ಮೇ 10 ರಿಂದ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಆರಂಭ

ಬೆಂಗಳೂರು: ಮೇ 10ರಿಂದ ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಜನರಲ್, ಸರ್ ಸಿ.ವಿ.ರಾಮನ್ ಜನರಲ್, ಇಎಸ್‌ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 18-44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕೆ ವಿತರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಇತರ ಜಿಲ್ಲೆಗಳಲ್ಲಿ ಆರಂಭಿಕವಾಗಿ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ … Continued

ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಶನಿವಾರ 482 ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಉಲ್ಬಣ ಮುಂದುವರಿದ್ದು, ಶನಿವಾರ ಸೋಂಕಿಗೆ 482 ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47563 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,86,448ಕ್ಕೆ ಏರಿಕೆಯಾಗಿದೆ, ಒಟ್ಟು ಸಾವಿನ ಸಂಖ್ಯೆ 18,286ಕ್ಕೆ ಏರಿಕೆಯಾಗಿದೆ. ಶನಿವಾರ ಬೆಂಗಳೂರಿನಲ್ಲಿ 21534 ಜನರಿಗೆ ಕೊರೊನಾ ತಗುಲಿದ್ದು, 285 … Continued

ಕರ್ನಾಟಕದಲ್ಲಿ ಕೊರೊನಾದಿಂದ ಒಂದೇ ದಿನ 592 ಸಾವು..!

ಬೆಂಗಳೂರು:ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರ್ಭಟ ಮುಗಿಲುಮುಟ್ಟಿದ್ದು ಶುಕ್ರವಾರ 592 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 48781 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1838885ಕ್ಕೆ ಏರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 17,804ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಂಗಳೂರು ನಗರದಲ್ಲಿ 21376 ಜನರಿಗೆ ಹೊಸ ಕೊರೊನಾ ಸೋಂಕು ತಗುಲಿದ್ದು, 346 ಮಂದಿ … Continued

ಯುವಕರಲ್ಲಿ ಕೊರೊನಾ ಹೆಚ್ಚಾಗಲು ಈ ತಳಿಯೇ ಕಾರಣವಂತೆ..!

ಅಮರಾವತಿ: ಕೊರೊನಾ ವೈರಸ್ ಸಾಂಕ್ರಾಮಿಕವನ್ನು ವೇಗವಾಗಿ ಹರಡುವ B.1.617 ಮತ್ತು B.1 ರೂಪಾಂತರ ತಳಿಯು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕಗಳಲ್ಲಿ ಅತಿಹೆಚ್ಚು ಸೋಂಕಿತರಲ್ಲಿ ಪತ್ತೆಯಾಗಿದೆ. ಯುವಕರಲ್ಲಿ ಈ ತಳಿಯ ಸೋಂಕು ಅತಿ ವೇಗವಾಗಿ ಹರಡುತ್ತಿರುವ ಆತಂಕಕಾರಿ ವಿಷಯ ಗೊತ್ತಾಗಿದೆ. N440K, ರೂಪಾಂತರ ತಳಿ ಮೊದಲಿಗಿಂತ ತೀವ್ರವಾಗಿದೆ ಎಂಬ ಬಗ್ಗೆ ಸೆಲ್ಯುಲಾರ್ ಮತ್ತು ಆಣು ಜೀವಶಾಸ್ತ್ರ … Continued

ಕರ್ನಾಟಕದಲ್ಲಿ ಗುರುವಾರವೂ 50 ಸಾವಿರ ಸಮೀಪ ದೈನಂದಿನ ಕೊರೊನಾ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಗುರುವಾರ ರಾಜ್ಯಾದ್ಯಂತ 49058 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೇ ಸಮಯದಲ್ಲಿ 328 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1790104ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟು ಸಾವಿನ ಸಂಖ್ಯೆ 17212ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ 23706 ಜನರಿಗೆ ಕೊರೊನಾ ತಗುಲಿದ್ದು, 139 ಮಂದಿ … Continued

ಕರ್ನಾಟಕದಲ್ಲಿ ಅರ್ಧಶತಕ ಬಾರಿಸಿದ ಕೊರೊನಾ ಏಕದಿನದ ಸೋಂಕು..!

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ 50,112 ಪ್ರಕರಣಗಳೊಂದಿಗೆ ಕರ್ನಾಟಕವು ಒಂದೇ ದಿನದಲ್ಲಿ 50,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿ ದಾಖಲೆ ಮಾಡಿದೆ. ಇದು ಒಟ್ಟು ಪ್ರಕರಣಗಳನ್ನು ಅನ್ನು 17,41,046 ಕ್ಕೆ ಒಯ್ದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 346 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆಯೂ … Continued

ಕರ್ನಾಟಕದಲ್ಲಿ ಮಂಗಳವಾರವೂ 40 ಸಾವಿರ ದಾಟಿದ ಏಕದಿನದ ಸೋಂಕು,ಸಾವು ಹೆಚ್ಚಳ

ಬೆಂಗಳೂರು :ಕರ್ನಾಟಕದಲ್ಲಿ ಮಂಗಳವಾರ ಮತ್ತೆ ನಲವತ್ತು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 44631 ಜನರಿಗೆ ಕೊರೊನಾ ಸೋಂಕು ದಾಖಲಾದ ವರದಿಯಾಗಿದೆ. ಇದೇ ಸಮಯದಲ್ಲಿ 292 ಸೋಂಕಿತರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ 16538 ಜನರು ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 24714 ಜನರು ಗುಣಮುಖರಾಗಿ … Continued

ಸರ್ಕಾರದ ಮಹತ್ವದ ನಿರ್ಧಾರ…ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ… ಪ್ರಥಮ ಪಿಯು ವಿದಾರ್ಥಿಗಳು ಪರೀಕ್ಷೆ ಇಲ್ಲದೆ ತೇರ್ಗಡೆ

ಬೆಂಗಳೂರು : ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು … Continued

ಕರ್ನಾಟಕದಲ್ಲಿ ಸೋಮವಾರ ಮತ್ತೆ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 44,438 ಏಕದಿನದ ಕೊರೊನಾ ಪ್ರಕರಣಗಳು ವರದಿಯಾಗಿದೆ.ಇದೇ ಸಮಯದಲ್ಲಿ ರಾಜ್ಯದಲ್ಲಿ 239 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16,46,303ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16,250ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಸೋಮವಾರ … Continued

ಕರ್ನಾಟಕದಲ್ಲಿ ಭಾನುವಾರವೂ ನಲವತ್ತು ಸಾವಿರ ಕೆಳಗೆ ದಾಖಲಾದ ದೈನಂದಿನ ಕೊರೊನಾ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ದೈನಂದಿನ ಸೋಂಕಿತರ ಸಂಖ್ಯೆ ನಲವತ್ತು ಸಾವಿರ ಒಳಗೆ ಬಂದಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 37,733 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಹಾಗೂ ಇದೇ ವೇಳೆ 21,149 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 1164398 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ, 421436 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 217 ಮಂದಿ ಮೃತಪಟ್ಟಿದ್ದಾರೆ. … Continued