ಆಗಸ್ಟ್‌ 3ರಿಂದ ಬುದ್ದಿನ್ನಿಯಲ್ಲಿ ಕಣ್ವಮಠದ ಶ್ರೀಗಳ ಚಾತುರ್ಮಾಸ್ಯ

ಯಾದಗಿರಿ : ಜಿಲ್ಲೆಯ ಹುಣಸಿಹೊಳೆಯ ಕಣ್ವಮಠದ ಶ್ರೀ ವಿದ್ಯಾ ಕಣ್ವವಿರಾಜತೀರ್ಥ ಸ್ವಾಮಿಜಿಯವರು ತಮ್ಮ ಎರಡನೆಯ ಚಾತುರ್ಮಾಸ್ಯ ವ್ರತವನ್ನು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಕೈಗೊಳ್ಳಲಿದ್ದಾರೆ. ಕಣ್ವಮಠ ಸಂಸ್ಥಾಪಕರಾದ ಶ್ರೀ ಮಾಧವತೀರ್ಥರ ಮೂಲ ವೃಂದಾವನದ ಬುದ್ದಿನ್ನಿಯಲ್ಲಿ ಇದ್ದು, ಅವರ ಸಾನಿಧ್ಯದಲ್ಲಿ ಆಗಸ್ಟ್‌3ರಿಂದ ಚಾತುರ್ಮಾಸ್ಯದ ಸಂಕಲ್ಪ ವ್ರತ ಕೈಗೊಳ್ಳಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.