ ನೀಡಲಾದ 6.81 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ಶೇ. 15 ರಷ್ಟು ಹೆಚ್ಚಳವಾಗಿದೆ. … Continued