ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ವೈದ್ಯ ಹುದ್ದೆ ತೊರೆದ ಸಂಸದ ಶ್ರೀನಿವಾಸ್ ಪ್ರಸಾದ ಅಳಿಯ…!

ಚಾಮರಾಜನಗರ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದ ಶ್ರೀನಿವಾಸ ಪ್ರಸಾದ ಅವರ ಅಳಿಯ ತಮ್ಮ ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಸಂಸದ ವಿ.ಶ್ರೀನಿವಾಸಪ್ರಸಾದ ಅವರ ಅಳಿಯ ಡಾ.ಎನ್‌ಎಸ್ ಮೋಹನ ಬೆಂಗಳೂರು ಸಂಜಯ ಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗು ಪ್ರಾಧ್ಯಾಪಕರಾಗಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್‌ … Continued

ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 328 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ (ಕಳೆದ 24 ಗಂಟೆಗಳಲ್ಲಿ) ಹೊಸದಾಗಿ 328 ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದೇವೇಳೆಸೋಂಕಿನಿಂದ ಗುಣಮುಖರಾಗಿ 409 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1159ಕ್ಕೆ ಏರಿಕೆಯಾಗಿದೆ. ರಾಜ್ಯದಾದ್ಯಂತ ಶುಕ್ರವಾರ ಒಟ್ಟು 7205 ಮಂದಿಗೆ ಕೋವಿಡ್‌ 19 ಪರೀಕ್ಷೆ … Continued

ʼಯುವನಿಧಿ ಯೋಜನೆʼಗೆ ಈವರಗೆ 32 ಸಾವಿರ ಅರ್ಜಿ ಸಲ್ಲಿಕೆ : ಬೆಳಗಾವಿ, ಬೆಂಗಳೂರಲ್ಲಿ ಹೆಚ್ಚು

ಬೆಂಗಳೂರು : ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪಾಸಾದವರಿಗೆ ಭತ್ಯೆ ನೀಡುವ “ಯುವನಿಧಿ ಯೋಜನೆ” ಚಾಲನೆ ಸಿಕ್ಕಿದ್ದು, ಅರ್ಜಿಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿವೆ. ಆರಂಭವಾದ ಸುಮಾರು 10 ದಿನಗಳಲ್ಲಿ ಈವರೆಗೆ ಒಟ್ಟು 32,184 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಜನವರಿ 12ರಂದು ಶಿವಮೊಗ್ಗದಲ್ಲಿ ನಡೆಯುವ ವಿಶೇಷ … Continued

ಕರ್ನಾಟಕದಲ್ಲಿ ಗುರುವಾರ 298 ಮಂದಿಗೆ ಕೋವಿಡ್‌ ಸೋಂಕು, ನಾಲ್ವರು ಸಾವು

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ 298 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೂ ನಾಲ್ವರು ಮೃತಪಟ್ಟಿದ್ದಾರೆ ಎಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1240ಕ್ಕೆ ಏರಿಕೆಯಾಗಿದೆ. ಇದೇವೇಳೆ ಕೋವಿಡ್ ನಿಂದ 229 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರ ಕಾಲ ಮಳೆ ಸಾಧ್ಯತೆ : ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಒಂದು ವಾರ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು … Continued

ಕರ್ನಾಟಕದಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ದೃಢ; ಒಂದು ಸಾವು

ಬೆಂಗಳೂರು: ರಾಜ್ಯದಲ್ಲಿ ಸೋಮವಾರ (ಜನವರಿ 1) 296 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಹಾಗೂ ಒಬ್ಬರು ಸಾವು ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಲಾಖೆ ಹೊರಡಿಸಿದ ಕೋವಿಡ್ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಒಟ್ಟು 1,245 ಸಕ್ರಿಯ ಕೋವಿಡ್ ಸೋಂಕಿತರಿದ್ದು, ಇದೇವೇಳೆ 50 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ರೋಗಿಗಳಲ್ಲಿ, 1,179 ಮಂದಿ ಮನೆ ಪ್ರತ್ಯೇಕತೆಯಲ್ಲಿದ್ದು, 66 … Continued

ನನ್ನನ್ನು ರಾಜಕೀಯವಾಗಿ ಮುಗಿಸಲು ದೊಡ್ಡ ಪಿತೂರಿ ನಡೆಯುತ್ತಿದೆ : ಡಿ.ಕೆ.ಶಿವಕುಮಾರ

ಬೆಂಗಳೂರು : ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದೊಡ್ಡ ಪಿತೂರಿ ನಡೆಯುತ್ತಿದೆ. ಸರ್ಕಾರ ಈಗಾಗಲೇ ಕೇಸ್ ವಿತ್‍ಡ್ರಾ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೋಟಿಸ್ ನೀಡಿದೆ. ಪ್ರಕರಣದ ತನಿಖೆಗೆ ನೀಡಿದ ಅನುಮತಿಯನ್ನು … Continued

ಕರ್ನಾಟಕದಲ್ಲಿ ಶನಿವಾರ 201 ಮಂದಿಗೆ ಕೋವಿಡ್‌ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 201 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಹಾಗೂ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 833ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಶನಿವಾರ ರಾಜ್ಯದಲ್ಲಿ 7060 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಧನಾತ್ಮಕತೆ ಪ್ರಮಾಣ ಶೇ. 2.84 ರಷ್ಟು ಇದೆ. ಬೆಂಗಳೂರಿನಲ್ಲಿ 2095 … Continued

ಕರ್ನಾಟಕದಲ್ಲಿ ಶುಕ್ರವಾರ 173 ಜನರಿಗೆ ಕೊರೊನಾ ಸೋಂಕು, ಇಬ್ಬರು ಸಾವು

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 173 ಕೋವಿಡ್ -19 ಸೋಂಕು ಪ್ರಕರಣಗಳು ದಾಖಲಾಗಿದ್ದು, ಎರಡು ಕೊರೊನಾ ವೈರಸ್ ಸಂಬಂಧಿತ ಸಾವುಗಳು ವರದಿಯಾಗಿವೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಶುಕ್ರವಾರ ಹೊಸದಾಗಿ 173 ಕೋವಿಡ್ -19 ಸೋಂಕು ಪ್ರಕರಣಗಳ ದಾಖಲಾತಿಯೊಂದಿಗೆ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 702ಕ್ಕೆ ಏರಿದೆ. ಈ ಪೈಕಿ 649 … Continued

ಕರ್ನಾಟಕದಲ್ಲಿ ಗುರುವಾರ 158 ಮಂದಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 158 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. ಇದೇವೇಳೆ 69 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 568ಕ್ಕೆ ತಲುಪಿದೆ. 514 ಮಂದಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. 54 … Continued