ವಿರೋಧದ ನಂತರ ರಾಮಾಯಣ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಿಬ್ಬಂದಿ ಕೇಸರಿ ಉಡುಪು ಹಿಂತೆಗೆದುಕೊಂಡ ಭಾರತೀಯ ರೈಲ್ವೆ

ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ವೇಟರ್‌ಗಳ ಕೇಸರಿ ಉಡುಗೆಯನ್ನು ಹಿಂದೂ ಸಂತರು ವಿರೋಧಿಸಿದ ನಂತರ, ಐಆರ್‌ಸಿಟಿಸಿ (IRCTC) ಸೇವಾ ಸಿಬ್ಬಂದಿಯ ಉಡುಪನ್ನು ವೃತ್ತಿಪರ ಉಡುಗೆಗೆ ಬದಲಾಯಿಸಿದೆ ಮತ್ತು ಉಂಟಾದ ಅನಾನುಕೂಲತೆಗೆ ವಿಷಾದಿಸಿದೆ. ಇದಕ್ಕೂ ಮೊದಲು, ಅಡುಗೆ ಬಡಿಸುವ ಮಾಣಿಗಳು ‘ಸಾಧು’ಗಳನ್ನು ಹೋಲುವ ರೀತಿ ಕೇಸರಿ ಸಮವಸ್ತ್ರ ಧರಿಸಿದ್ದರು, ಇದಕ್ಕೆ ಹಿಂದೂ ಸಂತ ಸಮುದಾಯದಿಂದ ವಿರೋಧವನ್ನು ಎದುರಿಸಬೇಕಾಯಿತು. … Continued